Tuesday, September 10, 2024

ಸತ್ಯ | ನ್ಯಾಯ |ಧರ್ಮ

VHP ಸಭೆಯಲ್ಲಿ 30 ನಿವೃತ್ತ ನ್ಯಾಯಾಧೀಶರು ಭಾಗಿ: ಮತಾಂತರ, ವಕ್ಫ್ ಮಸೂದೆ ಕುರಿತು ಸಭೆಯಲ್ಲಿ ಚರ್ಚೆ

ನವದೆಹಲಿ: ವಿಶ್ವ ಹಿಂದೂ ಪರಿಷತ್‌ನ ಕಾನೂನು ಕೋಶವು ರವಿವಾರ ಆಯೋಜಿಸಿದ್ದ ಸಭೆಯಲ್ಲಿ 30 ನಿವೃತ್ತ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರು ಭಾಗವಹಿಸಿದ್ದರು ಎಂದು The Indian Express ಪತ್ರಿಕೆ ವರದಿ ಪ್ರಕಟಿಸಿದೆ.

ಸಭೆಯ ಕುರಿತು ಮಾತನಾಡಿದ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಅಲೋಕ್ ಕುಮಾರ್ ಮಾತನಾಡಿ,“ಸಮಾಜದ ಮುಂದಿರುವ ಸಾಮೂಹಿಕ ಸಮಸ್ಯೆಗಳಾದ ವಕ್ಫ್ ತಿದ್ದುಪಡಿ ಮಸೂದೆ, ದೇವಸ್ಥಾನಗಳ ಹಸ್ತಾಂತರ, ಸರ್ಕಾರದ ನಿಯಂತ್ರಣದಲ್ಲಿರುವ ದೇವಸ್ಥಾನಗಳನ್ನು ಹಸ್ತಾಂತರಿಸುವುದು, ಮತಾಂತರ ಇತ್ಯಾದಿ ವಿಷಯಗಳು ಚರ್ಚಿಸಲಾಯಿತು.” ಎಂದಿದ್ದಾರೆ.

“ರಾಷ್ಟ್ರೀಯತೆ, ಹಿಂದುತ್ವ, ಹಿಂದೂಗಳ ಮೇಲೆ ಪರಿಣಾಮ ಬೀರುವ ಕಾನೂನುಗಳು, ಗೋಹತ್ಯೆ ಹಾಗೂ ಇತರ ವಿಷಯಗಳು ಚರ್ಚಿಸಿದೆವು. ಎಂದು ಸಂಘಟನೆಯ ವಕ್ತಾರ ವಿನೋದ್ ಬನ್ಸಾಲ್ ಅವರನ್ನು ಉಲ್ಲೇಖಿಸಿ The Indian Express ವರದಿ ಮಾಡಿದೆ.

ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ರವಿವಾರ ಸಂಜೆ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಅವರು “ಅಭಿವೃದ್ಧಿ ಹೊಂದಿದ ಭಾರತವನ್ನು ರಚಿಸಲು ಅಗತ್ಯವಾದ ಕಾನೂನು ಸುಧಾರಣೆಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ವಿವರವಾದ ಚರ್ಚೆಯಲ್ಲಿ ಭಾಗವಹಿಸಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ, ದೇಶಾದ್ಯಂತ ನ್ಯಾಯಾಲಯಗಳು ಹಿಂದುತ್ವ ಗುಂಪುಗಳ ಸೈದ್ಧಾಂತಿಕ ಬೇಡಿಕೆಗಳಿಗೆ ಸಂಬಂಧಿಸಿದ ಹಲವಾರು ಪ್ರಕರಣಗಳ ವಿಚಾರಣೆ ನಡೆಸಿವೆ. ಮೇ 2022 ರಲ್ಲಿ scroll.in ವಿಶ್ಲೇಷಣೆ ತೋರಿಸಿದಂತೆ, ಅಯೋಧ್ಯೆಯ ಬಾಬರಿ ಮಸೀದಿ ಮತ್ತು ವಾರಣಾಸಿಯ ಜ್ಞಾನವಾಪಿ ಮಸೀದಿಗಳ ಮೇಲೆ ಹಿಂದುತ್ವವಾದಿಗಳು ಹಕ್ಕುಗಳನ್ನು ಮಂಡಿಸುವಲ್ಲಿ ನ್ಯಾಯಾಲಯದ ಆದೇಶಗಳು ಪ್ರಮುಖ ಪಾತ್ರವಹಿಸಿವೆ. ವಿಶ್ವ ಹಿಂದೂ ಪರಿಷತ್ ಸದಸ್ಯರು ಇಂತಹ ಹಲವಾರು ಪ್ರಕರಣಗಳಲ್ಲಿ ದಾವೆ ಹೂಡಿದ್ದಾರೆ ಎನ್ನುವುದು ಇಲ್ಲಿ ಗಮನಾರ್ಹ.

ಫೆಬ್ರವರಿ 27 ರಂದು, ನಿವೃತ್ತ ನ್ಯಾಯಾಧೀಶ ಅಜಯ್ ಕೃಷ್ಣ ವಿಶ್ವೇಶ್ ಅವರು ಲಕ್ನೋದ ಸಾರ್ವಜನಿಕ ವಿಶ್ವವಿದ್ಯಾಲಯದ ಲೋಕಪಾಲ್ ಆಗಿ ನೇಮಕಗೊಂಡರು. ಸುಮಾರು ಒಂದು ತಿಂಗಳ ನಂತರ ಅವರು ಜ್ಞಾನವಾಪಿ ಮಸೀದಿ ಸಂಕೀರ್ಣದ ಮುಚ್ಚಿದ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಮಾಡಿಕೊಟ್ಟರು. ಇದು ನ್ಯಾಯಾಂಗದ ಸ್ವಾತಂತ್ರ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಳವಳಕ್ಕೆ ಕಾರಣವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page