Thursday, June 20, 2024

ಸತ್ಯ | ನ್ಯಾಯ |ಧರ್ಮ

ಟಿ-20 ವಿಶ್ವಕಪ್‌: ಬಾಂಗ್ಲಾದೇಶಕ್ಕೆ ಹೀನಾಯ ಸೋಲು, ಸೆಮಿಪೈನಲ್‌ಗೆ ಪಾಕಿಸ್ತಾನ

ಅಡಿಲೇಡ್ ಓವಲ್ (ಆಸ್ಟ್ರೇಲಿಯಾ): ಇಂದು ನಡೆದ ಟಿ-20 ವಿಶ್ವಕಪ್‌ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಎದುರಾಳಿ ಬಾಂಗ್ಲಾದೇಶವನ್ನು ಮಣಿಸಿ ಸೆಮಿಫೈನಲ್‌ ಕನಸನ್ನು ನನಸು ಮಾಡಿಕೊಂಡಿದೆ.

ಇಂದು ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಬಾಂಗ್ಲಾದೇಶವು ಮೊದಲು ಬ್ಯಾಟಿಂಗ್‌ ಆಯ್ಕೆಮಾಡಿಕೊಂಡಿತು. ನಂತರ ಪಾಕಿಸ್ತಾನದ ಬೌಲರ್‌ಗಳ ದಾಳಿಗೆ ರನ್‌ಗಳಿಸಲು ಪರದಾಡಿದ್ದು, 20 ಓವರ್‌ಗಳಿಗೆ 8 ವಿಕೆಟ್‌ ನೀಡಿ 127 ರನ್‌ಗಳಿಸಿ ಎದುರಾಳಿ ಪಾಕಿಸ್ತಾನಕ್ಕೆ ಸುಲಭದ ಗುರಿ ನೀಡಿತು. ಪಂದ್ಯದಲ್ಲಿ ನಜ್ಮುಲ್ ಹೊಸೈನ್ ಶಾಂತೋ ಅವರ ಅರ್ಧಶತಕ ಗಳಿಸಿ ಏಕಾಂಗಿ ಹೋರಾಟ ನಡೆಸಿದನ್ನು ಬಿಟ್ಟರೆ, ಬೇರೆ ಯಾವೊಬ್ಬ ಆಟಗಾರರು ಕೂಡ ಪಂದ್ಯದಲ್ಲಿ ರನ್‌ಗಳಿಸಲಿಲ್ಲ. ಇದು ಬಾಂಗ್ಲಾದೇಶದ ಸೋಲಿಗೆ ಮುಖ್ಯಕಾರಣ.

ನಂತರ ಸುಲಭದ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು ಕೂಡ ನಿಧಾನಗತಿಯಲ್ಲಿ ರನ್‌ ಕಲೆಹಾಕುತ್ತಾ ಬಂದಿತು. ಈ ಮೂಲಕ 18.1 ಓವರ್‌ಗಳಲ್ಲಿ 5 ವಿಕೆಟ್‌ ನೀಡಿ 128 ರನ್‌ಗಳಿಸಿ ಸುಲಭ ಜಯ ತನ್ನದಾಗಿಸಿಕೊಂಡಿತು. ಈ ಮೂಲಕ ಸೆಮಿಫೈನಲ್‌ ಹಾದಿಯಿಂದ ಹಿಂದಿರುಗಿದ್ದ ಪಾಕಿಸ್ತಾನ ತಂಡ, ಸೆಮಿಫೈನಲ್‌ಗೆ ತಲುಪಲು ಸಾಧ್ಯವಾಯಿತು.

ಬ್ಯಾಟಿಂಗ್‌ನಲ್ಲಿ ಪಾಕಿಸ್ತಾನ ತಂಡದ ಮೊಹಮ್ಮದ್ ರಿಜ್ವಾನ್, ಬಾಬರ್ ಅಜ಼ಾಮ್, ಮೊಹಮ್ಮದ್ ಹ್ತಾರೀಸ್, ಶಾನ್ ಮಸೂದ್ ಉತ್ತಮ ಆಟವಾಡಿದರೆ, ಬೌಲಿಂಗ್‌ನಲ್ಲಿ ಶಾಹೀನ್ ಅಫ್ರಿದಿ ಉತ್ತಮ ಪ್ರದರ್ಶನ ನೀಡುವ ಮೂಲಕ ಗೆಲುವನ್ನು ತಮ್ಮದಾಗಿಸಿಕೊಂಡರು.

ಸ್ಕೋರ್ ಕಾರ್ಡ್

ಬಾಂಗ್ಲಾದೇಶ – 127/8(20)

ಬ್ಯಾಟಿಂಗ್ :

ನಜ್ಮುಲ್ ಹೊಸೈನ್ ಶಾಂತೊ : 54(48)

ಲಿಟ್ಟೊನ್ ದಾಸ್ : 10(8)

ಸೌಮ್ಯ ಸರ್ಕಾರ್ : 20(17)

ಶಕೀಬ್ ಅಲ್ ಹಸನ್ : 0(1)

ಅಫೀಫ್ ಹೊಸೈನ್ : 24(20)

ಮೋಸಾಡೆಕ್ ಹೊಸೈನ್ : 5(11)

ನೂರುಲ್ ಹಸನ್ : 0(3)

ಟಸ್ಕಿನ್ ಅಹ್ಮದ್ : 1(5)

ನಾಸುಮ್ ಅಹ್ಮದ್ : 7(6)

ಮುಸಾಫಿರ್ ರೆಹ್ಮನ್ : 0(1)

ಇತರೆ : 6

ಬೌಲಿಂಗ್

ಶಾಹೀನ್ ಅಫ್ರಿದಿ : 4-0-22-4

ನಸೀಮ್ ಶಾ : 3-0-15-0

ಮೊಹಮ್ಮದ್ ವಾಸಿಮ್ : 2-0-19-0

ಹ್ಯಾರಿಸ್ ರಾಫ್ : 4-0-21-1

ಶಾದಬ್ ಖಾನ್ : 4-0-30-2

ಇಫ್ತಿಕರ್ ಅಹ್ಮದ್ : 4-0-15-1

ಪಾಕಿಸ್ತಾನ್ 128/5(18.1)

ಬ್ಯಾಟಿಂಗ್

ಮೊಹಮ್ಮದ್ ರಿಜ್ವಾನ್ : 32(32)

ಬಾಬರ್ ಅಜ಼ಾಮ್ : 25(33)

ಮೊಹಮ್ಮದ್ ನವಾಜ಼್ : 4(11)

ಮೊಹಮ್ಮದ್ ಹ್ತಾರೀಸ್ : 31(18)

ಶಾನ್ ಮಸೂದ್ : 24(14)

ಇಫ್ತಿಕರ್ ಅಹಮ್ಮದ್ : 1(3)

ಇತರೆ : 11

ಬೌಲಿಂಗ್

ತಕ್ಷಿನ್ ಅಹ್ಮದ್ : 3-0-26-0

ನಸುಮ್ ಅಹ್ಮದ್ : 4-0-14-1

ಶಕೀಬ್ ಅಲ್ ಹಸನ್ : 4-0-35-1

ಮುಸ್ತಫಿಜ಼ುರ್ ರಹ್ಮನ್ : 4-0-21-1

ಎಬಡೊಟ್ ಹೊಸೈನ್ : 3.1-0-25-1

Related Articles

ಇತ್ತೀಚಿನ ಸುದ್ದಿಗಳು