Wednesday, June 19, 2024

ಸತ್ಯ | ನ್ಯಾಯ |ಧರ್ಮ

ನಟ ಚೇತನ್‌ ವಿರುದ್ದ ಹಿಂದೂ ಜಾಗರಣೆ ವೇದಿಕೆ ದೂರು

ಬೆಂಗಳೂರು : ಕಾಂತಾರ ಸಿನಿಮಾ ಕುರಿತು ʼಭೂತಕೋಲ ಹಿಂದೂ ಧರ್ಮದಲ್ಲಿ ಬರೋದಿಲ್ಲʼ ಎಂದು ಹೇಳಿದ ನಟ ಚೇತನ್‌ ವಿರುದ್ದ ಹಿಂದೂ ಜಾಗರಣೆ ವೇದಿಕೆ ದೂರು ದಾಖಲಿಸಿದ್ದಾರೆ.

ಬೆಂಗಳೂರಿನಲ್ಲಿ ಕಾಂತಾರ ಸಿನಿಮಾದ ವಿವಾದಾತ್ಮಕ ಪೋಸ್ಟ್‌ ವಿಚಾರದ ಬಗ್ಗೆ ಮಾತನಾಡಿದ ಚೇತನ್‌, ʼಭೂತಕೋಲ ಹಿಂದೂ ಧರ್ಮದಲ್ಲಿ ಬರೋದಿಲ್ಲʼ ಎಂದು ಹೇಳಿದ್ದರು. ಹಿಂದೂ ಧರ್ಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಕೊರಗ ಪಂಪದ ಎಂಬುದು ಬೇರೆ ಸಮುದಾಯವಿದೆ. ಕೊರಗ ಸಮುದಾಯದಲ್ಲಿ ಅವರದ್ದೇ ಆದ ಸಂಸ್ಕೃತಿ ಇದೆ. ಈ ಮೂಲ ನಿವಾಸಿಗಳು ಭ್ರಾಹ್ಮಣ್ಯಕ್ಕೆ ಒಳಪಡುವುದಿಲ್ಲ. ಭೂತಕೋಲ ಅನ್ನೋದು ತಪ್ಪು, ಹಿಂದೂ ಅನ್ನೋದನ್ನು ಹೇಗೆ ಬಳಸುತ್ತೇವೆ ಎನ್ನುವುದು ಮುಖ್ಯʼ ಎಂದು ಹೇಳಿದ್ದರು.

ಈ ಹಿನ್ನಲೆಯಲ್ಲಿ ನಟ ಚೇತನ್‌ ವಿರುದ್ದ ಹಿಂದೂ ಜಾಗರಣೆ ವೇದಿಕೆಯು ಕಾರ್ಕಾಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು