1,026 ಕೋಟಿ ರೂ ಮೌಲ್ಯದ ಎಂಡಿ ಡ್ರಗ್ಸ್‌ ವಶ

ಗುಜರಾತ್‌: ಮುಂಬೈ ಆಂಟಿ ನಾರ್ಕೋಟಿಕ್ ಸೆಲ್‌ನ ವರ್ಲಿ ಘಟಕವು ಗುಜರಾತ್‌ನ ಭರೂಚ್ ಜಿಲ್ಲೆಯ ಅಂಕಲೇಶ್ವರ ಪ್ರದೇಶದಲ್ಲಿ ಡ್ರಗ್ಸ್ ಕಾರ್ಖಾನೆಯನ್ನು ಭೇದಿಸಿದ್ದು, ಸುಮಾರು 513 ಕೆಜಿ ಎಂಡಿ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದೆ.

ವಶಪಡಿಸಿಕೊಂಡಿರುವ ಮಾದಕ ವಸ್ತುಗಳ ಮೌಲ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 1,026 ಕೋಟಿ ರೂ ನಷ್ಟಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಒರ್ವ ಮಹಿಳೆ ಸೇರಿದಂತೆ 7 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆಂದು ಸುದ್ದಿ ಸಂಸ್ಥೆ ಎಎನ್‌ಐ ವರದಿಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು