Thursday, June 13, 2024

ಸತ್ಯ | ನ್ಯಾಯ |ಧರ್ಮ

ಇಸ್ರೇಲ್ ಗೆ 800 ಕೋಟಿ ಡಾಲರ್ ನೆರವು : ಜೋ ಬೈಡೆನ್ ಘೋಷಣೆ

ಇಸ್ರೇಲ್ ಮೇಲಿನ ಹಮಾಸ್ ಉಗ್ರರ ದಾಳಿಯ ಬೆನ್ನಲ್ಲೇ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯೂ ಪ್ಯಾಲೆಸ್ತೇನ್ ಮೇಲೆ ಯುದ್ಧ ಘೋಷಿಸಿದ್ದಾರೆ. ಗಲಭೆಗ್ರಸ್ಥ ಇಸ್ರೇಲ್ ನ ನೆರವಿಗೆ ಜಗತ್ತಿನ ಬಲಿಷ್ಠ ರಾಷ್ಟ್ರಗಳು ಕೈ ಜೋಡಿಸುವುದಾಗಿ ಘೋಷಿಸಿದ್ದಾರೆ. ಅದರಂತೆ ಅಮೇರಿಕಾ ಕೂಡಾ 800 ಕೋಟಿ ಡಾಲರ್ ಮೌಲ್ಯದ ತುರ್ತು ಸೇನಾ ನೆರವನ್ನು ಘೋಷಿಸಿದೆ.

ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರು ಸೇನಾ ನೆರವಿನ ಪ್ಯಾಕೇಜ್ ಅನ್ನು ಘೋಷಿಸಿದ್ದು, ಹಮಾಸ್ ಉಗ್ರರ ದಾಳಿಯ ಬಗ್ಗೆ ಇಸ್ರೇಲ್ ಪ್ರಧಾನಿಗೆ ಕರೆ ಮಾಡಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಗಾಜಾದಿಂದ ನಡೆದಿದ್ದ ಹಮಾಸ್ ಉಗ್ರರ ದಾಳಿಯನ್ನು ಖಂಡಿಸಿದ ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ನೆರವಿನ ಬಗ್ಗೆ ಇಸ್ರೇಲ್ ಗೆ ಅಭಯ ಸೂಚಿಸಿದ್ದಾರೆ. ಇಸ್ರೇಲ್ ಮತ್ತು ಅಮೆರಿಕ ನಡುವೆ ಹಲಧು ವ್ಯತಿರಿಕ್ತ ಅಭಿಪ್ರಾಯಗಳು ಇದ್ದುದ್ದರ ನಡುವೆಯೂ ಹಿಂದಿನ ತಿಂಗಳು ಉಭಯ ನಾಯಕರು ಭೇಟಿಯಾಗಿ ಪರಸ್ಪರ ಸಹಕಾರ ನೀಡುವ ಮಾತುಗಳನ್ನಾಡಿದ್ದರು.

ಇಸ್ರೇಲ್‌ಗೆ ತನ್ನನ್ನು ಹಾಗೂ ತನ್ನ ಜನರನ್ನು ರಕ್ಷಿಸಿಕೊಳ್ಳುವ ಹಕ್ಕಿದೆ‌. ಇಸ್ರೇಲ್‌ನ ಈ ಪರಿಸ್ಥಿತಿಯನ್ನು ಅವಕಾಶವನ್ನಾಗಿ ಬಳಸಿಕೊಳ್ಳುವ ಯಾವುದೇ ದೇಶ ಅಥವಾ ಗುಂಪು ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಎಚ್ಚರಿಕೆ ನೀಡುತ್ತದೆ ಎಂದು ಜೋ ಬೈಡೆನ್ ಹೇಳಿದ್ದರು.

ಗಾಜಾ ಪಟ್ಟಿಯ ಕಡೆಯಿಂದ ಇಸ್ರೇಲ್ ಮೇಲೆ 5000 ರಾಕೆಟ್​ಗಳ ದಾಳಿ ನಡೆಸಲಾಗಿದೆ ಹೀಗಾಗಿ ಇಸ್ರೇಲ್ ಯುದ್ಧವನ್ನೇ ಘೋಷಣೆ ಮಾಡಿದೆ. ಬೆಳಗ್ಗೆಯಿಂದಲೇ ಇಸ್ರೇಲ್ ಮೇಲೆ ರಾಕೆಟ್ ದಾಳಿ ಆರಂಭವಾಗಿದ್ದು, ದಿಗ್ಭಂಧನಕ್ಕೊಳಗಾಗಿರುವ ಗಾಜಾ ಪಟ್ಟಿಯ ಹಲವಾರು ಕಡೆಗಳಿಂದ ರಾಕೆಟ್‌ ಉಡಾಯಿಸಲಾಗಿದೆ. ಇಸ್ರೇಲ್‌ನಲ್ಲಿ ಭಯೋತ್ಪಾದಕರೆಂದು ಪರಿಗಣಿಸಲ್ಪಟ್ಟಿರುವ ಹಮಾಸ್ ಉಗ್ರಗಾಮಿಗಳ ಒಳನುಸುಳುವಿಕೆಯ ಬಗ್ಗೆ ದೇಶದ ರಕ್ಷಣಾ ಪಡೆಗಳು ಎಚ್ಚರಿಕೆ ನೀಡಿವೆ.

Related Articles

ಇತ್ತೀಚಿನ ಸುದ್ದಿಗಳು