Thursday, June 13, 2024

ಸತ್ಯ | ನ್ಯಾಯ |ಧರ್ಮ

‘ಭಾರತ್ ಜೋಡೋ’ದಲ್ಲಿ ದೇಶದ ನಿರುದ್ಯೋಗ ಸಮಸ್ಯೆ ಬಗ್ಗೆ ಆಕ್ರೋಶ

ಕರ್ನಾಟಕದಲ್ಲಿ 13 ನೇ ದಿನಕ್ಕೆ ಕಾಲಿಟ್ಟ ‘ಭಾರತ ಐಕ್ಯತಾ ಯಾತ್ರೆ’ಯಲ್ಲಿ ಈ ದಿನ ಭಾರತದ ನಿರುದ್ಯೋಗ ಸಮಸ್ಯೆ ಹೆಚ್ಚು ಚರ್ಚಿತವಾಗಿದೆ. ಚಿತ್ರದುರ್ಗ ಜಿಲ್ಲೆಯ ಗಿರಿಯಮ್ಮನ ಹಳ್ಳಿಯಲ್ಲಿ ರಾಜ್ಯದ ಯುವಜನ ಮತ್ತು ವಿಧ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ರಾಹುಲ್ ಗಾಂಧಿ, ಹೆಚ್ಚಿರುವ ನಿರುದ್ಯೋಗ ಸಮಸ್ಯೆ, ಅದರಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಚರ್ಚೆ ನಡೆಸಿದರು.

‘ಬಿಜೆಪಿ ಪಕ್ಷ ಚುನಾವಣೆಗೂ ಮುನ್ನ ಕೊಟ್ಟ ಆಶ್ವಾಸನೆಯಂತೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ನೀಡಿತ್ತು. ವರ್ಷಕ್ಕೆ ಎರಡು ಕೋಟಿ ಎಂದರೆ 8 ವರ್ಷಕ್ಕೆ ಸರ್ಕಾರದ ಕಡೆಯಿಂದ 16 ಕೋಟಿ ಉದ್ಯೋಗ ಸೃಷ್ಟಿ ಆಗಬೇಕಿತ್ತು. ಆದರೆ ಜಾಗತಿಕ ನಿರುದ್ಯೋಗ ಪ್ರಮಾಣದಲ್ಲಿ ಭಾರತ ಅಗ್ರಸ್ಥಾನಕ್ಕೇರುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಈ ಹಂತದಲ್ಲಿ ಭಾರತದ ಇಂದಿನ ನಿರುದ್ಯೋಗದ ಪ್ರಮಾಣ 45 ವರ್ಷಗಳಷ್ಟು ಹಿಂದಕ್ಕೆ ಜಾರಿದೆ’ ಎಂದು ಕಾಂಗ್ರೆಸ್ ಭಾರತ ಐಕ್ಯತಾ ಯಾತ್ರೆಯಲ್ಲಿ ರಾಹುಲ್ ಗಾಂಧಿ ಪುನರುಚ್ಛರಿಸಿದ್ದಾರೆ.

ಯುವಕರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡರು ಈ ದಿನದ ಪಾದಯಾತ್ರೆಯಲ್ಲಿ ಬಹುತೇಕ ಭಾರತದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯನ್ನೇ ಕೇಂದ್ರೀಕರಿಸಿ ದನಿ ಏರಿಸಿದ್ದಾರೆ. ‘ಯಾತ್ರೆ ಸಮಯದಲ್ಲಿ, ರಾಹುಲ್ ಗಾಂಧಿ ಇದುವರೆಗೆ ಸಾವಿರಾರು ಯುವಕರನ್ನು ಭೇಟಿ ಮಾಡಿದ್ದಾರೆ. ಬಹುತೇಕ ಎಲ್ಲರೂ ನಿರುದ್ಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ಬಿಜೆಪಿ ಪಕ್ಷ ಅಸಲಿ ಸಮಸ್ಯೆ ಮುಚ್ಚಿ ಹಾಕಲು ಇಲ್ಲದ ಸಮಸ್ಯೆ ಸೃಷ್ಟಿಸಿ ಯುವ ಜನತೆಯನ್ನು ದಾರಿ ತಪ್ಪಿಸುತ್ತಿದೆ. ಇದೇ ಬಿಜೆಪಿ ಅಜೆಂಡಾ’ ಎಂದು ಎದುರೇಟು ನೀಡಿದೆ.

‘ಭಾರತದಲ್ಲಿ ಇಲ್ಲಿಯವರೆಗೂ 45 ಕೋಟಿ ಜನರು ಈ ಹಿಂದೆ ಇದ್ದ ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ಉನ್ನತ ಪದವಿ ಪಡೆದುಕೊಂಡ ಅಸಂಖ್ಯಾತ ಪದವೀಧರರು ಕೂಲಿಕಾರರ ಕೆಲಸಕ್ಕೆ ಹೋಗುತ್ತಿರುವುದು ಭಾರತದ ದೌರ್ಭಾಗ್ಯ. ಇದು ಭಾರತದ ಯುವ ಜನತೆಗೆ ಮೋದಿ ಸರ್ಕಾರ ಕೊಟ್ಟ ಮಾಸ್ಟರ್ ಸ್ಟ್ರೋಕ್’ ಎಂದು ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

‘ಯಾವ ದಿನ ಈ ದೇಶದ ಯುವಕರು ನಿರುದ್ಯೋಗ ಸಮಸ್ಯೆ ಬಗ್ಗೆ, ಸರ್ಕಾರದ ಅವ್ಯವಸ್ಥೆ ವಿರುದ್ಧ ಮಾಡುತ್ತಾರೆಯೋ ಆ ದಿನವೇ ಅಧಿಕಾರದಲ್ಲಿರುವ ಈ ವಿದ್ಯಾರ್ಥಿ ವಿರೋಧಿ ಸರ್ಕಾರದ ಕೊನೆಯ ದಿನವಾಗಿರುತ್ತದೆ’ ಎಂದೂ ಸಹ ಟ್ವಿಟ್ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು