Saturday, June 15, 2024

ಸತ್ಯ | ನ್ಯಾಯ |ಧರ್ಮ

ʼಹರ್‌ ಘರ್‌ʼ ತಿರಂಗ ಅಭಿಯಾನಕ್ಕೆ ಮನೆ ಇಲ್ಲದವರಿಗೆ ಮನೆ ಕಟ್ಟಿಸಿಕೊಡಿ : ಹೆಚ್​​.ಸಿ. ಮಹದೇವಪ್ಪ

ಬೆಂಗಳೂರು: ಭಾರತ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ನೆನಪಿಗಾಗಿ ಆಗಸ್ಟ್ 2 ರಿಂದ ಆಗಸ್ಟ್ 15 ರ ನಡುವೆ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ‘ಹರ್ ಘರ್ ತಿರಂಗ’ ಅಭಿಯಾನವನ್ನು ಸಾಮೂಹಿಕ ಆಂದೋಲನವಾಗಿ ಪರಿವರ್ತಿಸಲು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಎಲ್ಲಾ ನಾಗರಿಕರಿಗೆ ಕರೆ ನೀಡಿದ್ದರು. ಈ ಕುರಿತು ಮಾಜಿ ಸಚಿವ ಡಾ. ಹೆಚ್​​.ಸಿ. ಮಹದೇವಪ್ಪ  ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮನೆ ಮನೆಯಲ್ಲೂ ತಿರಂಗ ಹಾರಿಸಬೇಕು ಎನ್ನುವುದು ದೇಶದ ಆದರ್ಶ ಎನಿಸಿಕೊಂಡರೆ ತಿರಂಗ ಹಾರಿಸಲೂ ಕೂಡಾ ಮನೆಯಿಲ್ಲದ ಬಡವರಿದ್ದು, ಅವರಿಗೆ ಮನೆ ನೀಡುವ ಜವಾಬ್ದಾರಿಯನ್ನು ಪೂರೈಸಬೇಕು ಎನ್ನುವುದು ನಿಜವಾದ ದೇಶಭಕ್ತಿ ಎನಿಸಿಕೊಳ್ಳುತ್ತದೆ ಎಂದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು