Tuesday, March 25, 2025

ಸತ್ಯ | ನ್ಯಾಯ |ಧರ್ಮ

2022-24ರ ನಡುವೆ ರ‍್ಯಾಗಿಂಗ್‌ ಪಿಡುಗಿಗೆ 51 ವಿದ್ಯಾರ್ಥಿಗಳು ಬಲಿ: ವರದಿ

ದೆಹಲಿ: 2022-24ರ ನಡುವೆ ದೇಶಾದ್ಯಂತ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ 51 ಮಂದಿ ರ‍್ಯಾಗಿಂಗ್‌ಗೆ ಬಲಿಯಾಗಿದ್ದಾರೆ.

ಈ ಸಂಖ್ಯೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವಾದ ಕೋಟಾದಲ್ಲಿನ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಬಹುತೇಕ ಹತ್ತಿರದಲ್ಲಿದೆ. ಸೊಸೈಟಿ ಅಗೆನೆಸ್ಟ್‌ ವಯಲೆನ್ಸ್‌ ಇನ್‌ ಎಜುಕೇಷನ್‌ ‘ಭಾರತ ದೇಶದಲ್ಲಿ ರ‍್ಯಾಗಿಂಗ್‌ ಪರಿಸ್ಥಿತಿ, 2022-24’ ವರದಿಯು ಈ ವಿವರಗಳನ್ನು ಬಹಿರಂಗಪಡಿಸಿದೆ. ರ‍್ಯಾಗಿಂಗ್ ಘಟನೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ದೂರುಗಳು ವೈದ್ಯಕೀಯ ಕಾಲೇಜುಗಳಿಂದ ಬರುತ್ತಿವೆ ಎಂದು ಅದು ಹೇಳಿದೆ.

ರಾಷ್ಟ್ರೀಯ ರ‍್ಯಾಗಿಂಗ್‌ ವಿರೋಧಿ ಸಹಾಯವಾಣಿಗೆ 1,946 ಕಾಲೇಜುಗಳಿಂದ 3,156 ದೂರುಗಳು ಬಂದಿವೆ. ಇದರಲ್ಲಿ ಶೇ. 38.6ರಷ್ಟು ವೈದ್ಯಕೀಯ ಕಾಲೇಜುಗಳಿಂದ ಬಂದಿವೆ. ಇಷ್ಟು ದೂರುಗಳನ್ನು ಕೇವಲ ಸಹಾಯವಾಣಿಯ ಮೂಲಕವೇ ದಾಖಲಿಸಲಾಗಿದೆ. ಇದಲ್ಲದೆ ಸಂತ್ರಸ್ತರು ನೇರವಾಗಿ ಕಾಲೇಜುಗಳು ಮತ್ತು ಪೊಲೀಸರಿಗೆ ದೂರು ನೀಡಿರುವ ಸಾಧ್ಯತೆಯಿದೆ ಎಂದು ಅದು ಹೇಳಿದೆ.

2022-24ರ ನಡುವೆ ರಾಜಸ್ಥಾನದ ಕೋಟಾದಲ್ಲಿ 57 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮುಂದುವರೆದು ವರದಿಯು ಕಾಲೇಜುಗಳು ರ‍್ಯಾಗಿಂಗ್ ವಿರೋಧಿ ದಳಗಳನ್ನು ಸ್ಥಾಪಿಸಬೇಕು ಎಂದು ಸೂಚಿಸಿದೆ. ಈ ತಂಡವನ್ನು ಸಂಪರ್ಕಿಸಲು ಹೊಸ ವಿದ್ಯಾರ್ಥಿಗಳಿಗೆ ಫೋನ್ ಸಂಖ್ಯೆಗಳು ಮತ್ತು ಇತರ ವಿವರಗಳನ್ನು ಒದಗಿಸಬೇಕು ಎಂದು ಸಹ ಅದು ಸಲಹೆ ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page