Sunday, June 16, 2024

ಸತ್ಯ | ನ್ಯಾಯ |ಧರ್ಮ

ಶಿಕ್ಷಕರೇ ರಾಕ್ಷಸರಾದಾಗ ಮಕ್ಕಳಿಗೆ ರಕ್ಷಣೆ ಯಾರು? : ಅತ್ಯಾಚಾರದ ವಿರುದ್ದ ಮಕ್ಕಳ ಪ್ರತಿಭಟನೆ

ಮಂಡ್ಯ: ಅಕ್ಟೋಬರ್‌ 11, 2022ರಂದು ಹತ್ತು ವರ್ಷದ ಬಾಲಕಿಯನ್ನು ಅತ್ಯಾಚಾರ ಹಾಗೂ ಕೊಲೆ ಮಾಡಿರುವ ಘಟನೆ ನಡೆದಿದ್ದು, ಅಪರಾಧಿಗೆ ಕಠಿಣ ಆಗಬೇಕು ಎಂದು ಶಾಲಾ ಮಕ್ಕಳು ಸೇರಿದಂತೆ ಹಲವರು ಚನ್ನಪಟ್ಟಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಮೂರು ದಿನದ ಹಿಂದೆ ನಡೆದ ಹತ್ತು ವರ್ಷದ ಚಿಕ್ಕ ಹುಡುಗಿ, ದಿವ್ಯಾಳ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದ್ದರ ವಿರುದ್ಧ ಕನ್ನಡ ಹಿತರಕ್ಷಣಾ ವೇದಿಕೆ ಮತ್ತು ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಸಹಯೋಗದೊಂದಿಗೆ ನೂರಾರು ಹೆಣ್ಣುಮಕ್ಕಳು ವಿದ್ಯಾರ್ಥಿಗಳು, ಸಂಘಟನೆಗಳು, ಹೋರಾಟಗಾರರು ಸೇರಿ ಚನ್ನಪಟ್ಟಣದಲ್ಲಿ ಇಂದು ಪೋಸ್ಟಾಫೀಸ್ ವೃತ್ತದ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಅಕ್ಟೋಬರ್‌ 11, 2022ರಂದು ಹತ್ತು ವರ್ಷದ ಬಾಲಕಿಯನ್ನು ಅತ್ಯಾಚಾರ ಹಾಗೂ ಕೊಲೆ ಮಾಡಿರುವ ದುರ್ಘಟನೆ ನಡೆದಿದೆ. ಕೊಲೆ ಬಳಿಕ ಆಕೆಯ ಮೃತದೇಹವನ್ನು ನಿರ್ಮಾಣ ಹಂತದ ಕಟ್ಟಡದ ಸಂಪ್‌ ಒಳಗೆ ಎಸೆದಿರುವ ಅಮಾನವೀಯ ಘಟನೆ ನಡೆದಿದೆ. ಇಂತಹ ನೀಚ ಕೃತ್ಯಗಳನ್ನು ಪಾಠ ಹೇಳಿಕೊಡುವ ಶಿಕ್ಷಕರೇ ಮಾಡಿದಾಗ ಸಮಾಜದಲ್ಲಿ ಮತ್ಯಾರನ್ನು ನಂಬಬೇಕು ಎನ್ನುವುದು ಮಕ್ಕಳ ಪ್ರಶ್ನೆಯಾಗಿದೆ. ಈ ವಿರುದ್ದ ಅಪರಾಧಿಗೆ ಕಠಿಣ ಶಿಕ್ಷೆಯಾಗಬೇಕು. ಇಲ್ಲದಿದ್ದರೆ ಇಂತಹ ದುರ್ಘಟನೆಗಳಿಗೆ ಮತ್ತಷ್ಟು ಹೆಣ್ಣು ಮಕ್ಕಳು ಬಲಿಯಾಗಬೇಕಾಗುತ್ತದೆ ಎಂದು ರಾಜ್ಯದ ಹಲವಾರು ಕಡೆಯಿಂದ ಹೆಣ್ಣು ಮಕ್ಕಳ ಕೂಗು ಕೇಳಿಬರುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು