Tuesday, June 18, 2024

ಸತ್ಯ | ನ್ಯಾಯ |ಧರ್ಮ

ಮಾರ್ಕ್ ಜುಕರ್ಬರ್ಗ್ ಗೂ ತಟ್ಟಿದ ಫೇಸ್ಬುಕ್ ತಾಂತ್ರಿಕ ದೋಷ

ಮೇಟಾ ಒಡೆತನದ ಫೇಸ್ಬುಕ್ ನಲ್ಲಿ ಏಕಾಏಕಿ ಫಾಲೋವರ್ಸ್ ಸಂಖ್ಯೆಯಲ್ಲಿ ಕುಸಿತ ಕಂಡ ಹಿನ್ನೆಲೆಯಲ್ಲಿ ಬಹುತೇಕ ಮಂದಿ ಈ ಬಗ್ಗೆ ಹಂಚಿಕೊಂಡು ಆಶ್ಚರ್ಯ ವ್ಯಕ್ತಪಡಿಸಿದ್ದರು. ಸಧ್ಯ ಈ ಬಗ್ಗೆ ಫೇಸ್ಬುಕ್ ಸಂಸ್ಥೆ ಸ್ಪಷ್ಟಪಡಿಸಿದ್ದು ತಾಂತ್ರಿಕ ದೋಷದ ಕಾರಣದಿಂದ ಫೇಸ್ಬುಕ್ ನಲ್ಲಿ ಹಲವಷ್ಟು ಜನರ ಸಾವಿರ ಲಕ್ಷದಷ್ಟು ಇದ್ದ ಫಾಲೋವರ್ಸ್ ಸಂಖ್ಯೆ ಏಕಾಏಕಿ ಇಳಿದಿದೆ ಎಂದು ಫೇಸ್ಬುಕ್ ತಿಳಿಸಿದೆ.

ಆಶ್ಚರ್ಯ ಮತ್ತು ತಮಾಷೆಯ ವಿಷಯ ಎಂದರೆ ಈ ತಾಂತ್ರಿಕ ದೋಷದ ಆಘಾತ ಸ್ವತಃ ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಗೂ ಬಿದ್ದಿದ್ದು ಈ ದಿನ ಜುಕರ್ಬರ್ಗ್ ಫಾಲೋವರ್ಸ್ ಸಂಖ್ಯೆ ಕೂಡಾ 10,000 ಕ್ಕೆ ಇಳಿದಿದೆ.

ಫೇಸ್ಬುಕ್ನಲ್ಲಿ ಮಾರ್ಕ್ ಜುಕರ್ಬರ್ಗ್ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ವ್ಯಕ್ತಿ ಆಗಿದ್ದು ಕೋಟಿಗಟ್ಟಲೆ ಮಂದಿ ಜುಕರ್ಬರ್ಗ್ ರನ್ನು ಫಾಲೋ ಮಾಡುವವರಿದ್ದರು. ಆದರೆ ಈ ದಿನ ಜುಕರ್ಬರ್ಗ್ ಗೂ ತಾಂತ್ರಿಕ ದೋಷದ ಬಿಸಿ ತಟ್ಟಿದೆ.

ಸಧ್ಯ ಈ ಸಮಸ್ಯೆಯನ್ನು ಫೇಸ್ಬುಕ್ ಸರಿಪಡಿಸಿದ್ದು, ಬಹುತೇಕರ ಫೇಸ್ಬುಕ್ ಫಾಲೋವರ್ಸ್ ಸಂಖ್ಯೆ ಮೊದಲಿನಂತೆ ಪಡೆದುಕೊಂಡಿದ್ದಾರೆ. ಹಾಗೇ ಇನ್ನೂ ರಿಕವರ್ ಆಗದೇ ಇದ್ದವರ ಫಾಲೋವರ್ಸ್ ಸಂಖ್ಯೆಯ ಸಮಸ್ಯೆಯನ್ನು ಸಧ್ಯದಲ್ಲೇ ಬಗೆಹರಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು