Monday, July 28, 2025

ಸತ್ಯ | ನ್ಯಾಯ |ಧರ್ಮ

96ನೇ ದಿನಕ್ಕೆ ಕಾಲಿಟ್ಟ ಮಾಯಾಮುಡಿಯ ನಿರಂತರ ಅಹೋರಾತ್ರಿ ಸತ್ಯಾಗ್ರಹ

ಕೊಡಗು : ಕೊಡಗಿನ ಲೈನ್‌ಮನೆಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂಗದವರು ತಮ್ಮ ನಿವೇಶನ ಹಕ್ಕು ಪತ್ರಕ್ಕಾಗಿ ಸುಮಾರು 96 ದಿನಗಳಿಂದ ನಿರಂತರ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ. ಆದರೆ ಅಧಿಕಾರಿಗಳು ಬಂದು ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆಯೇ ಹೊರತು ಯಾವೊಬ್ಬ ಅಧಿಕಾರಿ ಈ ಬಗ್ಗೆ ಕ್ರಮ ಕೈಗೊಂಡಿಲ್ಲದರಿಂದ  ಪ್ರತಿಭಟನಾಕಾರರೆಲ್ಲಾ ಸೇರಿ ಪೊನ್ನಂಪೇಟೆ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಪ್ರತಿಭಟನೆಯಲ್ಲಿ ಭಾಗವಹಿಸುತ್ತಲೇ ಬಂದ ಲೈನ್‌ಮನೆವಾಸಿಯಾದ ಜ್ಯೋತಿ ಎಂಬುವವರು, ʼ ನಮಗೆ ಈ ಲೈನ್‌ಮನೆಗಳಲ್ಲಿ ವಾಸಿಸಲು ತುಂಬಾ ಕಷ್ಟವಾಗುತ್ತಿದೆ. ಯಾವುದಕ್ಕೂ ನಮಗೆ ಸ್ವಾತಂತ್ರ್ಯವಿಲ್ಲ. ಇವರು ಕೊಡುವ 150 ರೂ ಗಳಿಗೆ ನಮ್ಮ ಮಕ್ಕಳಿಗೆ ಶಾಲೆಗೆ ಕಳಿಸಲು ಆಗುತ್ತಿಲ್ಲ. ಹಬ್ಬ ಹರಿದಿನಗಳು ಮಾಡಬೇಕಾದರೂ ಮಾಲಿಕರನ್ನು ಕೇಳಬೇಕುʼ ಎಂದು ತಮ್ಮ ಅಸಹಾಯಕತೆಯನ್ನು ಪೀಪಲ್‌ ಮೀಡಿಯಾದೊಂದಿಗೆ ಹಂಚಿಕೊಂಡರು.

ಈ ನಿರಂತರ ಹೋರಾಟಕ್ಕೆ ನವೆಂಬರ್‌ 4ರಂದು  ಮಾಯಮುಡಿ ಪಂಚಾಯ್ತಿ ವ್ಯಾಪ್ತಿಯಲ್ಲಿ 94 ದಿನಗಳು ಪೊನ್ನಂಪೇಟೆ ತಾಲೂಕು ಪಂಚಾಯ್ತಿ ಕಛೇರಿ ಎದುರು 81 ನೇ ದಿನಗಳು ಮುಗಿದಿತ್ತು. ಆದ್ದರಿಂದ ಪ್ರತಿಭಟನಾಕಾರರೆಲ್ಲಾ ಸೇರಿ ಪೊನ್ನಂಪೇಟೆ ತಾಲೂಕು ಪಂಚಾಯ್ತಿ ಕಛೇರಿ ಯಿಂದ ಪೊನ್ನಂಪೇಟೆ ತಹಶೀಲ್ದಾರ್ ಕಛೇರಿಗೆ ಕಾಲ್ನಡಿಗೆ ಜಾಥಾ ನಡೆಸಿ ಹಕ್ಕುಪತ್ರಕ್ಕಾಗಿ ಮನವಿ ಮಾಡಿದ್ದರು. ನೆನ್ನೆ ವಿರಾಜಪೇಟೆ ತಾಲ್ಲೂಕು ಪಂಚಾಯಿತಿಗೆ ಹೋಗಿ ಮಾತನಾಡಿದ್ದಾರೆ. ಆದರೆ ಕೆಲಸ ಆಗುತ್ತೆ ಅಂತ ಹೇಳುತ್ತಾರೆಯೇ ಹೊರತು ಯಾವುದೂ ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಅಲ್ಲಿನ ಒಬ್ಬ ಪ್ರತಿಭಟನಾಕಾರರು ಮಾತನಾಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page