Wednesday, June 26, 2024

ಸತ್ಯ | ನ್ಯಾಯ |ಧರ್ಮ

ಸೂರಜ್ ವಿರುದ್ಧ 2ನೇ FIR: ನನಗೂ ಅನ್ಯಾಯ-ದೌರ್ಜನ್ಯ ನಡೆದಿದೆ ಎಂದ ಆಪ್ತ ಶಿವಕುಮಾರ್

ಹಾಸನ : ವಿಧಾನ ಪರಿಷತ್ ಸದಸ್ಯ ಡಾ. ಸೂರಜ್‌ ರೇವಣ್ಣ ವಿರುದ್ದ ಮತ್ತೊಂದು ಸಲಿ*ಗಕಾಮ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಕೆಲ ದಿನಗಳ ಹಿಂದೆ ಸೂರಜ್ ರೇವಣ್ಣ ವಿರುದ್ದ ಅಸಹಜ ಲೈ*ಗಿಕ ದೌರ್ಜನ್ಯ ದೂರು ನೀಡಿದ್ದ ಅರಕಲಗೂಡು ಮೂಲದ ಯುವಕನ ಮೇಲೆ ಹಣಕ್ಕಾಗಿ ಬ್ಲಾಕ್‌ಮೇಲ್ ಆರೋಪ ಹೊರಿಸಿ ಹೊಳೆನರಸೀಪುರ ನಗರ ಠಾಣೆಯಲ್ಲಿ ದೂರು ನೀಡಿದ್ದ ಎಂಎಲ್‌ಸಿ ಅವರ ಆಪ್ತ ಅದೇ ತಾಲೂಕಿನ ಹನುಮನಹಳ್ಳಿ ಗ್ರಾಮದ ಶಿವಕುಮಾರ್ ಎಂಬಾತನಿಂದ ಸೂರಜ್ ವಿರುದ್ದ ದೂರು ದಾಖಲಾಗಿದೆ

ಈತ ಸೂರಜ್ ಪರವಾಗಿ ಜೂ.21 ರಂದು ಸಂತ್ರಸ್ತನ ವಿರುದ್ಧ ದೂರು ನೀಡಿದ್ದ. ಸಂತ್ರಸ್ತ 5 ಕೋಟಿ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ್ದ ಎಂದು ಹೇಳಿದ್ದ. ಅದಾದ ಬಳಿಕ ನಾಪತ್ತೆ ಆಗಿದ್ದ ಶಿವಕುಮಾ‌ರ್ ಇದೀಗ ಮತ್ತೆ ಪ್ರತ್ಯಕ್ಷವಾಗಿದ್ದಾನೆ.

ತನ್ನ ಮೇಲೂ ಸೂರಜ್ ಲೈಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಶಿವಕುಮಾರ್‌ ಆರೋಪ ಹೊರಿಸಿದ್ದಾನೆ. ಸಂತ್ರಸ್ತನ ವಿರುದ್ಧ ದೂರು ನೀಡಲು ನನ್ನ ಮೇಲೆ ಒತ್ತಡ ಹಾಕಿ ಬೆದರಿಸಿದ್ರು, ಹಣಕ್ಕಾಗಿ ಸಂತ್ರಸ್ತ ಬ್ಲಾಕ್ ಮೇಲ್ ಮಾಡಿದ್ದಾನೆ ಎಂದು ದೂರು ನೀಡು ಎಂದು ಬಲವಂತ ಮಾಡಿದ್ರು ಎಂದು ದೂರಿನಲ್ಲಿ‌ ಉಲ್ಲೇಖಿಸಲಾಗಿದೆ.

ಸೂರಜ್ ಒತ್ತಡಕ್ಕೆ ಮಣಿದಿದ್ದೆ , ನನಗೆ ನ್ಯಾಯಬೇಕು, ಅದಕ್ಕಾಗಿ ದೂರು ನೀಡಿದ್ದೇನೆ ಎಂದಿರುವ ಶಿವಕುಮಾರ್‌ ನನ್ನ ಮೇಲೂ 3 ವರ್ಷಗಳ ಹಿಂದೆ ಕೋವಿಡ್ ಸಂದರ್ಭದಲ್ಲಿ ಗನ್ನಿಕಡದ ತೋಟದ ಮನೆಯಲ್ಲಿ ಲೈ*ಗಿಕ ದೌರ್ಜನ್ಯ ನಡೆಸಿದ್ದಾರೆ ಎಂದಿದ್ದು ಈ ಸಂಬಂಧ ಸುಮಾರು 10 ಪುಟಗಳ ದೂರು ಸಲ್ಲಿಸಲಾಗಿದೆ.

ಈ ಹಿನ್ನೆಲೆ ಪ್ರಕರಣವನ್ನು ಹೊಳೆನರಸೀಪುರ ನಗರಠಾಣೆಯಿಂದ ಗ್ರಾಮಾಂತರ ಠಾಣೆಗೆ ವರ್ಗ ಮಾಡಲಾಗಿದೆ. ದೂರು ಸ್ವೀಕರಿಸಿದ ರಿಂದ ಪೊಲೀಸರು ಸೂರಜ್ ವಿರುದ್ಧ ಮತ್ತೊಂದು F.I.R ದಾಖಲು ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ.

ಇದೇ ಶಿವಕುಮಾರ್ ವಿರುದ್ಧ ಹಣ ದುರ್ಬಳಕೆ ದೂರು:

  • ಹಣ ದುರುಪಯೋಗ ಆರೋಪದಡಿ F.I.R ದಾಖಲು.
  • ಶ್ರೀರಾಮ್ ಫೈನಾನ್ಸ್‌ನ ರಾಮನಾಥಪುರ ಶಾಖೆಯಲ್ಲಿ ಕೆಲಸ ಮಾಡ್ತಿದ್ದ ಶಿವಕುಮಾ‌ರ್,
  • ವಾಹನ ಸಾಲ ಪಡೆದು ಸಂಸ್ಥೆಗೆ ಹಣ ಕಟ್ಟಲು ಗ್ರಾಹಕರು ನೀಡಿದ್ದ ಸುಮಾರು 3 ಲಕ್ಷ ಹಣ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ದೂರಲಾಗಿದೆ.
  • ಈ ಸಂಬಂಧ ಕೊಣನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
  • ಜೂ.21 ರಂದು ರಾಮನಾಥಪುರ ಶಾಖೆ ಮ್ಯಾನೇಜರ್ ಕೇಶವಮೂರ್ತಿ ಎಂಬುವರು ದೂರು ನೀಡಿದ್ದರು. ತನಿಖೆ ಪ್ರಗತಿಯಲ್ಲಿದೆ .

Related Articles

ಇತ್ತೀಚಿನ ಸುದ್ದಿಗಳು