ವಿದ್ಯುತ್‌ ಇಲ್ಲದೆ ಬಾಧಿತರಾಗಿರುವ 10 ದಶಲಕ್ಷ ಉಕ್ರೇನಿಯನ್ನರು : ಝೆಲೆನ್ಸ್ಕಿ

ಉಕ್ರೇನ್‌: ರಷ್ಯಾ ಉಕ್ರೇನ್‌ ಮೇಲೆ ಮಾಡಿದ ದಾಳಿಯ ಪರಿಣಾಮವಾಗಿ ಹತ್ತು ದಶಲಕ್ಷಕ್ಕೂ ಹೆಚ್ಚು ಉಕ್ರೇನಿಯನ್ನರು ವಿದ್ಯುತ್‌ ಸಂಪರ್ಕವಿಲ್ಲದೆ ಭಾದಿತರಾಗಿದ್ದಾರೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ಗುರುವಾರ ಮಾತನಾಡಿದ್ದಾರೆ.

ಉಕ್ರೇನಿನಾದ್ಯಂತ ನಗರಗಳ ಮೇಲೆ ದಾಳಿ ನಡೆಸಿದ್ದ ರಷ್ಯಾ, ಉಕ್ರೇನಿನ ಇಂಧನ ಮೂಲಸೌಕರ್ಯವನ್ನೂ ದುರ್ಬಲಗೊಳಿಸಿದೆ. ಇದರಿಂದ ಪ್ರಸ್ತುತ ಹತ್ತು ದಶಲಕ್ಷ ಉಕ್ರೇನಿನ ಜನರಿಗೆ ವಿದ್ಯುತ್‌ ಸಂಪರ್ಕ ಇಲ್ಲದಂತಾಗಿದೆ ಎಂದು ತಿಳಿಸಿದ್ದಾರೆ.

ಒಡೆಸ್ಸಾ, ವಿನ್ನಿಟ್ಸಿಯಾ, ಸುಮಿ ಮತ್ತು ಕೀವ್‌ ಪ್ರದೇಶಗಳು ಈ ಕಾರಣದಿಂದ ಹೆಚ್ಚು ಬಾಧಿತ ಪರಿಸ್ಥಿತಿಯಲ್ಲಿದೆ ಎಂದು ಹೇಳಿದ್ದಾರೆ.

ಉಕ್ರೇನ್‌ನಲ್ಲಿ ವಿದ್ಯುತ್‌ ಮೂಲಸೌಕರ್ಯಕ್ಕೆ ಆಗಿರುವ ಹಾನಿಯು ಎಷ್ಟರ ಮಟ್ಟಿಗೆ ವ್ಯಾಪಕವಾಗಿದೆಯೆಂದರೆ , ಇದಕ್ಕೆ ಸಂಬಂಧಪಟ್ಟ  ಅಧಿಕಾರಿಗಳು ಗ್ರಿಡ್‌ ಅನ್ನು ನಿವಾರಿಸಲು ಅಲ್ಲಿನ ವಿದ್ಯುತ್‌ ಅನ್ನು ಕಡಿತಗೊಳಿಸುತ್ತಿದ್ದಾರೆ ಎಂದು ಮಾತನಾಡಿದ್ದಾರೆ.

ಈ ಭಾದಿತ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆ ಮಾಡಲು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಕೀವ್‌ನ ಅಧಿಕಾರಿಗಳು ಮೊದಲು ಬೀಳುವ ಹಿಮದಿಂದ ಅಪಾಯ ಉಂಟಾಗಬಹುದೆಂದು ಮುಂದಿನ ದಿನಗಳ ಬಗ್ಗೆ ಎಚ್ಚರಿಕೆ ನೀಡಿದ್ದು, ಈ ಕುರಿತು ಉಕ್ರೇನ್‌ ನಗರಗಳ ಎಎಫ್‌ಪಿ ಪತ್ರಕರ್ತರು ವರದಿಯಲ್ಲಿ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು