Saturday, July 5, 2025

ಸತ್ಯ | ನ್ಯಾಯ |ಧರ್ಮ

ಗುಜರಾತ್: ಸಿಡಿಲು ಬಡಿದು 27 ಜನರು ಮತ್ತು 71 ಜಾನುವಾರುಗಳ ಸಾವು

ಗುಜರಾತ್ ರಾಜ್ಯದಲ್ಲಿ ಭಾರೀ ಮಳೆ ಅವಾಂತರ ಸೃಷ್ಟಿಸಿದ್ದು, ಆ ರಾಜ್ಯದ 251 ತಾಲೂಕುಗಳ ಪೈಕಿ 230ಕ್ಕೂ ಹೆಚ್ಚು ತಾಲೂಕುಗಳಲ್ಲಿ ಗುಡುಗು, ಮಿಂಚು ಸಹಿತ ಅಕಾಲಿಕ ಮಳೆಯಾಗಿದೆ.

ಸೋಮವಾರ ರಾಜ್ಯದ ಹಲವೆಡೆ ಸಿಡಿಲು ಬಡಿದು 27 ಮಂದಿ ಸಾವನ್ನಪ್ಪಿದ್ದಾರೆ.

ದೌದ್, ಭರೂಚ್, ತಾಪಿ, ಅಹಮದಾಬಾದ್, ಅಮ್ರೆಲ್ಲಿ, ಬನಸ್ಕಾಂತ, ಬೋತದ್, ಖೇಡಾ, ಮೆಹ್ ಸನಾ, ಪಂಚ ಮಹಲ್, ಸಬರ್ ಕಾಂತ, ಸೂರತ್, ಸುರೇಂದ್ರನಗರ ಮತ್ತು ದೇವಭೂಮಿ ದ್ವಾರಕಾದಲ್ಲಿ ಹೆಚ್ಚಿನ ಸಂಖ್ಯೆಯ ಸಾವುಗಳು ಸಂಭವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಟೇಟ್ ಎಮರ್ಜೆನ್ಸಿ ಆಪರೇಷನ್ ಸೆಂಟರ್ ನಿರ್ವಹಿಸಿದ ಮಾಹಿತಿಯ ಪ್ರಕಾರ, ಸೋಮವಾರ ಮಧ್ಯಾಹ್ನದ ವೇಳೆಗೆ 71 ಪ್ರಾಣಿಗಳು ಗುಡುಗಿಗೆ ಬಲಿಯಾಗಿವೆ. ಭಾರೀ ಮಳೆಯಿಂದಾಗಿ 23 ಮಂದಿ ಗಾಯಗೊಂಡಿದ್ದು, 29 ಮನೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page