Friday, August 16, 2024

ಸತ್ಯ | ನ್ಯಾಯ |ಧರ್ಮ

70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಕೆಜಿಎಫ್‌ – 2 ಉತ್ತಮ ಚಿತ್ರ, ರಿಷಭ್‌ ಶೆಟ್ಟಿ ಉತ್ತಮ ನಟ!

70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡದ ‘ಕಾಂತಾರ’ ಚಿತ್ರ ಪ್ರಮುಖವಾಗಿ ಹೊರಹೊಮ್ಮಿದೆ. ಚಿತ್ರವು ಅತ್ಯುತ್ತಮ ಜನಪ್ರಿಯ ಚಲನಚಿತ್ರ ಪ್ರಶಸ್ತಿಯನ್ನು ಪಡೆಯಿತು. ಇದಲ್ಲದೇ ಚಿತ್ರದ ನಟ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಕೂಡ ಬಂದಿದೆ. ಹೀಗಿರುವಾಗ ಕನ್ನಡ ಚಿತ್ರರಂಗದ ಬಿಗ್ ಸ್ಟಾರ್ ಯಶ್ ಕೂಡ ಟ್ವೀಟ್ ಮಾಡುವ ಮೂಲಕ ಚಿತ್ರತಂಡವನ್ನು ಅಭಿನಂದಿಸಿದ್ದಾರೆ.

ಯಶ್ ಟ್ವೀಟ್ ಮಾಡಿ, “ಎಲ್ಲ ರಾಷ್ಟ್ರ ಪ್ರಶಸ್ತಿ ವಿಜೇತರಿಗೆ ಅಭಿನಂದನೆಗಳು. ಕಾಂತಾರ ಮತ್ತು ಕೆಜಿಎಫ್‌ಗೆ ಸಿಕ್ಕ ಮನ್ನಣೆಗಾಗಿ ರಿಷಬ್ ಶೆಟ್ಟಿ, ವಿಜಯ್, ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ಫಿಲಂಸ್‌ಗೆ ಸಂಬಂಧಿಸಿದ ತಂಡಕ್ಕೆ ಧನ್ಯವಾದಗಳು” ಎಂದು ಹೇಳಿದ್ದಾರೆ.

ಇಲ್ಲಿದೆ ವಿಜೇತರ ಸಂಪೂರ್ಣ ಪಟ್ಟಿ

ಅತ್ಯುತ್ತಮ ಚಿತ್ರ: ಆಟ್ಟಂ
ಅತ್ಯುತ್ತಮ ನಟಿ: ಮಾನ್ಸಿ ಪರಾಖ್
ಅತ್ಯುತ್ತಮ ಪೋಷಕ ನಟಿ: ನೀನಾ ಗುಪ್ತಾ
ಅತ್ಯುತ್ತಮ ಮನರಂಜನಾ ಚಿತ್ರ: ಕಾಂತಾರ
ಅತ್ಯುತ್ತಮ ನಟ: ರಿಷಬ್ ಶೆಟ್ಟಿ (ಕಾಂತಾರ)
ಅತ್ಯುತ್ತಮ ನಟಿ: ನಿತ್ಯಾ ಮೆನನ್ (ತಮಿಳು: ತಿರುಚಿತ್ರಂಬಲಂ)
ಅತ್ಯುತ್ತಮ ತೆಲುಗು ಪ್ರಾದೇಶಿಕ ಸಿನಿಮಾ- ಕಾರ್ತಿಕೇಯ 2
ವಿಶೇಷ ಪ್ರಶಸ್ತಿ: ನಟ ಮನೋಜ್ ಬಾಜ್ಪೇಯಿ- ಚಿತ್ರ: ಗುಲ್ಮೋಹರ್
ಅತ್ಯುತ್ತಮ ಚೊಚ್ಚಲ ನಿರ್ದೇಶಕ- ಬಸ್ತಿ ದಿನೇಶ್ ಶೆಣೈ (ಮಧ್ಯಂತರ-ಕಿರುಚಿತ್ರ-ಕನ್ನಡ)

ಅತ್ಯುತ್ತಮ ಸಾಹಸ ನಿರ್ದೇಶನ: ಕೆಜಿಎಫ್: ಚಾಪ್ಟರ್ 2
ಅತ್ಯುತ್ತಮ ಕನ್ನಡ ಪ್ರಾದೇಶಿಕ ಸಿನಿಮಾ- ಕೆಜಿಎಫ್: ಚಾಪ್ಟರ್ 2
ಅತ್ಯುತ್ತಮ ಮರಾಠಿ ಪ್ರಾದೇಶಿಕ ಸಿನಿಮಾ- ವಾಲ್ವಿ
ಅತ್ಯುತ್ತಮ ಗಾಯಕ: ಅರಿಜಿತ್ ಸಿಂಗ್ (ಬ್ರಹ್ಮಾಸ್ತ್ರ)
ಅತ್ಯುತ್ತಮ ತಮಿಳು ಪ್ರಾದೇಶಿಕ ಸಿನಿಮಾ- ಪೊನ್ನಿಯಿನ್ ಸೆಲ್ವನ್ 1

ಅತ್ಯುತ್ತಮ ಛಾಯಾಗ್ರಹಣ: ರವಿ ವರ್ಮನ್ (ಪೊನ್ನಿಯಿನ್ ಸೆಲ್ವನ್ 1)
ಅತ್ಯುತ್ತಮ ಸಂಗೀತ ನಿರ್ದೇಶನ (ಹಿನ್ನೆಲೆ ಸಂಗೀತ): ಎ ಆರ್ ರೆಹಮಾನ್ (ಪೊನ್ನಿಯಿನ್ ಸೆಲ್ವನ್
ಅತ್ಯುತ್ತಮ ಸಂಗೀತ ನಿರ್ದೇಶನ: ಪ್ರೀತಂ (ಬ್ರಹ್ಮಾಸ್ತ್ರ)
ಅತ್ಯುತ್ತಮ ನೃತ್ಯ ನಿರ್ದೇಶನ: ತಿರುಚಿತ್ರಂಬಾಲಂ (ತಮಿಳು)

Related Articles

ಇತ್ತೀಚಿನ ಸುದ್ದಿಗಳು

You cannot copy content of this page