Friday, June 14, 2024

ಸತ್ಯ | ನ್ಯಾಯ |ಧರ್ಮ

ಇಂದಿನಿಂದ 2 ದಿನ ರಾಜ್ಯ ಗೃಹ ಸಚಿವರ ಚಿಂತನಾ ಶಿಬಿರ

ಹರಿಯಾಣ: ಇಂದಿನಿಂದ ಎರಡು ದಿನಗಳ ಕಾಲ ರಾಜ್ಯ ಗೃಹ ಸಚಿವರ ಚಿಂತನಾ ಶಿಬಿರವು ಹರಿಯಾಣದ ಸೂರಜ್ ಕುಂಡ್‌ನಲ್ಲಿ ನಡೆಯುತ್ತಿದೆ.

ಈ ಶಿಬಿರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಪಿರೆನ್ಸ್‌ ಮೂಲಕ ಪಾಲ್ಗೊಂಡಿದ್ದು, ಚಿಂತನಾ ಶಿಬಿರದ ಕುರಿತು ಮಾತನಾಡಿದ ಅವರು, ಸಾಂಘಿಕ ಪ್ರಯತ್ನದಿಂದ ದೇಶ ಬಲ ಹೆಚ್ಚಲಿದ್ದು, ದೇಶ ಶಕ್ತಿಶಾಲಿಯಾದರೆ ನಾಗರಿಕರು ಕೂಡ ಶಕ್ತಿಶಾಲಿಯಾಗಿ ರೂಪುಗೊಳ್ಳಲಿದ್ದಾರೆ. ಹೀಗಾಗಿ ಸರ್ಕಾರದ ಸೌಲಭ್ಯಗಳು ಪ್ರತಿಯೊಬ್ಬರಿಗೂ ತಲುಪಬೇಕು ಎಂದು ಹೇಳಿದರು.

ಈ ಸಮಾವೇಶದಲ್ಲಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೊಸ ಹೊಸ ವಿಷಯಗಳನ್ನು ಕಲಿಯಲು  ಸಾಧ್ಯವಾಗಲಿದ್ದು,  ರಾಜ್ಯಗಳು ಪರಸ್ಪರ ಸಹಕಾರದ ಮೂಲಕ  ಅಪರಾಧ ಚಟುವಟಿಕೆಗಳನ್ನು  ತಡೆಗಟ್ಟಬಹುದಾಗಿದೆ ಎಂದು ತಿಳಿಸಿದರು.

ಇನ್ನೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಮಾತನಾಡಿ, ಗಡಿಯಾಚೆಗಿನ ಭಯೋತ್ಪಾದನೆ, ಒಳನುಸುಳುವಿಕೆ, ಡ್ರೋನ್ ಮೂಲಕ ಶಸ್ತ್ರಾಸ್ತ್ರ ಪೂರೈಕೆ, ಮಾದಕ ವಸ್ತುಗಳ ಪೂರೈಕೆ ನಿಯಂತ್ರಿಸಲು, ಎಲ್ಲ ರಾಜ್ಯಗಳ ಸಹಕಾರದಿಂದ ಈ ದುಷ್ಕೃತ್ಯಗಳನ್ನು ಹತ್ತಿಕ್ಕಲು ಸಾಧ್ಯವಾಗಲಿದೆ ಎಂದರು.

 ಹಲವು ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಸೂಕ್ತ ಸಲಹೆಗಳನ್ನು ನೀಡಿದ್ದು, ಇವುಗಳನ್ನು ಪರಿಶೀಲಿಸಲಾಗುವುದು ಅಲ್ಲದೇ, ಕೇಂದ್ರ ಸರ್ಕಾರ ರಾಜ್ಯಗಳಿಗೆ ಅಪರಾಧ ನಿಯಂತ್ರಣ ಸೇರಿದಂತೆ ಇತರೆ ನೆರವು ನೀಡಲು ಸಿದ್ಧವಿದೆ ಎಂದು ತಿಳಿಸಿದರು.

ಶಿಬಿರದಲ್ಲಿ ರಾಜ್ಯಗಳ ಗೃಹ ಸಚಿವರು, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು