Sunday, June 16, 2024

ಸತ್ಯ | ನ್ಯಾಯ |ಧರ್ಮ

ಕನ್ನಡವೇ ನನ್ನ ಗುರುತು: ನಟ ಕಿಶೋರ್‌ ಕುಮಾರ್

ಬೆಂಗಳೂರು : ಕರ್ನಾಟಕ ರಾಜ್ಯೋತ್ಸವದ ಕನ್ನಡಿಗರ ಈ ವಿಶೇಷ ದಿನದಂದು ನಟ ಕಿಶೋರ್‌ ಕುಮಾರ್‌, ಕನ್ನಡ ಎಂದರೆ ಬರೀ ಭಾಷೆಯಲ್ಲಅದು ನನ್ನ ಅಸ್ಮಿತೆ, ಕನ್ನಡ ಎಂದರೆ ನಾನು ಎಂದು  ಕನ್ನಡದ ಬಗ್ಗೆ ಒಂದು ಕವಿತೆ ಬರೆದು ಕನ್ನಡಾಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

ಸದಾ ನಾಡು, ನುಡಿ, ಪ್ರಚಲಿತ ವಿಷಯಗಳ ಕುರಿತು ನೇರವಾಗಿ ಮಾತನಾಡುವ ಇವರು ಕನ್ನಡದ ಪ್ರಜ್ಞಾವಂತ ನಟರಲ್ಲಿ ಒಬ್ಬರು. ಸದಾ ಸಾರ್ವಜನಿಕ ವಿಷಯಗಳಿಗೆ ಮಿಡಿಯುತ್ತಿರುತ್ತಾರೆ. ತಾನು ಸೆಲೆಬ್ರಿಟಿ ಎನ್ನುವ ಹಮ್ಮು ಬಿಮ್ಮಿಲ್ಲದೆ ಜನರೊಂದಿಗೆ ಬೆರೆಯುವ ಇವರು ಅಭಿಮಾನಿಗಳ ಪಾಲಿಗೆ ಪ್ರೀತಿಯ ಹುಲಿ.

ಕನ್ನಡ ಬರಿ ಭಾಷೆ ಮಾತ್ರವಲ್ಲ ಎಂದು ಹೇಳಿರುವ ಕನ್ನಡದ ನಟ ಕಿಶೋರ್‌ ಕುಮಾರ್‌ ಕನ್ನಡ ಭಾಷೆಯನ್ನು ಪರಿಸರದ ಜೀವ ಸಂಕುಲಗಳನ್ನು ಒಳಪಡಿಸಿಕೊಂಡು, ಊರು ಕೇರಿಗಳು, ಆಹಾರ , ಕೆರೆ ಕುಂಟೆ ಜೊತೆಗೆ ತನ್ನನ್ನೂ ಸೇರಿಸಿ ಕನ್ನಡ ಭಾಷೆಯ ಬಗ್ಗೆ ಕವಿತೆ ಬರೆದು ತಮ್ಮ ಪೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

“ಕನ್ನಡ, ಬರಿ ಭಾಷೆ ಮಾತ್ರವಲ್ಲ,
ಬೇಲಿಯಲ್ಲ,
ಕನ್ನಡವೆಂದರೆ ನಾನೆಂದೆ.
ಎನ್ನಡಕಗಳ,
ಹೆಣ್ಣು- ಗಂಡುಗಳ,
ಜಾತಿ, ಮತ, ದೈವಗಳ
ಬಡವ-ಶ್ರೀಮಂತಗಳ,
ಉಣಿಸು- ತಿನಿಸುಗಳ,
ಹಳ್ಳಿಗಳ – ಊರುಗಳ,
ಹೊಲಗದ್ದೆ, ಕಾಡುಗಳ
ಕೆರೆ – ಕುಂಟೆ, ನದಿ, ಸಾಗರಗಳ
ಹಾಡು – ಪಾಡುಗಳ
ಮಣ್ಣುಗಳ ಮಾತುಗಳ
ಒಟ್ಟುಮೊತ್ತ ನಾನೆಂದೆ.
ಕನ್ನಡ ಬರಿ ಭಾಷೆ ಮಾತ್ರವಲ್ಲ
ನನ್ನಸ್ಮಿತೆಯೆಂದೆ.
ಕನ್ನಡವೆಂದರೆ ನಾನು ಎಂದೆ.” ಎಂದು ಬರೆದು ತನ್ನಲ್ಲಿರುವ ಕನ್ನಡ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು