Wednesday, October 8, 2025

ಸತ್ಯ | ನ್ಯಾಯ |ಧರ್ಮ

ಯುವರಾಜ್‌ ಸಿಕ್ಸರ್‌ ಸಂಭ್ರಮಕ್ಕೆ 15 ವರ್ಷ

ಈ ದಿನ  ಕ್ರಿಕೆಟ್‌ ಪ್ರೇಮಿಗಳಿಗೆ, ಯುವ ಕ್ರಿಕೆಟ್‌ ಆಟಗಾರರಿಗೆ ಕ್ರಿಕೆಟ್‌ ಲೋಕದಲ್ಲೇ ಹೊಸ ದಾಖಲೆ ಸೃಷ್ಟಿಸಿ, ಇಡೀ ಜಗತ್ತೇ ಕ್ರಿಕೆಟ್‌ ಕಡೆ ಮುಖಮಾಡಿ ನೋಡುವಂತೆ ಮಾಡಿದ ಹೆಮ್ಮೆ ಭಾರತೀಯ ಸ್ಟೈಲಿಷ್‌ ಬ್ಯಾಟ್ಸ್‌ಮನ್ ‌ʼಸಿಕ್ಸರ್‌ ಸಿಂಗ್ʼ ಖ್ಯಾತಿಯ ಯುವರಾಜ್‌ ಸಿಂಗ್‌ ಅವರಿಗೆ ಸಲ್ಲುತ್ತದೆ.

15 ವರ್ಷದ ಹಿಂದೆ ಇದೇ ದಿನ ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ನಡೆದ ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತೀಯ ತಂಡ ಕಣಕ್ಕಿಳಿದಿತ್ತು. ಆಗ ಭಾರತ ತಂಡ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತ್ತು.

ಈ ವೇಳೆ ಎಂದಿನಂತೆ ಮೊದಲು ಬ್ಯಾಟಿಂಗ್‌ಗೆ ಇಳಿದ ಓಪನರ್‌ಗಳು ಉತ್ತಮ ಆರಂಭದೊಂದಿಗೆ ತಂಡವನ್ನು ಮುನ್ನಡೆಸಿದರು, ವೀರೇಂದ್ರ ಸೆಹ್ವಾಗ್‌ (68) ಗೌತಮ್‌ ಗಂಭೀರ್‌ (58) ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ನಂತರ ಸ್ಕ್ರೀಜ್‌ ಗೆ ಇಳಿದ ರಾಬಿನ್‌ ಉತ್ತಪ್ಪ  ನಾಲ್ಕು ಎಸೆತಗಳಿಗೆ ಆರು ರನ್‌ ಗಳಿಸಿ ಟ್ರೆಮ್ಲೆಟ್ ಬಾಲಿಗೆ ವಿಕೆಟ್‌ ಒಪ್ಪಿಸಿದರು. ಅಷ್ಟರಲ್ಲಿ ಮಹೆಂದ್ರ ಸಿಂಗ್‌ ದೋನಿ ಒಂದೆರೆಡು ಎಸೆತಗನ್ನು ಎದರುರಿಸಿ ಒಂದೆರಡು ರನ್‌ಗಳಿಸಿದ್ದರು. ಆಗ ಭಾರತ ತಂಡ 16 ಓವರ್ಗಳಲ್ಲಿ 150 ರನ್‌ ಗಳಿಸಿತ್ತು.

ಈ ಸಮಯದಲ್ಲಿ ಸ್ಕ್ರೀಜ್‌ ಗೆ ಬಂದ ಯುವ ಆಟಗಾರ ಯುವರಾಜ್‌ ಸಿಂಗ್‌ 17 ನೇ ಓವರ್‌ ನಲ್ಲಿ ಆಂಡ್ರ್ಯೂ ಫ್ಲಿಂಟಾಫ್ ಬೌಲಿಂಗ್‌ಗೆ ಬೌಂಡರಿ ಸಿಡಿಸಲು ಮುಂದಾದರು ಇದರಿಂದ ತಳಮಳಗೊಂಡ ಫ್ಲಿಂಟಾಫ್ ಯುವರಾಜ್‌ ಸಿಂಗ್‌ ಅವರನ್ನು ಕೆಣಕಲು ಮುಂದಾದರು. ಈ ವೇಳೆ ಕುಪಿತಗೊಂಡ ಯುವಿ, ಬ್ಯಾಟಿಂಗ್‌ ಮೂಲಕ ಉತ್ತರ ನೀಡಲು ಮುಂದಾದರು. ನಂತರ ಬಂದ  ಇಂಗ್ಲೆಂಡ್ ಬಲಗೈ ವೇಗಿ ಸ್ಟುವರ್ಟ್ ಬ್ರಾಡ್  ಬೌಲಿಂಗ್‌ ನ 18 ನೇ ಓವರ್‌ ದಾಳಿಯಲ್ಲಿ 6 ಬಾಲಿಗೆ 6 ಸಿಕ್ಸರ್‌ಗಳಿಸಿ ಭಾರತೀಯ ಕ್ರಿಕೆಟ್‌ ಆಟಗಾರರನ್ನು ಕೆಣಕಿದರೆ ಏನಾಗುತ್ತೆದೆ ಎಂದು ತೋರಿಸಿ ಕೊಟ್ಟರು.

https://fb.watch/fD-ouDoLiD/

ಆ ದಿನ ಯುವರಾಜ್‌ ಸಿಂಗ್‌ ದಾಖಲೆ ಮೇಲೆ ದಾಖಲೆ ಸೃಷ್ಟಿಸಿದ್ದು, ಪಂದ್ಯದಲ್ಲಿ 12 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಕ್ರಿಕೆಟ್‌ ಪ್ರೇಮಿಗಳ ನೆಚ್ಚಿನ ಆಟಗಾರ ಎಂದೆನಿಸಿಕೊಂಡಿದ್ದರು. ಈ ಪಂದ್ಯದಲ್ಲಿ ಭಾರತೀಯ ತಂಡ 18 ರನ್‌ಗಳ ಜಯಗಳಿಸಿದ್ದು, ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಯುವರಾಜ್‌ ಸಿಂಗ್‌ ತಮ್ಮದಾಗಿಸಿಕೊಂಡಿದ್ದರು.

ಯುವರಾಜ್‌ ಸಿಂಗ್‌ ಸ್ಟುವರ್ಟ್ ಬ್ರಾಡ್ ಬೌಲಿಂಗ್‌ ದಾಳಿಗೆ ಆರು ಎಸೆತಕ್ಕೆ ಆರು ಸಿಕ್ಸ್‌ ಗಳಿಸಿದ ಕ್ಷಣ

ಅಂದಿನ ಈ ಸಾಧನೆ ಅಂದು ಮತ್ತು ಇಂದಿನ ಯುವಕರಿಗೆ, ಕ್ರೀಡಾ ಪ್ರೇಮಿಗಳಿಗೆ ಸ್ಪೂರ್ತಿಯಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page