ಬೆಂಗಳೂರು : ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರ ಪರಿಷ್ಕರಣೆಯಾಗಿದ್ದು ಲೀಟರ್ ಒಂದಕ್ಕೆ ಮೂರು ರುಪಾಯಿ ಏರಿಕೆ ಮಾಡಲಾಗಿದೆ.
ದರ ಏರಿಕೆ ಸಂಬಂಧಪಟ್ಟಂತೆ ಟೋನ್ಡ್ ಹಾಲು ಲೀಟರ್‌ಗೆ ಈಗಿನ ದರ 37ರಿಂದ 40ರೂ. ಗೆ ಏರಿಕೆ ಮಾಡಲಾಗಿದೆ. ಹೋಮೋಜಿನೈಸ್ಡ್ ಟೋನ್ಡ್ ಹಾಲು 38ರೂ. ಯಿಂದ 40ರೂ ಮಾಡಲಾಗಿದೆ. ಹೋಮೋಜಿನೈಸ್ಡ್ ಹಸುವಿನ ಹಾಲು 42ರೂ. ಯಿಂದ 45ರೂ. ಹೆಚ್ಚಿಸಲಾಗಿದೆ. ಸ್ಪೆಷಲ್ ಹಾಲು ಮತ್ತು ಶುಭಂ ಹಾಲು ಲೀಟರ್‌ಗೆ 43 ರಿಂದ 46ರುಪಾಯಿಗಳಿಗೆ ಏರಿಸಲಾಗಿದೆ. ಹೋಮೋಜಿನೈಸ್ಡ್ ಸ್ಟಾಂಡಡೈಸ್ಡರ್ ಹಾಲು 44ರೂ. ಯಿಂದ 47 ರೂ.ಗೆ ಹೆಚ್ಚಳ ಮಾಡಲಾಗದೆ. ಸಮೃದ್ಧಿ ಹಾಲು 48 ರಿಂದ 51ರೂ, ಡಬಲ್ ಟೋನ್ಡ್ ಹಾಲು 36 ರಿಂದ 39ರೂಪಾಯಿಗಳು ಮತ್ತು ಮೊಸರು ಪ್ರತೀ ಕೆಜಿಗೆ 45 ರಿಂದ 48 ರುಪಾಯಿಗಳಷ್ಟು ಏರಿಸಲಾಗಿದೆ ಎಂದು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ.