Sunday, June 16, 2024

ಸತ್ಯ | ನ್ಯಾಯ |ಧರ್ಮ

60 ಸಾವಿರ ಕುಟುಂಬಗಳಿಗೆ ಹಕ್ಕು ಪತ್ರ : ಆರ್ ಅಶೋಕ್

ಬೆಂಗಳೂರು : ರಾಜ್ಯದಲ್ಲಿ ಇದುವರೆಗೂ ಗುರುತೇ ಇಲ್ಲದ ತಾಂಡಾ, ಹಟ್ಟಿ, ಹಾಡಿ, ದೊಡ್ಡಿಯಂತಹ ಸುಮಾರು 3500 ಕ್ಕೂ ಹೆಚ್ಚು ಗ್ರಾಮಗಳಿಗೆ ಹೆಸರು, ವಿಳಾಸಗಳನ್ನು ಕೊಟ್ಟು ಕಂದಾಯ ಗ್ರಾಮಗಳಾಗಿ ಮಾಡುವ ಕಾಲಾವಕಾಶ ಕೂಡಿ ಬಂದಿದೆ. ಈ ವಿಚಾರವಾಗಿ ನವೆಂಬರ್‌ ಕೊನೆಯ ವಾರದೊಳಗೆ 60 ಸಾವಿರ ಕುಟುಂಬಗಳಿಗೆ ಹಕ್ಕು ಪತ್ರಗಳನ್ನು ನೀಡುವುದಾಗಿ ಕಂದಾಯ ಸಚಿವ ಆರ್ ಅಶೋಕ್‌ ತಿಳಿಸಿದರು.

ಸುಮಾರು 3500 ಕ್ಕೂ ಪರಿಚಯವೇ ಇಲ್ಲದ ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತನೆಯಾಗಿರದ ಕಾರಣ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದರು. ಸರ್ಕಾರ ಈ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ನಿರ್ಧಾರ ಮಾಡಿದೆ. 60 ಸಾವಿರ ಕುಟುಂಬಗಳಿಗೆ ಅವರು ವಾಸಿಸುತ್ತಿದ್ದ ಜಾಗವನ್ನು ನೋಂದಣಿ ಮಾಡಿಸಿಕೊಡಲಾಗುವುದು ಎಂದು ಹೇಳಿದರು.

ಕಲಬುರಗಿ ಮತ್ತು ದಾವಣಗೆರೆಯಲ್ಲಿ ಪ್ರತ್ಯೇಕ ಸಮಾವೇಶಗಳನ್ನು ಏರ್ಪಡಿಸಿ ಹಕ್ಕು ಪತ್ರಗಳನ್ನು ನೀಡಲಾಗುತ್ತದೆ. ಈ ಯೋಜನೆಗೆ ಯಾದಗಿರಿ, ರಾಯಚೂರು, ವಿಜಯಪುರ, ಬೀದರ್‌, ದಾವಣಗೆರೆ ಮತ್ತು ಕಲಬುರಗಿ ಜಿಲ್ಲೆಗಳು ಮೊದಲ ಆದ್ಯತೆಯಾಗಿದೆ. ಶೇ.90 ರಷ್ಟು ಭೂಮಿ ಸರ್ಕಾರದ ಜಾಗವೇ ಆಗಿರುವುದರಿಂದ ಈ ಕಾರ್ಯಕ್ರಮಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಅಂದುಕೊಂಡಿದ್ದೇವೆ. ಒಂದು ವೇಳೆ ಭೂಮಿ ಖಾಸಗಿ ವ್ಯಕ್ತಿಗಳಾಗಿದ್ದರೆ ಭೂಮಾಲಿಕರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದು. ಈ ಹಕ್ಕು ಪತ್ರ ನೀಡುವ ವಿಚಾರವಾಗಿ ಖಾಸಗಿ ವ್ಯಕ್ತಿಗಳಿಗೆ ಆಕ್ಷೇಪಣೆ ಇದ್ದರೆ ಅದನ್ನು ತಿಳಿಸಲು ಸರ್ಕಾರ ಏಳು ದಿನಗಳ ಕಾಲಾವಕಾಶ ನೀಡಿದೆ ಎಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್‌. ಅಶೋಕ್‌ ಮಾಹಿತಿ ನೀಡಿದರು.

Related Articles

ಇತ್ತೀಚಿನ ಸುದ್ದಿಗಳು