Friday, November 21, 2025

ಸತ್ಯ | ನ್ಯಾಯ |ಧರ್ಮ

ಹಾಸನ ಜಿಲ್ಲೆಯಲ್ಲಿ 14.14 ಕೋಟಿ ಮಹಿಳೆಯರು ಶಕ್ತಿ ಯೋಜನೆಯಲ್ಲಿ ಉಚಿತವಾಗಿ ಪ್ರಯಾಣ

ಹಾಸನ : ರಾಜ್ಯ ಸರ್ಕಾರಿ ಸ್ವಾಮ್ಯದ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿರುವ ಶಕ್ತಿ ಯೋಜನೆಯು ಮಹಿಳೆಯರನ್ನು ಮುಖ್ಯವಾಹಿನಿಗೆ ತಂದು ಪುರುಷರಿಗೆ ಸಮಾನವಾಗಿ ನಿಲ್ಲುವಂತೆ ಮಾಡುವ ಪ್ರಯತ್ನಕ್ಕೆ ಈ ಶಕ್ತಿ ಯೋಜನೆಯೂ ಸಹಕಾರಿಯಾಗಿದೆ. ಶಕ್ತಿ ಯೋಜನೆ ನಿಜಕ್ಕೂ ಮಹಿಳೆಯರಲ್ಲಿ ಶಕ್ತಿ ತುಂಬಿದೆ. ಇದರಿಂದ ಮಹಿಳೆಯರಿಗೆ ತುಂಬಾ ಅನುಕೂಲವಾಗಿದೆ. ಖಾಸಗಿ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಬಹಳಷ್ಟು ಅನೂಕೂಲವಾಗಿದೆ ಪ್ರಯಾಣದರವನ್ನು ಭರಿಸಲು ಒಂದೊತ್ತಿನ ಊಟವನ್ನೇ ತೊರೆಯುವ ಪರಿಸ್ಥಿತಿ ಇತ್ತು. ಈಗ ಶಕ್ತಿ ಯೋಜನೆಯಿಂದ ಎಲ್ಲಾ ಮಹಿಳೆಯರು ನೆಮ್ಮದಿಯಿಂದ ಪ್ರಯಾಣಿಸಲು ಸಾಧ್ಯವಾಗಿದೆ. ಕರ್ನಾಟಕ ರಾಜ್ಯದ ನಿವಾಸಿ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನಗರ ಸಾರಿಗೆ, ಸಾಮಾನ್ಯ ಮತ್ತು ವೇಗದೂತ ಬಸ್ಸುಗಳಲ್ಲಿ ರಾಜ್ಯಾದ್ಯಂತಉಚಿತವಾಗಿ ಪ್ರಯಾಣಿಸಲು ಶಕ್ತಿ ಯೋಜನೆ ಅವಕಾಶ ಕಲ್ಪಿಸಿದೆ.

ರಾಜ್ಯದಲ್ಲಿ ಪ್ರತಿ ದಿನ ಸರಾಸರಿ 50 ರಿಂದ 60 ಲಕ್ಷ ಮಹಿಳಾ ಪ್ರಯಾಣಿಕರಿಗೆ ಈ ಯೋಜನೆಯಿಂದ ಅನುಕೂಲವಾಗುತ್ತಿದೆ. ಮಹಿಳೆಯರು ದೂರದ ಪಟ್ಟಣಗಳಿಗೆ ತೆರಳಿ ಹೆಚ್ಚಿನ ಆದಾಯದ ಉದ್ಯೋಗ ಹೊಂದಲು ಸಹಕಾರಿಯಾಗಿದೆ. ರಮ್ಯ ಎಂಬ ವಿದ್ಯಾರ್ಥಿನಿ ಮಾಧ್ಯಮದೊಂದಿಗೆ ಮಾತನಾಡುತ್ತಾ ತುಮಕೂರಿನಲ್ಲಿ ವಿದ್ಯಾಭ್ಯಾಸ ಮಾಡುವಾಗ ಉಚಿತ ಬಸ್ ಯೋಜನೆಯಿಂದ ತುಮಕೂರಿಗೆ ಪ್ರಯಾಣಿಸುವಾಗ ಬಹಳ ಅನುಕೂಲವಾಗಿದೆ, ಬಡ ಮಧ್ಯಮ ಕುಟುಂಬದ ಮಕ್ಕಳಾದ ನಾವುಗಳು ಪ್ರಯಾಣದ ಹಣಕ್ಕಾಗಿ ಆಲೋಚಿಸಬೇಕಾಗಿತ್ತು ರಜೆ ಸಮಯವು ಊರಿಗೆ ಬಂದು ಹೋಗುವುದ ಕ್ಕೂ ಚಿಂತಿಸಬೇಕಾಗಿತ್ತು. ಆದರೆ ಸರ್ಕಾರ ಉಚಿತ ಬಸ್ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿರುವುದು ಬಹಳ ಅನುಕೂಲವಾಗಿದೆಶಕ್ತಿ ಯೋಜನೆಯಿಂದ ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗಿ ಮುನ್ನೇಲೆಗೆ ಬರುತ್ತಿದ್ದು, ಗ್ರಾಮಾಂತರ ಪ್ರದೇಶಗಳಿಂದ ನಗರಕ್ಕೆ ಬಂದುದುಡಿಯುವ ಮಹಿಳೆಯರಿಗೆ ಶಕ್ತಿ ಯೋಜನೆಯೂ ವರವಾಗಿದೆ ಎಂದರೆ ತಪ್ಪಾಗಲಾರದು. ನಾನು ಹಳ್ಳಿಯಿಂದ ಹಳ್ಳಿಗೆ ಓಡಾಡಿಕೊಂಡುದಟ್ಟವನ್ನು ಹೊಲಿಯುವ ಕೆಲಸ ಮಾಡುತ್ತಿದ್ದು ಬಸ್ಸಿನಲ್ಲಿ ಟಿಕೆಟ್‌ಇಲ್ಲದೆ ಫ್ರೀಯಾಗಿ ಹೋಗುತ್ತಿರುವುದರಿಂದ ತುಂಬಾ ಅನುಕೂಲವಾಗಿದೆ ದುಡಿಮೆಯಲ್ಲಿ ಸ್ವಲ್ಪ ಹಣ ಉಳಿಯುವಂತಾಗಿದೆ ಎಂದು ಸಾಮಾನ್ಯ ಮಹಿಳೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಹಾಸನ ಜಿಲ್ಲೆಯಲ್ಲಿ 8 ತಾಲ್ಲೂಕುಗಳಿದ್ದು ಹಾಸನ,ಆಲೂರು, ಅರಕಲಗೂಡು, ಚನ್ನರಾಯಪಟ್ಟಣ, ಹೊಳೆನರಸೀಪುರ ತಾಲ್ಲೂಕುಗಳು ಹಾಸನ ವಿಭಾಗಕ್ಕೆ ಹಾಗೂ ಸಕಲೇಶಪುರ, ಬೇಲೂರು, ಅರಸೀಕೆರೆ ತಾಲ್ಲೂಕುಗಳು ಚಿಕ್ಕಮಗಳೂರು ವಿಭಾಗಳ ವ್ಯಾಪ್ತಿಗೆ ಬರುತ್ತದೆ.ಶಕ್ತಿ ಯೋಜನೆ ಪ್ರಾರಂಭವಾದ 2023 ಜೂನ್ 11 ರಿಂದ 2025 ಮೇ 15 ರ ವರೆಗೆ ಹಾಸನ ಜಿಲ್ಲೆಯಲ್ಲಿ ಸಾಮಾನ್ಯ, ನಗರ ಹಾಗೂ ವೇಗದೂತ ಬಸ್ಸುಗಳಲ್ಲಿ ಪ್ರಯಾಣಿಸಿದ 14.14 ಕೋಟಿ ಮಹಿಳೆಯರಿಗೆ ಶೂನ್ಯ ಟಿಕೆಟ್‌ಅನ್ನು ನೀಡಲಾಗಿದೆ. ಹಾಸನ ವಿಭಾಗಕ್ಕೆ 472.70ಕೋಟಿ ರೂಪಾಯಿ ಆದಾಯ ಲಭಿಸಿದೆ.ಪ್ರತಿ ನಿತ್ಯ ಅಂದಾಜು 67ರೂ ಲಕ್ಷ ಆದಾಯವಾಗುತ್ತಿದ್ದು, 2 ಲಕ್ಷ ಮಹಿಳೆಯರು ಶಕ್ತಿ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.

ಶಕ್ತಿ ಯೋಜನೆಯಿಂದ ದಿನ ನಿತ್ಯದ ಕೂಲಿಗೆ ತರಳುವ ಮಹಿಳೆಯರಿಗೆ, ಕೆಲಸಗಳಿಗೆ ಹೋಗುವ ಮಹಿಳೆಯರಿಗೆ ಸಹಕಾರಿಯಾಗಿದೆ, ವಿದ್ಯರ‍್ಥಿನಿಯರಿಗೆ ತಮ್ಮ ವಿದ್ಯಾಭ್ಯಾಸಕ್ಕೆ ಹೆಚ್ಚು ಅನುಕೂಲವಾಗಿದೆ. ಇನ್ನು ಕೆಲವರು ಈ ಯೋಜನೆ ಬಿಪಿಎಲ್‌ ಮತ್ತು ಕಡು ಬಡವರಿಗೆ ಮಾತ್ರ ನೀಡಿದ್ದರೆ ಅನುಕೂಲವಾಗುತ್ತಿತ್ತು ಎಂದು ಅಭಿಪ್ರಾಯ ಪಡುತ್ತಿದ್ದಾರೆ. ಇನ್ನು ರ‍್ಕಾರಿ ಕೆಲಸದಲ್ಲಿರುವ ಮಹಿಳೆಯರಿಗೆ ಈ ಯೋಜನೆ ಬೇಡವಾಗಿತ್ತು ಮತ್ತು ರ‍್ಥಿಕವಾಗಿ ಆದಾಯ ಹೆಚ್ಚಾಗಿರುವವರಿಗೆ ಅಗತ್ಯ ಇರಲಿಲ್ಲ ಎಂದು ಜನ ಸಾಮಾನ್ಯರ ಮಾತಾಗಿದೆ. ಏನೆ ಆದರು ರ‍್ಕಾರದ ಇಂತಹ ಯೋಜನೆಗಳು ಯಶಸ್ವಿಯಾಗುವುದು ಮತ್ತು ಸಾರಿಗೆ ಇಲಾಖೆಗೆ ಲಾಭದಾಯಕವಾಗುತ್ತಿರುವುದು ಸಂತಸದ ಸಂಗತಿಯಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page