Monday, June 17, 2024

ಸತ್ಯ | ನ್ಯಾಯ |ಧರ್ಮ

ದಕ್ಷಿಣ ಕನ್ನಡ ಜಿಲ್ಲೆಯ ಹಂದಿ ಸಂತಾನಾಭಿವೃದ್ಧಿ ಕೇಂದ್ರದ ಹಂದಿಗಳಿಗೆ ಆಫ್ರಿಕನ್ ಹಂದಿ ಜ್ವರ ದೃಢ

ದಕ್ಷಿಣ ಕನ್ನಡ ಜಿಲ್ಲೆ: ಜಿಲ್ಲೆಯ ನೀರುಮಾರ್ಗ ಗ್ರಾಮದ ಕೆಲರೈ ಪ್ರದೇಶದ ಹಂದಿ ಸಂತಾನಾಭಿವೃದ್ಧಿ ಕೇಂದ್ರದ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ (ಎಎಸ್‌ಎಫ್) ಪ್ರಕರಣಗಳು ದೃಢಪಟ್ಟಿವೆ ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಶನಿವಾರ ತಿಳಿಸಿದ್ದಾರೆ.

ಈ ಹಿನ್ನಲೆಯಲ್ಲಿ, ರೋಗ ಹರಡುವುದನ್ನು ತಡೆಯಲು ರಾಷ್ಟ್ರೀಯ ರೋಗ ನಿಯಂತ್ರಣ ಮಾರ್ಗಸೂಚಿಗಳ ಪ್ರಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾ ಜಾನುವಾರು ರೋಗಗಳ ನಿರ್ವಹಣಾ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಯವರು, ಈ ಹಂದಿ ಸಾಕಾಣಿಕೆ ಕೇಂದ್ರದ 1 ಕಿ.ಮೀ ವ್ಯಾಪ್ತಿಯನ್ನು ರೋಗಪೀಡಿತ ವಲಯ ಎಂದು ಗುರುತಿಸಲಾಗಿದ್ದು, 10 ಕಿ.ಮೀ ವ್ಯಾಪ್ತಿಯನ್ನು ಎಚ್ಚರಿಕೆ ವಲಯ ಎಂದು ಘೋಷಿಸಲಾಗಿದೆ ಎಂದರು.

ರೋಗ ಪೀಡಿತ ಹಂದಿಗಳನ್ನು ಕೊಂದು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು ಹಾಗೂ ಸ್ಥಳದಲ್ಲಿ ಕ್ರಿಮಿನಾಶಕ ಸಿಂಪಡಿಸಬೇಕು ಮತ್ತು ಸಾರ್ವಜನಿಕರು ಸ್ಥಳಕ್ಕೆ ಭೇಟಿ ನೀಡದಂತೆ ನಾಮಫಲಕ ಅಳವಡಿಸಲು ಸೂಚಿಸಲಾಗಿದದು, ಹಂದಿ ಸಾಕಾಣಿಕೆದಾರರು ಮತ್ತು ಇತರರು ಪೀಡಿತ ಪ್ರದೇಶಕ್ಕೆ ಸದ್ಯಕ್ಕೆ ಭೇಟಿ ನೀಡಬಾರದು ಮತ್ತು ಅಪರಿಚಿತರಿಂದ ಹಂದಿಮರಿ ಮತ್ತು ಮಾಂಸವನ್ನು ಖರೀದಿಸಬಾರದು ಎಂದು ತಿಳಿಸಿದರು. ಎಂದು ಮಾಹಿತಿ ನೀಡಿದರು.

ಆದಾಗ್ಯೂ, ಆಫ್ರಿಕನ್ ಹಂದಿ ಜ್ವರವು ಮಾನವರಲ್ಲಿ ಯಾವುದೇ ರೋಗವನ್ನು ಉಂಟುಮಾಡುವುದಿಲ್ಲ ಎಂದು ಮಾಹಿತಿ ನೀಡಿದ ಅವರು, ಹಂದಿಮಾಂಸವನ್ನು ಸೇವಿಸುವವರು, ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನಲು ಸಲಹೆ ನೀಡಿದ್ದಾರೆ.

ಸಾರ್ವಜನಿಕರು ಮತ್ತು ಹಂದಿ ಸಾಕಾಣಿಕೆದಾರರು ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದು, ಹಂದಿ ಸಾಕಾಣಿಕೆದಾರರು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಿಳಿಸಿದರು. ಏತನ್ಮಧ್ಯೆ, ಶುಕ್ರವಾರ ಮಧ್ಯಪ್ರದೇಶದ ಕಟ್ನಿಯಲ್ಲಿ ನಡೆದ ಪರೀಕ್ಷೆಯಲ್ಲಿ ಐದು ಹಂದಿಗಳಿಗೆ ಆಫ್ರಿಕನ್ ಹಂದಿ ಜ್ವರದ ಧನಾತ್ಮಕ ಲಕ್ಷಣಗಳು ಕಂಡುಬಂದಿವೆ ಎಂದು ತಿಳಿಸಿದ್ದಾರೆ.

ಕಟ್ನಿ ಪುರಸಭೆಯ ವಾರ್ಡ್ 18 ತಿಲಕ್ ಕಾಲೇಜು ರಸ್ತೆ ಮತ್ತು ವಾರ್ಡ್ 30 ಭಟ್ಟ ಮೊಹಲ್ಲಾದಲ್ಲಿನ ಹಂದಿಗಳಿಗೆ ಪಾಸಿಟಿವ್ ಕಂಡುಬಂದಿರು ಹಿನ್ನೆಯಲ್ಲಿ, ಜಿಲ್ಲೆಯಲ್ಲಿ ನಿಷೇಧಾಜ್ಞೆಯನ್ನೂ ಜಾರಿಗೊಳಿಸಲಾಗಿದೆ.

ಪಶುವೈದ್ಯಕೀಯ ಇಲಾಖೆ ಉಪನಿರ್ದೇಶಕ ಆರ್.ಕೆ.ಸಿಂಗ್ ಮಾತನಾಡಿ, “ಇಲ್ಲಿ ಕೆಲವು ಹಂದಿಗಳು ಅಸ್ವಸ್ಥ ರೀರಿಯಲ್ಲಿ ಕಂಡುಬಂದ ಕಾರಣ, ಐದು ಹಂದಿಗಳ ಮಾದರಿಗಳನ್ನು ಭೋಪಾಲ್‌ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ನವೆಂಬರ್ 1 ರಂದು ವರದಿ ಬಂದಿದ್ದು, ಐದು ಹಂದಿಗಳಿಗೆ ಆಫ್ರಿಕನ್ ಹಂದಿ ಜ್ವರ ದೃಢಪಟ್ಟಿರುವುದು ತಿಳಿದುಬಂದಿತು ಎಂದರು.

Related Articles

ಇತ್ತೀಚಿನ ಸುದ್ದಿಗಳು