Sunday, June 16, 2024

ಸತ್ಯ | ನ್ಯಾಯ |ಧರ್ಮ

18ನೇ ತಾರೀಖಿನ ಟೋಲ್‌ ಮುತ್ತಿಗೆ ಪ್ರತಿಭಟನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ: ವಕೀಲ ದಿನೇಶ್‌ ಹೆಗ್ಡೆ ಉಳೆಪಾಡಿ

ಮಂಗಳೂರು: ಸುರತ್ಕಲ್‌ ಟೋಲ್‌ ಗೇಟಿಗೆ ಸಂಬಂಧಿಸಿದ ಪ್ರತಿಭಟನೆಯು ದಿನದಿಂದ ದಿನಕ್ಕೆ ಕಾವೇರುತ್ತಿದ್ದು, ಅದರ ಬಿಸಿ ಆಡಳಿತಕ್ಕೆ ತಟ್ಟುತ್ತಿರುವುದರ ಸೂಚನೆಯೂ ದೊರಕಿದೆ. ನಿನ್ನೆ ತಡರಾತ್ರಿ ಪ್ರತಿಭಟನೆಯ ಮುಂಚೂಣಿಯಲ್ಲಿರುವ ನಾಯಕರ ಬಂಧನಕ್ಕೆ ಆಡಳಿತ ಪ್ರಯತ್ನಿಸಿದ್ದು ಇದರ ಒಂದು ಭಾಗ ಎನ್ನುವುದು ಎಂತಹವರಿಗೂ ಅರ್ಥವಾಗುವ ಸಂಗತಿಯಾಗಿದೆ.

ನಿನ್ನೆಯ ದಾಳಿಯ ಹಿನ್ನೆಲೆಯಲ್ಲಿ ಸಾಮಾಜಿಕ ಹೋರಾಟಗಾರ ಮತ್ತು ವಕೀಲರೂ ಆಗಿರುವ ದಿನೇಶ್‌ ಹೆಗ್ಡೆ ಉಳೆಪಾಡಿ ತಮ್ಮ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಅವರು ತಮ್ಮ ಹೇಳಿಕೆಯಲ್ಲಿ ಆಡಳಿದ ಯಾವುದೇ ದಬ್ಬಾಳಿಕೆಗೂ ಜಗ್ಗದೆ ಹೋರಾಟವನ್ನು ನಿಗದಿತ ದಿನದಂದು ನಡೆಸಿಯೇ ನಡೆಸುತ್ತೇವೆ ಎಂದಿದ್ದಾರೆ.

ಅವರ ಹೇಳಿಕೆ ಈ ಕೆಳಗಿನಂತಿದೆ.

ನಾವು ನಿರೀಕ್ಷಿಸಿದಂತೆ ಸುರತ್ಕಲ್ ನ ಅಕ್ರಮ ಟೋಲ್ ಗೇಟ್ ವಿರುದ್ಧದ ಹೋರಾಟವನ್ನು ನಿಲ್ಲಿಸಲು ಪೊಲೀಸರು ಶತಾಯ ಗತಾಯ ಪ್ರಯತ್ನಿಸುತ್ತಿದ್ದಾರೆ.
ನಾಗರಿಕರು ಹೋರಾಟ ಮಾಡುವಾಗ ಜನಪ್ರತಿನಿಧಿಗಳು ಬಂದು ಸಮಸ್ಯೆಯನ್ನು ಪರಿಹಾರಕ್ಕೆ ಪ್ರಯತ್ನಿಸ ಬೇಕಿತ್ತು.
ಜಿಲ್ಲೆಯ ಜನರು ಅಕ್ರಮ ಟೋಲ್ ಗೇಟ್ ತೆಗೆಯಿರಿ ಎಂದು ಪ್ರಜಾಸಾತ್ತಾತ್ಮಕ ರೀತಿಯಲ್ಲಿ ಬೇಡಿಕೆ ಇಟ್ಟರೆ, ನಮ್ಮ ಶಾಸಕರುಗಳು ಜನರ ಎದುರು ಬರಲು ಧೈರ್ಯ ಇಲ್ಲದೆ ಪೊಲೀಸರನ್ನು ಛೂ ಬಿಡುತ್ತಿದ್ದಾರೆ.
ಪೋಲೀಸರ ಮುಖಾಂತರ ಹೂರಾಟಗಾರರನ್ನು ಕರೆದು ರಾಜಿ ಸಂಧಾನಕ್ಕೆ ಪ್ರಯತ್ನಿಸುತ್ತಾರೆ.
ಪೋಲೀಸರ ಮೂಲಕ ಸಮಯವಕಾಶ ಕೋರುತ್ತಾರೆ.
ಅದ್ಯಾವುದಕ್ಕೂ ಬಗ್ಗದೆ ಇದ್ದಾಗ ಪೋಲೀಸರ ಮೂಲಕ ಶಾಂತಿ ಭಂಗ ಆಗುತ್ತಿದೆ ಎಂದು ನೆಪ ಒಡ್ಡಿ ಹೋರಾಟಗಾರರ ಮನೆಗೆ ರಾತ್ರಿ ಹನ್ನೆರಡು ಗಂಟೆಗೆ ಪೊಲೀಸರನ್ನು ಕಳಿಸಿ section 107 crpc ನೋಟೀಸ್ ಜ್ಯಾರಿಗೊಳಿಸುತ್ತಾರೆ.
ಹೋರಾಟಗಾರರು ಇಂತಹ ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ.
ಅಕ್ರಮ ಟೋಲ್ ಗೇಟ್ ನಿಲ್ಲಲೇ ಬೇಕು.
ಶಾಸಕರುಗಳು ಅಕ್ರಮ ಟೋಲ್ ಗೇಟ್ ರಕ್ಷಿಸಲು ಕಟ್ಟಿಬದ್ದಾರಾಗಿ ನಿಂತಿದ್ದಾರೆ.
ಈ ಹೋರಾಟ ಕರಾವಳಿ ಜಿಲ್ಲೆಯ ನಾಗರಿಕರು ಮತ್ತು ಅಕ್ರಮ ದಂದೆ ನಡೆಸುವ ಶಾಸಕ, ಸಂಸದರ ಮದ್ಯೆ ಆಗಿದೆ.
ನ್ಯಾಯ ಅನ್ಯಾಯದ ವಿರುದ್ಧ ಆಗಿದೆ.
ಅಕ್ರಮ ದಂದೆಯ ವಿರುದ್ಧ ಆಗಿದೆ.
ಜಿಲ್ಲೆಯ ಎಲ್ಲಾ ನಾಗರಿಕರು ಈ ಪ್ರತಿಭಟನೆಯ ನಾಯಕರು.
ಅಕ್ಟೋಬರ್ 18ಕ್ಕೆ ನಿರ್ಧಾರವಾದ ಪ್ರತಿಭಟನೆ ಯಾವುದೇ ಬದಲಾವಣೆ ಇಲ್ಲದೆ ನಡೆಯುತ್ತದೆ.

ದಿನೇಶ್ ಹೆಗ್ಡೆ ಉಳೆಪಾಡಿ
ವಕೀಲರು

Related Articles

ಇತ್ತೀಚಿನ ಸುದ್ದಿಗಳು