Tuesday, November 5, 2024

ಸತ್ಯ | ನ್ಯಾಯ |ಧರ್ಮ

ಮಣಿಪುರ: 7 ಬಂಡುಕೋರರ ಬಂಧನ, ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ

ಮಣಿಪುರದಲ್ಲಿ ಕಳೆದ 24 ಗಂಟೆಗಳಲ್ಲಿ ಭದ್ರತಾ ಪಡೆಗಳು ಎರಡು ನಿಷೇಧಿತ ಗುಂಪುಗಳ ಆರು ದಂಗೆಕೋರರನ್ನು ಮತ್ತು ಮೈತೇಯಿ ಸಶಸ್ತ್ರ ಗುಂಪಿನ ಅರಂಬೈ ತೆಂಗೋಲ್‌ನ ಸದಸ್ಯನನ್ನು ಬಂಧಿಸಿವೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಭದ್ರತಾ ಪಡೆಗಳು ವಿವಿಧ ಜಿಲ್ಲೆಗಳಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ. ಇವುಗಳಲ್ಲಿ ಒಂದು ಎಸ್‌ಎಲ್‌ಆರ್, ಒಂದು ಸ್ನೈಪರ್ ರೈಫಲ್, ಎರಡು ಬೋಲ್ಟ್-ಆಕ್ಷನ್ ರೈಫಲ್‌ಗಳು, ಒಂದು 9 ಎಂಎಂ ಪಿಸ್ತೂಲ್, ಐದು ಗ್ರೆನೇಡ್‌ಗಳು ಮತ್ತು ದ್ವಿಚಕ್ರ ವಾಹನದೊಂದಿಗೆ ವಿವಿಧ ರೀತಿಯ ಮದ್ದುಗುಂಡುಗಳು ಸೇರಿವೆ.

ದಂಗೆಕೋರರನ್ನು ತೌಬಲ್ ಮತ್ತು ಬಿಷ್ಣುಪುರ್ ಜಿಲ್ಲೆಗಳಲ್ಲಿ ಅಪಹರಣ ಮತ್ತು ಸುಲಿಗೆಯಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಬಂಧಿಸಲಾಯಿತು.

ಇಂಫಾಲದ ಪೊಲೀಸ್ ಅಧಿಕಾರಿಯೊಬ್ಬರು ಕಂಗ್ಲೇಪಕ್ ಕಮ್ಯುನಿಸ್ಟ್ ಪಾರ್ಟಿಯ (ಪೀಪಲ್ಸ್ ವಾರ್ ಗ್ರೂಪ್) ಐವರು ಬಂಡುಕೋರರನ್ನು ತೌಬಲ್‌ನ ಚರಂಗಪತ್ ಮಯೈ ಲೈಕೈಯಿಂದ ಬಂಧಿಸಲಾಗಿದೆ ಎಂದು ಹೇಳಿದರು.

ಅವರಿಂದ ಒಂದು ಗ್ರೆನೇಡ್, ಐದು ‘ಬೇಡಿಕೆ ಪತ್ರ’ಗಳು, ಐದು ಮೊಬೈಲ್ ಫೋನ್‌ಗಳು, 13 ಸಿಮ್ ಕಾರ್ಡ್‌ಗಳು ಮತ್ತು ನಾಲ್ಕು ಚಕ್ರದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಮತ್ತೊಂದು ಘಟನೆಯಲ್ಲಿ, ಬಿಷ್ಣುಪುರ ಜಿಲ್ಲೆಯ ಕುಂಬಿಯಿಂದ PREPAK (PRO) ಸಂಘಟನೆಗೆ ಸೇರಿದ ನೊಂಗ್‌ಮೈಥೆಮ್ ಗುಣಮಣಿ ಅಲಿಯಾಸ್ ಅಲ್ಲು, 32 ಎಂದು ಗುರುತಿಸಲಾದ ದಂಗೆಕೋರನನ್ನು ಪೊಲೀಸರು ಬಂಧಿಸಿದ್ದಾರೆ.

ಅರಂಬೈ ತೆಂಗೋಲ್‌ನ ಸದಸ್ಯ ಖುಲ್ಲೆಮ್ ಸಂಜೀಪ್ ಅಲಿಯಾಸ್ ಭೀಮ್, 30 ಎನ್ನುವ ವ್ಯಕ್ತಿಯನ್ನೂ ಮಣಿಪುರ ಪೊಲೀಸರು ಬಂಧಿಸಿದ್ದಾರೆ. ಇವನನ್ನು ಅಕ್ಟೋಬರ್ 31ರಂದು ಇಂಫಾಲ್‌ನಲ್ಲಿ ಸೇನಾಪತಿ ಜಿಲ್ಲೆಯ ಇಬ್ಬರು ನಾಗಾ ಸಮುದಾಯದ ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page