Saturday, June 15, 2024

ಸತ್ಯ | ನ್ಯಾಯ |ಧರ್ಮ

ನವೆಂಬರ್‌ 1ರಂದು ಜನಿಸಿದವರಿಗೆ ಸನ್ಮಾನ ಮಾಡಿ ಕರ್ನಾಟಕ ರಾಜ್ಯೋತ್ಸವ ಆಚರಣೆ

ಕಲ್ಬುರ್ಗಿ : ಜಿಲ್ಲೆಯ ಆಳಂದ ತಾಲೂಕಿನ ಕಾಮನಳ್ಳಿ ಗ್ರಾಮದಲ್ಲಿ ಇಂದು ಕನ್ನಡ ರಾಜ್ಯೋತ್ಸವದ ವಿಶೇಷವಾಗಿ ಆಚರಣೆ ಮಾಡಲಾಗಿದ್ದು, ನವೆಂಬರ್‌ 1ರಂದು ಜನಿಸಿದವರಿಗೆ ವ್ಯಕ್ತಿಗಳಿಗೆ ಸನ್ಮಾನ ಮಾಡಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ಧ್ವಜಾರೋಹಣ ಮಾಡಿಲಾಗಿದೆ.

ನವೆಂಬರ್‌ 1ರ ಕನ್ನಡ ರಾಜ್ಯೋತ್ಸವದ ವಿಶೇಷನವ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷರಾದ ದಯಾನಂದ ಪಾಟೀಲ್ ಅವರ ನೇತೃತ್ವದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ವಿಶೇಷವಾಗಿ  ಜರುಗಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ದಿನದಂದು ಹುಟ್ಟಿದ ಭೋಗೇಶ ನೇಲ್ಲುರೆ ಮತ್ತು ಪ್ರಜ್ವಲ್ ಸರಡಗಿ ಇವರಿಗೆ ಹುಟ್ಟು ಹಬ್ಬದ ದಿನದಂದು ಅದ್ದೂರಿ ಸನ್ಮಾನ ಮಾಡಿ ಗೌರವಿಸಿದ್ದಾರೆ. ತದನಂತರ ನಾಡಗೀತೆಯ  ಜೊತೆಗೆ ಧ್ವಜಾರೋಹಣನೆರವೇರಿಸಿ ಶಾಲಾ ಮಕ್ಕಳಿಗೆ ಸಿಹಿ ಹಂಚಿದ್ದಾರೆ.

ಕರ್ನಾಟಕ ರಾಜ್ಯೋತ್ಸವ ಈ ವಿಶೇಷ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ ಬಿ ಪಾಟೀಲ್ , ರೈತ ಸಂಘದ ತಾಲ್ಲೂಕು ಅಧ್ಯಕ್ಷರಾದ ಶಿವಲಿಂಗಪ್ಪಾ ಪೋಲೀಸ್ ಪಾಟೀಲ್, ಕಾಮನಳ್ಳಿ ಮಾಜಿ ಗ್ರಾಮಪಂಚಾಯತ್ ಸದಸ್ಯರಾದ ಶಿವರಾಜ್ ಸರಡಗಿ, ಮಾಹಾದೇವ ಕುಮುಟಗಿ, ವಿಜಯ್ ಕುಮಾರ್ ಬೇಳಮಗಿ, ಸುರೇಶ ನೇಲ್ಲುರೆ, ಕಾಮನಳ್ಳಿ ಗ್ರಾಮದ ಕನ್ನಡ ಅಭಿಮಾನಿಗಳು ಭಾಗವಹಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು