Wednesday, June 19, 2024

ಸತ್ಯ | ನ್ಯಾಯ |ಧರ್ಮ

ಆರ್‌ಎಸ್‌ಎಸ್ ಮುಖಂಡನ ಮನೆಯಿಂದ 770 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಂಡ ಪೊಲೀಸರು

ಪನ್ನೂರು: ಕೋವಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಸೆಂಟರ್ ಪೊಯ್ಲೂರಿನಲ್ಲಿ ಆರ್‌ಎಸ್‌ಎಸ್ ಮುಖಂಡರೊಬ್ಬರ ಮನೆಯಲ್ಲಿ ಇರಿಸಲಾಗಿದ್ದ ಅಪಾರ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಲಯಾಳಂ ಸುದ್ದಿ ಸಂಸ್ಥೆ ಮಾಧ್ಯಮಂ ವರದಿ ಮಾಡಿದೆ.

ಆರ್‌ಎಸ್‌ಎಸ್ ಪ್ರಾಂತೀಯ ಮುಖಂಡ ವಡಕ್ಕೈಲ್ ಪ್ರಮೋದ್ ಮತ್ತು ಸಂಬಂಧಿ ವಡಕ್ಕೇಲ್ ಶಾಂತಾ ಅವರ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ 770 ಕೆಜಿ ಸ್ಫೋಟಕಗಳನ್ನು ಕೋವಲ್ಲೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಗೌಪ್ಯ ಮಾಹಿತಿ ಮೇರೆಗೆ ಕೊಳವಲ್ಲೂರು ಪೊಲೀಸ್ ಇನ್ಸ್ ಪೆಕ್ಟರ್ ಸುಮಿತ್ ಕುಮಾರ್, ಸಬ್ ಇನ್ಸ್ ಪೆಕ್ಟರ್ ಕೆ.ಕೆ. ಸೋಬಿನ್ ನೇತೃತ್ವದ ಪೊಲೀಸ್ ತಂಡ ಪರಿಶೀಲನೆ ನಡೆಸುತ್ತಿತ್ತು. ಪರವಾನಗಿ ಇಲ್ಲದೆ ಅಕ್ರಮವಾಗಿ ಇರಿಸಲಾಗಿತ್ತು. ಕೋವಲ್ಲೂರು ಪೊಲೀಸರು ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಈ ಕುರಿತು ವರದಿ ಮಾಡಿರುವ ವಾರ್ತಾ ಭಾರತಿ “ವಾರ್ತಾ ಭಾರತಿಯೊಂದಿಗೆ ದೂರವಾಣಿ ಕರೆಯಲ್ಲಿ ಮಾತನಾಡಿದ ಕೊಳವಲ್ಲೂರು SHO, ಸ್ಪೋಟಕಗಳನ್ನು ವಶಪಡಿಸಿಕೊಂಡಿರುವುದು ನಿಜ. ಆದರೆ ಈ ಸ್ಫೋಟಕಗಳನ್ನು ಯುಗಾದಿ ಹಬ್ಬದ ಸಮಯದಲ್ಲಿ ಪಟಾಕಿಗಳಿಗಾಗಿ ಬಳಸಲಾಗುತ್ತಿತ್ತು ಎಂದು ಹೇಳಿದರು. ಈ ಸಂಬಂಧ ಪ್ರಮೋದ್‌ನನ್ನು ಬಂಧಿಸಲಾಗಿದೆ ಎಂದೂ ಅವರು ತಿಳಿಸಿದರು” ಎಂದು ಹೇಳಿದೆ.

Related Articles

ಇತ್ತೀಚಿನ ಸುದ್ದಿಗಳು