Tuesday, July 2, 2024

ಸತ್ಯ | ನ್ಯಾಯ |ಧರ್ಮ

ಟಿ-20 ವಿಶ್ವಕಪ್‌: ಪಾಕಿಸ್ತಾನಕ್ಕೆ 128 ರನ್‌ ಗುರಿ ನೀಡಿದ ಬಾಂಗ್ಲಾದೇಶ

ಅಡಿಲೇಡ್ ಓವಲ್ (ಆಸ್ಟ್ರೇಲಿಯಾ): ಇಂದು ಟಿ-20 ವಿಶ್ವಕಪ್‌ ಪಂದ್ಯದಲ್ಲಿ ಬಾಂಗ್ಲಾದೇಶವು 20 ಓವರ್‌ಗಳಲ್ಲಿ 127 ರನ್‌ಗಳಿಸಿ, ಪಾಕಿಸ್ತಾನ ತಂಡಕ್ಕೆ 128ರನ್‌ ಗುರಿ ನೀಡಿದೆ.

ಟಾಸ್‌ ಗೆದ್ದ ಬಾಂಗ್ಲಾದೇಶವು ಮೊದಲು ಬ್ಯಾಟಿಂಗ್‌ ಆಯ್ಕೆಮಾಡಿಕೊಂಡಿತು. ನಂತರ ಬ್ಯಾಟಿಂಗ್‌ಗೆ ಇಳಿದ ನಜ್ಮುಲ್ ಹೊಸೈನ್ ಶಾಂತೋ ಮತ್ತು ಲಿಟ್ಟನ್ ದಾಸ್, ಮೊದ-ಮೊದಲು ಪಾಕಿಸ್ತಾನಿ ಬೌಲರ್‌ ದಾಳಿಗೆ ರನ್‌ ಗಳಿಸಲು ಪರದಾಡಿದರು. ಪವರ್‌ ಪ್ಲೇನಲ್ಲಿ ರನ್‌ ಬಾರದಿರುವ ಕಾರಣ, ಲಿಟ್ಟನ್ ದಾಸ್, ಶಾಹೀನ್ ಅಫ್ರಿದಿ ಬೌಲಿಂಗ್‌ ವೇಳೆ ರನ್‌ ಗಳಿಸುವ ಬರದಲ್ಲಿ ಕ್ಯಾಚ್‌ ನೀಡಿ 8 ರನ್‌ಗಳಿಸಿ ಪೆಲಿವಿಯನ್‌ ಸೇರಿದರು.

ನಂತರ ಬಂದ ಸೌಮ್ಯ ಸರ್ಕಾರ್, ನಿಧಾನಗತಿಯಲ್ಲಿ ರನ್‌ ಗಳಿಸುತ್ತಾ ಸಾಗಿದರು. ಹೀಗಾಗಿ ಹೆಚ್ಚು ರನ್‌ ಗಳಿಸದೆ ಹೋದರು ವಿಕೆಟ್‌ ಕಾಪಾಡಿಕೊಂಡು ಬಂದ ಸೌಮ್ಯ ಸರ್ಕಾರ್‌ ಮತ್ತು ನಜ್ಮುಲ್ ಹೊಸೈನ್ ಶಾಂತೋ ಜೊತೆಯಾಟ ತಂಡಕ್ಕೆ ಮುಂದಿನ ಓವರ್‌ಗಳಲ್ಲಿ ರನ್‌ ಗಳಿಸುವ ಭರವಸೆ ಹುಟ್ಟಿಸಿತು. ಆದರೆ 11ನೇ ಓವರ್‌ ನಲ್ಲಿ ಸೌಮ್ಯ ಸರ್ಕಾರ್‌ ಕೂಡ ಕ್ಯಾಚ್‌ ನೀಡಿ 17 ಎಸೆತಗಳಲ್ಲಿ 20 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ಈ ವೇಳೆ ಬಾಂಗ್ಲಾದೇಶ 73 ರನ್‌ ಗಳಿಗೆ 2 ವಿಕೆಟ್‌ ಕಳೆದುಕೊಂಡಿತ್ತು.

ಉತ್ತಮ ಪ್ರದರ್ಶನ ನೀಡುತ್ತಿದ್ದ, ನಜ್ಮುಲ್ ಹೊಸೈನ್ ಶಾಂತೋ ಅರ್ಧಶತಕಗಳಿಸಿ ಏಕಾಂಗಿಯಾಗಿ ಹೋರಾಟ ಮುಂದುವರೆಸಿದ್ದರು. ಆದರೆ ಅವರು ಕೂಡ 14ನೇ ಓವರ್‌ನಲ್ಲಿ ಇಫ್ತಿಕರ್ ಅಹಮದ್ ಬೌಲಿಂಗ್‌ ವೇಳೆ ಬೌಲ್ಡ್ ಆದರು. ನಂತರ ಬಂದ ಯಾವೊಬ್ಬ ಆಟಗಾರನು ಕೂಡ ರನ್‌ಗಳಿಸಲು ಪರದಾಡಿದ್ದು, ಉತ್ತಮ ಪ್ರದರ್ಶನ ನೀಡದೆ ಪೆವಿಲಿಯನ್‌ ಸೇರಿದರು. ಈಗಾಗಿ ಬಾಂಗ್ಲಾ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ ನೀಡಿ 127 ರನ್‌ ಗಳಿಸಿತು.

ಈ ಪಂದ್ಯದಲ್ಲಿ ಶಾಹೀನ್ ಅಫ್ರಿದಿ 4 ಓವರ್‌ಗಳಲ್ಲಿ 22 ಕೊಟ್ಟು 4 ವಿಕೆಟ್‌ ಕಬಳಿಸಿದರು, ಹಾಗೆಯೇ ಶಾದಾಬ್ ಖಾನ್ 4 ಓವರ್ಗಳಲ್ಲಿ 30 ರನ್‌ ನೀಡಿ 2 ವಿಕೆಟ್‌ ಪಡೆದುಕೊಂಡರು. ಹಾರಿಸ್ ರೌಫ್, ಇಫ್ತಿಕರ್ ಅಹಮದ್, ತಲಾ ಒಂದೊಂದು ವಿಕೆಟ್‌ ಪಡೆಯುವ ಮೂಲಕ ಬಾಂಗ್ಲಾದೇಶವನ್ನು 127 ರನ್‌ಗಳಿಗೆ ಕಟ್ಟಿ ಹಾಕಿದರು.

Related Articles

ಇತ್ತೀಚಿನ ಸುದ್ದಿಗಳು