Home ಬೆಂಗಳೂರು ಸರ್ಕಾರಿ ಕರ್ತವ್ಯದ ವೇಳೆ ಮೋಜು-ಮಸ್ತಿ, 6 ಪಿಡಿಒಗಳ ಅಮಾನತು – ಸಚಿವ ಈಶ್ವರ್ ಖಂಡ್ರೆ

ಸರ್ಕಾರಿ ಕರ್ತವ್ಯದ ವೇಳೆ ಮೋಜು-ಮಸ್ತಿ, 6 ಪಿಡಿಒಗಳ ಅಮಾನತು – ಸಚಿವ ಈಶ್ವರ್ ಖಂಡ್ರೆ

ಬೆಂಗಳೂರು : ಸರ್ಕಾರಿ ಕರ್ತವ್ಯದ ವೇಳೆ ಕಚೇರಿಗೆ ಗೈರಾಗಿದ್ದು, ಸಿದ್ಧರ ಬೆಟ್ಟದಲ್ಲಿ ಮದ್ಯಪಾನ (Alcohol) ಮತ್ತು ಮಾಂಸಾಹಾರ ಸೇವಿಸುತ್ತಿದ್ದ ಆರೋಪ ಎದುರಿಸುತ್ತಿರುವ ಆರು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ (Government officials) ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಈ ಘಟನೆ ಮಾಧ್ಯಮಗಳಲ್ಲಿ ಬಹಿರಂಗವಾಗುತ್ತಿದ್ದಂತೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲಾ ಪಂಚಾಯತ್ ಸಿಇಒ ಸಂಬಂಧಪಟ್ಟ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ.

ಜುಲೈ 24ರಂದು ನೆಲಮಂಗಲ ಮತ್ತು ದೇವನಹಳ್ಳಿ ತಾಲೂಕಿನ ಕೆಲ ಗ್ರಾಮ ಪಂಚಾಯತಿಗಳ ಪಿಡಿಒಗಳು ಸಾರ್ವಜನಿಕರಿಗೆ ಲಭ್ಯವಾಗದೆ ಯಾತ್ರಾಸ್ಥಳದಲ್ಲೇ ಪಾರ್ಟಿಯಲ್ಲಿ ತೊಡಗಿದ್ದರೆಂಬ ಆರೋಪ ಕೇಳಿಬಂದಿದೆ. ಈ ನಡೆ ಕರ್ನಾಟಕ ರಾಜ್ಯ ನಾಗರಿಕ ಸೇವಾ ನಡತೆ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಚಿರಂಜೀವಿ, ಪ್ರಶಾಂತ್, ಹರೀಶ್, ಗಿರೀಶ್, ರವಿಶಂಕರ್ ಹಾಗೂ ದಿನೇಶ್ ಬಿ.ಎಂ. ಸೇರಿದಂತೆ ಆರು ಪಿಡಿಒಗಳಿಗೆ ಲಿಖಿತ ವಿವರಣೆ ನೀಡುವಂತೆ ಸೂಚಿಸಲಾಗಿದೆ. ಸಮರ್ಪಕ ಉತ್ತರ ನೀಡದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ. ಇದೇ ವೇಳೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಬಿ. ಖಂಡ್ರೆ, ಅಧಿಕಾರಿಗಳ ಉತ್ತರ ಪರಿಶೀಲಿಸಿದ ಬಳಿಕ ಅವರನ್ನು ತಕ್ಷಣ ಅಮಾನತುಗೊಳಿಸಿ ಸಮಗ್ರ ತನಿಖೆ ನಡೆಸುವಂತೆ ಇಲಾಖೆಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದ್ದಾರೆ. ಭವಿಷ್ಯದಲ್ಲಿ ಇಂತಹ ನಿರ್ಲಕ್ಷ್ಯ ಮರುಕಳಿಸದಂತೆ ಕಟ್ಟುನಿಟ್ಟಿನ ಸೂಚನೆಯನ್ನೂ ನೀಡಿದ್ದಾರೆ.

You cannot copy content of this page

Exit mobile version