Saturday, November 1, 2025

ಸತ್ಯ | ನ್ಯಾಯ |ಧರ್ಮ

ಹಾಸನದಲ್ಲಿ ಇಂದು 2500 ಅಡಿ ಕನ್ನಡ ಧ್ವಜ ಮೆರವಣಿಗೆ ಸೌಹಾರ್ದ ನಡಿಗೆ

ಹಾಸನ : ಕನ್ನಡ ನಾಡಿನ ಆತ್ಮಗೌರವ ಮತ್ತು ಏಕತೆಯ ಸಂಕೇತವಾಗಿ, ಈ ವರ್ಷದ ರಾಜ್ಯೋತ್ಸವ ದಿನದಂದು ನಮ್ಮ ಹಾಸನ ಟಿವಿ ೫ನೇ ವರ್ಷದ ಸಂಭ್ರಮದ ಅಂಗವಾಗಿ ಜಿಲ್ಲಾಡಳಿತದ ಸಹಯೋಗದಲ್ಲಿ ಪ್ರಥಮ ಬಾರಿಗೆ 2500 ಅಡಿ ಉದ್ದದ ಕನ್ನಡ ಧ್ವಜ ಮೆರವಣಿಗೆ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸಂಪಾದಕ ತೌಫಿಕ್ ಅಹಮದ್ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಈ ಬಾರಿ ನಡೆಯಲಿರುವ ೭೦ನೇ ಕನ್ನಡ ರಾಜ್ಯೋತ್ಸವದ ವಿಶೇಷ ಆಕರ್ಷಣೆಯೆಂದರೆ ೨೫೦೦ ಅಡಿ ಉದ್ದದ ಬೃಹತ್ ಕನ್ನಡ ಧ್ವಜ. ನವೆಂಬರ್ 1 ರಂದು ಬೆಳಗ್ಗೆ 5 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಮೆರವಣಿಗೆ ಪ್ರಾರಂಭವಾಗಿ ಜಿಲ್ಲಾ ಕ್ರೀಡಾಂಗಣದವರೆಗೆ ನಡೆಯಲಿದೆ ಎಂದು ಹೇಳಿದರು. ವಿವಿಧ ಶಾಲಾ ಮತ್ತು ಕಾಲೇಜುಗಳಿಂದ ಸುಮಾರು ೩,೫೦೦ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಕನ್ನಡ ನಾಡಿನ ಗೌರವ, ನುಡಿ ಹಾಗೂ ಸಂಸ್ಕೃತಿಯ ಪ್ರತಿಬಿಂಬವಾಗಿ ಈ ಮೆರವಣಿಗೆ ನಡೆಯಲಿದೆ.

ವಿದ್ಯಾರ್ಥಿಗಳು “ನಮ್ಮ ನಡೆ ಸೌಹಾರ್ದದ ಕಡೆ, ನಮ್ಮ ನಡೆ ಕನ್ನಡದ ಕಡೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂಬ ಘೋಷವಾಕ್ಯಗಳೊಂದಿಗೆ ಹೆಜ್ಜೆ ಹಾಕಲಿದ್ದಾರೆ. ಮೆರವಣಿಗೆಯಲ್ಲಿ ಕನ್ನಡಪರ ಸಂಘಟನೆಗಳು, ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು, ಮಹಿಳಾ ಸಹಕಾರ ಸಂಘಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದು, ಈ ಬೃಹತ್ ಧ್ವಜ ನಡಿಗೆ ರಾಜ್ಯೋತ್ಸವದ ಉತ್ಸಾಹಕ್ಕೆ ಹೊಸ ಚೈತನ್ಯ ನೀಡಲಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page