Monday, June 17, 2024

ಸತ್ಯ | ನ್ಯಾಯ |ಧರ್ಮ

ನರೇಂದ್ರ ಮೋದಿ ವಿಶ್ವಗುರು ಅಲ್ಲ: ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ವಿರೋಧ

ಬೆಂಗಳೂರು : ಬಿಜೆಪಿಯವರ ನಾಲ್ಕು ದಿನಗಳ ಜನಸಂಕಲ್ಪ ಯಾತ್ರೆಯ ಕುರಿತು ನಡೆದ ಕಾರ್ಯಕ್ರಮದಲ್ಲಿ ಬಿಎಸ್‌ ಯಡಿಯೂರಪ್ಪನವರು ರಾಹುಲ್‌ ಗಾಂಧಿಯ ವಿರುದ್ದ ಮಾತನಾಡಿದ್ದರು. ಈ ಹಿನ್ನಲೆಯಲ್ಲಿ  ಸವಾಲೆಸಗಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ರಾಜ್ಯ ಬಿಜೆಪಿ ಘಟಕ ವಿರೋಧ ವ್ಯಕ್ತ ಪಡಿಸಿದೆ.

ಜನಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಬಿ.ಎಸ್‌ ಯಡಿಯೂರಪ್ಪನವರು ಪ್ರಪಂಚವೇ ಒಪ್ಪುವ ನರೇಂದ್ರ ಮೋದಿಯ ಬಗ್ಗೆ ಹಗುರವಾಗಿ ಮಾತನಾಡುವ ರಾಹುಲ್‌ ಗಾಂಧಿ ಬಚ್ಚಾ ಎಂಬ ಪದವನ್ನು ಬಳಸಿದ್ದರು.ಈ ಬಗ್ಗೆ ಅಕ್ರೋಶ ವ್ಯಕ್ತ ಪಡಿಸಿದ ಸಿದ್ದರಾಮಯ್ಯನವರು “ರಾಹುಲ್ ಗಾಂಧಿಯವರನ್ನು ಬಚ್ಚಾ ಎಂದು ಹೇಳುವ ಯಾಡಿಯೂರಪ್ಪನವರೇ ನಿಮ್ಮ ನರೇಂದ್ರ ಮೋದಿಯವರು ವಿಶ್ವಗುರು ಅಲ್ಲ ಅವರೊಬ್ಬ ಪುಕ್ಕಲು ಗುರು. ಅವರು ನಮ್ಮನ್ನು ಎದುರಿಸುವುದು ಬೇಡ, ಧೈರ್ಯವಿದ್ದರೆ ಒಂದು ಪತ್ರಿಕಾಗೋಷ್ಠಿ ನಡೆಸಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ಹೇಳಿ” ಎಂದು ಸವಾಲಾಕಿದ್ದರು.

ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ ”ಮಾನ್ಯ ಸಿದ್ದರಾಮಯ್ಯನವರೇ, ಅಪ್ರಬುದ್ಧ ರಾಹುಲರನ್ನು ಅನ್ವರ್ಥನಾಮದಲ್ಲಿ ಕರೆದರೆ ನಿಮಗೇಕೆ ಇಷ್ಟೊಂದು ಉರಿ? ನಮ್ಮ ಪ್ರಧಾನಿಯ ತಾಕತ್ತನ್ನು ಜಗತ್ತೇ ಗೌರವಿಸುತ್ತಿದೆ. 2014 ಮತ್ತು 2019 ರಲ್ಲಿ ಇದೇ ಮೋದಿಯ ಪ್ರಭಾವದಿಂದ ಕಾಂಗ್ರೆಸ್ ತರಗೆಲೆಯಂತಾಗಿದ್ದನ್ನು ನೀವು ಮರೆತಿರಾ?” ಎಂದು ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು