Sunday, June 23, 2024

ಸತ್ಯ | ನ್ಯಾಯ |ಧರ್ಮ

ನೋಟ್‌ನಲ್ಲಿ ಮಹಾತ್ಮಗಾಂಧಿ ಚಿತ್ರ ಒಂದೇ ಸಾಕು: ವಾಟಾಳ್‌ ನಾಗರಾಜ್

ಬೆಂಗಳೂರು: ದೆಹಲಿ ಮುಖ್ಯಮಂತ್ರಿ ಮತ್ತು ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು, ನಮ್ಮ ಕರೆನ್ಸಿ ನೋಟುಗಳ ಮೇಲೆ ಶ್ರೀ ಗಣೇಶ್ ಜೀ ಮತ್ತು ಶ್ರೀ ಲಕ್ಷ್ಮಿ ಜೀ ಅವರ ಫೋಟೋವನ್ನು ಹಾಕುವಂತೆ ನಾನು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಅವರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದ್ದರು.

ಇದನ್ನೂ ಓದಿ: ಕರೆನ್ಸಿ ನೋಟುಗಳ ಮೇಲೆ ಗಣೇಶ್ ಜೀ, ಲಕ್ಷ್ಮಿ ಜೀ ಫೋಟೋ ಹಾಕುವಂತೆ ಕೇಂದ್ರಕ್ಕೆ ಮನವಿ: ಅರವಿಂದ್ ಕೇಜ್ರಿವಾಲ್

ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕನ್ನಡ ಚಳುವಳಿಯ ವಾಟಾಳ್‌ ಪಕ್ಷದ ನಾಯಕ ವಾಟಾಳ್‌ ನಾಗರಾಜ್ ಅವರು ನೋಟ್‌ನಲ್ಲಿ ಮಹಾತ್ಮಗಾಂಧಿ ಚಿತ್ರ ಒಂದೇ ಸಾಕು, ಯಾವುದೇ ಕಾರಣಕ್ಕು ಬೇರೆ ಚಿತ್ರಗಳನ್ನು ಹಾಕಬಾರದು ಮತ್ತು ನೋಟಿನಲ್ಲಿ ಬೇರೆ ಚಿತ್ರಗಳನ್ನು ಹಾಕುವ ಚಿಂತನೆ ಯಾರಿಗು ಇರಬಾದರು ಎಂದು ಹೇಳಿದರು.

ಮಹಾತ್ಮ ಈ ದೇಶದ ಮಹಾತ್ಮ. ಸ್ವಾತಂತ್ರಕ್ಕಾಗಿ ತಮ್ಮ ಇಡೀ ಜೀವನ ಅರ್ಪಣೆ ಮಾಡಿದ್ದು ಗಾಂಧಿಜಿ ಒಬ್ಬರೇ. ಮಹಾತ್ಮ ಗಾಂಧಿ ಚಿತ್ರ ಬಿಟ್ಟು ಬೇರೆ ಯಾರ ಚಿತ್ರನು ನೋಟಿನಲ್ಲಿ ಹಾಕಬಾರದು ಅಭಿಪ್ರಾಯ ಪಟ್ಟರು.

Related Articles

ಇತ್ತೀಚಿನ ಸುದ್ದಿಗಳು