Thursday, June 27, 2024

ಸತ್ಯ | ನ್ಯಾಯ |ಧರ್ಮ

ವಿದ್ಯುತ್‌ ತಂತಿ ಸ್ಪರ್ಶಿಸಿ  ಮೂವರು ರೈತರು ಬಲಿ

ಮೈಸೂರು: ಇಂದು ಬೆಳಗ್ಗೆ ಜಮೀನಿನಲ್ಲಿ ವಿದ್ಯುತ್‌ ತಂತಿ ಸ್ಪರ್ಶಿಸಿ ಮೂವರು ರೈತರು ಸ್ಥಳದಲ್ಲೇ ನರಳಿ ಮೃತಪಟ್ಟಿರುವ ಘಟನೆ ಮೈಸೂರಿನ ತಿ.ನರಸಿಪುರದಲ್ಲಿ ನಡೆದಿದೆ.

 ಮೈಸೂರಿನ ತಿ.ನರಸಿಪುರ ತಾಲ್ಲೂಕಿನ ನಿಲಸೋಗೆ ಗ್ರಾಮದಲ್ಲಿ ಚೆಸ್ಕ್‌ನವರು ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸದಿದ್ದ ಕಾರಣ, ಹೈ ವೋಲ್ಟೇಜ್‌ನಿಂದ ವಿದ್ಯುತ್‌ ತಂತಿಗಳು ತುಂಡಾಗಿ ಬಿದ್ದಿದ್ದವು. ಇಂದು ಬೆಳಗ್ಗೆ ಗದ್ದೆಗೆ ಕೆಲಸ ಮಾಡಲು ಹೋದ ರಾಚೇಗೌಡರಿಗೆ ತುಂಡಾಗಿ ಬಿದ್ದಿದ್ದ ತಂತಿ ಸ್ಪರ್ಶಿಸಿ ಒದ್ದಾಡಲಾರಂಭಿಸಿದ್ದರು. ಇವರ ಕಿರುಚಾಟವನ್ನು ಕೇಳಿದ ರಾಚೇಗೌಡರ ಪುತ್ರ ಮಹದೇವಸ್ವಾಮಿ ತಂದೆಯನ್ನು ಕಾಪಾಡಲು ಪ್ರಯತ್ನಿಸಿದ್ದು ಮಗನಿಗೂ ಶಾಕ್‌ ತಗುಲಿದೆ. ನಂತರ ಹೀಗೆ ಹರೀಶ್‌ ಎಂಬುವವರಿಗೂ ವಿದ್ಯುತ್‌ ಶಾಕ್‌ ತಗುಲಿದ್ದು, ಸ್ಥಳದಲ್ಲೇ ಮೂವರು ಶಾಕ್‌ನಿಂದ ನರಳಿ ಸಾವನ್ನಪ್ಪಿದ್ದಾರೆ.

ಜಮೀನುಗಳಲ್ಲಿ ಹಾದು ಹೋಗಿರುವ  ವಿದ್ಯುತ್‌ ತಂತಿಗಳು ಕೆಳಗೆ ಬಿದ್ದಿದ್ದು, ಈ ಬಗ್ಗೆ ಗ್ರಾಮಸ್ಥರು ಚೆಸ್ಕಾಂ ಅವರಿಗೆ ಬಹಳಷ್ಟು ಬಾರಿ ಗಮನಕ್ಕೆ ತಂದಿದ್ದರೂ ತಲೆಕೆಡಿಸಿಕೊಂಡಿರಲಿಲ್ಲ. ಈಗ ಈ ಮೂವರ ಸಾವಿಗೆ ಚೆಸ್ಕಾಂ ಅಧಿಕಾರಗಳೆ ಕಾರಣ. ಅವರ ಸಾವಿಗೆ ಚೆಸ್ಕಾಂನವರೇ ಹೊಣೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದು, ಈ ಕುರಿತು ತಿ.ನರಸೀಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಚೇಗೌಡ(62), ಮಹದೇವಸ್ವಾಮಿ(44) ಮತ್ತು ಹರೀಶ್(38)‌ ಈ ಮೂವರು ರೈತರು ಘಟನೆಯಿಂದ ಮೃತಪಟ್ಟವರಾಗಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು