Thursday, October 23, 2025

ಸತ್ಯ | ನ್ಯಾಯ |ಧರ್ಮ

ಮುಂದಿನ ಮಾರ್ಚ್ ವರೆಗೆ ಪ್ರತಿ ತಿಂಗಳು ರೂ. 2400 ಕೋಟಿ ರಾಜಸ್ವ ಸಂಗ್ರಹ ಗುರಿ ಸಾಧಿಸಲೇಬೇಕು: ಸಿ.ಎಂ.ಸಿದ್ದರಾಮಯ್ಯ ಸೂಚನೆ

ಬೆಂಗಳೂರು ಅ 29: ಮುಂದಿನ ಮಾರ್ಚ್ ವರೆಗೆ ಪ್ರತಿ ತಿಂಗಳು ರೂ. 2400 ಕೋಟಿ ರಾಜಸ್ವ ಸಂಗ್ರಹ ಗುರಿ ಸಾಧಿಸಲೇಬೇಕು ಎಂದು ಮುಖ್ಯಮಂತ್ರಿ‌ ಸಿದ್ದರಾಮಯ್ಯ ಅವರು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಅವರ ಅಧ್ಯಕ್ಷತೆಯಲ್ಲಿ ನಡೆದ ನೋಂದಣಿ ಮತ್ತು ಮುದ್ರಾಂಕ ಇಲಾಖೆ 2024-25ರ ಸಾಲಿನ ರಾಜಸ್ವ ಸಂಗ್ರಹಣೆ ಪರಿಶೀಲನಾ ಸಭೆಯಲ್ಲಿ ಈ ಸೂಚನೆ ನೀಡಿದರು.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯು 2024-25ರ ಸಾಲಿನಲ್ಲಿ ರೂ. 26000 ಕೋಟಿ ರಾಜಸ್ವ ಸಂಗ್ರಹ ಗುರಿ ಹೊಂದಿದ್ದು, ಅಕ್ಟೋಬರ್ ತಿಂಗಳ ಅಂತ್ಯದವರೆಗೆ ರೂ. 13,724 ಕೋಟಿ ಸಂಗ್ರಹ ಆಗಿದೆ.

ಮುoದಿನ ಮಾರ್ಚ್ ವರೆಗೆ ಪ್ರತಿ ತಿಂಗಳು ರೂ. 2400 ಕೋಟಿ ರಾಜಸ್ವ ಸಂಗ್ರಹ ಗುರಿಯನ್ನು ಸಾಧಿಸಬೇಕು.

ನೋoದಣಿಯೇತರ ದಾಸ್ತಾವೇಜುಗಳಿಗೆ ಸರಿಯಾದ ಮುದ್ರಾoಕ ಶುಲ್ಕವನ್ನು ಪಾವತಿಸಿಕೊoಡು ಹೆಚ್ಚಿನ ರಾಜಸ್ವ ಸoಗ್ರಹಿಸಬೇಕು ಎನ್ನುವ ಸೂಚನೆ ನೀಡಿದರು.

ಸಾರಿಗೆ ಇಲಾಖೆ ರಾಜಸ್ವ ಪರಿಶೀಲನಾ ಸಭೆಯ ಮುಖ್ಯಾಂಶಗಳು

2024-25ನೇ ಸಾಲಿನಲ್ಲಿ ವಾರ್ಷಿಕ ರಾಜಸ್ವ ಸoಗ್ರಹ ಗುರಿ ರೂ. 13000 ಕೋಟಿ ಆಗಿದ್ದು,
ಸೆಪ್ಟೆಂಬರ್ ವರೆಗೆ ರೂ. 5569 ಕೋಟಿ ಸಂಗ್ರಹ ಮಾಡಲಾಗಿದೆ.

ಹಿಂದಿನ ಸಾಲಿಗಿಂತ ಈ ಅವಧಿಯಲ್ಲಿ ರೂ. 308.98 ಕೋಟಿ ಹೆಚ್ಚುವರಿ ರಾಜಸ್ವ ಸಂಗ್ರಹ ಆಗಿದೆ.

ಮಾಸಿಕ ಗುರಿ ನಿಗದಿಪಡಿಸಿಕೊoಡು ಮಾರ್ಚ್ ಅoತ್ಯದ ಒಳಗಾಗಿ ನಿಗದಿತ ಗುರಿ ಸಾಧಿಸಬೇಕು

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜು, ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಎಲ್ ಅತೀಕ್, ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು

Related Articles

ಇತ್ತೀಚಿನ ಸುದ್ದಿಗಳು

You cannot copy content of this page