Sunday, June 16, 2024

ಸತ್ಯ | ನ್ಯಾಯ |ಧರ್ಮ

ಹಿಂದೂ-ಮುಸ್ಲಿಂ ಸೌಹಾರ್ದಕ್ಕೆ ಸಾಕ್ಷಿಯಾದ ದೊಡ್ಡಮಾಗಡಿ ಗ್ರಾಮ

ದಾವಣಗೆರೆ: ಜಿಲ್ಲೆಯ ಮಾಯಕೊಂಡ ಹತ್ತಿರವಿರುವ ದೊಡ್ಡಮಾಗಡಿ ಗ್ರಾಮದಲ್ಲಿ  ಹಿಂದೂಗಳೇ ಮೊಹರಂ ಆಚರಣೆ ಮಾಡುವ ಮೂಲಕ ಸೌಹಾರ್ದತೆಗೆ ಸಾಕ್ಷಿಯಾದರು.

ಮುಸ್ಲಿಂ ಜನರೇ ಇಲ್ಲದ ಪುಟ್ಟ ಊರು ದೊಡ್ಡಮಾಗಡಿ, ಇಲ್ಲಿ ಪುರಾತನ ಕಾಲದಿಂದಲೂ ಹಿಂದುಗಳೇ ಮೊಹರಂ ಹಬ್ಬವನ್ನು ಆಚರಣೆಮಾಡಿಕೊಂಡು ಬಂದಿದ್ದಾರೆ. ಮೊಹರಂ ಬಂದಾಗ ಪೂಜೆ ಸಲ್ಲಿಸಲು ಬರು ಮುಸ್ಲಿಂರನ್ನು ಒಳಗೊಂಡು ಗ್ರಾಮಸ್ಥರೆಲ್ಲಾ ಸೇರಿ ಊರಿಗೆಲ್ಲಾ ಸಿಂಗಾರ ಮಾಡಿ ಮುಸ್ಲಿಂ ಸಂಪ್ರದಾಯದಂತೆ ಹಬ್ಬವನ್ನು ಆಚರಣೆ ಮಾಡುತ್ತಾರೆ.

ಮೊಹರಂ ಹಿಂದಿನ ದಿನವಾದ ಕತ್ತಲರಾತ್ರಿ ದಿನದಂದು ವಿಶೇಷ ಕಾರ್ಯಕ್ರಮ ನಡೆಯುತ್ತದೆ. ನಂತರ ಒಂಭತ್ತನೇ ದಿನ ಮುಂಜಾನೆ ಕೆಂಡ ತುಳಿದು. ರಾತ್ರಿ ಪೀರ್ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಸಕ್ಕರೆ ಹಂಚುವ ಮೂಲಕ. ಮೊಹರಂ ಹಬ್ಬವನ್ನು ಮುಸ್ಲಿಂ ಸಂಪ್ರದಾಯದಂತೆ ಆಚರಣೆ ಮಾಡಿದರು.

Related Articles

ಇತ್ತೀಚಿನ ಸುದ್ದಿಗಳು