Sunday, June 16, 2024

ಸತ್ಯ | ನ್ಯಾಯ |ಧರ್ಮ

ಅತ್ತ ಫೇಸ್ಬುಕ್ಕಲ್ಲಿ ಕೆಲಸಗಾರರು ಮನೆಗೆ, ಇತ್ತ ಟ್ವಿಟರಿನಲ್ಲಿ ಸೋನು ಸೂದ್‌ ಹೊಸ ಸೋಷಿಯಲ್‌ ಪ್ಲಾಟ್‌ಫಾರಂ ಟ್ರೆಂಡಿಂಗ್‌

ಅತ್ತ ಫೇಸ್ಬುಕ್‌ ತನ್ನ ಮಾತೃಸಂಸ್ಥೆ ʼಮೆಟಾʼದಿಂದ ಕೆಲಸಗಾರರನ್ನು ಹೊರಕ್ಕೆ ಕಳುಹಿಸುತ್ತಿರುವ ಹೊತ್ತಿನಲ್ಲೇ ಇತ್ತ ಟ್ವಿಟರಿನಲ್ಲಿ ಸೋನು ಸೂದ್‌ ಅವರ ಹೊಸ ಸೋಷಿಯಲ್‌ ಮೀಡಿಯಾ ಅಪ್ಲಿಕೇಷನ್‌ ExplurgerApp (ಎಕ್ಸ್‌ಪ್ಲರ್ಜರ್‌ ಆ್ಯಪ್‌) ಟ್ರೆಂಡ್‌ ಆಗುತ್ತಿದೆ.

ಎಕ್ಸ್‌ಪ್ಲರ್ಜರ್‌ ಅಪ್ಲಿಕೇಷನ್‌ ಮೂಲಭೂತವಾಗಿ ಒಂದು ಸಾಮಾಜಿಕ ಜಾಲತಾಣವಾಗಿದ್ದು ನೀವು ಎಲ್ಲೆಡೆಯಂತೆ ಇಲ್ಲಿಯೂ ಹೊಸ ಸ್ನೇಹಿತರನ್ನು ಮಾಡಿಕೊಳ್ಳಬಹುದು ಮತ್ತು ಫೋಟೊ, ವಿಡೀಯೊ ಇತ್ಯಾದಿಯನ್ನು ಹಂಚಿಕೊಳ್ಳಬಹುದು. ಜೊತೆಗೆ ಇದರಲ್ಲಿ ನಿಮ್ಮ ಪ್ರವಾಸದ ಅನುಭವಗಳನ್ನು ಹಂಚಿಕೊಳ್ಳಬಹುದು. ಇಲ್ಲಿಪ್ರವಾಸ ಅನುಭಗಳ ಕುರಿತಾದ ಬಕೆಟ್‌ ಲಿಸ್ಟ್‌ ರಚಿಸುವ ಮೂಲಕ ಆಕರ್ಷಕ ಬಹುಮಾನಗಳನ್ನು ಕೂಡಾ ಗೆಲ್ಲಬಹುದೆಂದು ಸಂಸ್ಥೆಯು ಹೇಳಿದೆ.

ಸೋಷಿಯಲ್‌ ಮೀಡಿಯಾಗಳಲ್ಲಿ ಕೊಡುಗೈ ದಾನಿಯಾಗಿ ಖ್ಯಾತರಾಗಿರುವ ಸೋನು ಸೂದ್‌ ಕೊರೋನಾ ಸಮಯದಲ್ಲಿ ಸಹಾಯ ಕೇಳಿದವರಿಗೆಲ್ಲ ತನ್ನಿಂದ ಸಾಧ್ಯವಿರುವುದನ್ನೆಲ್ಲ ಒದಗಿಸಿದ್ದರು. ಆ ಮೂಲಕ ಜನರ ಹೃದಯವನ್ನು ಗೆದ್ದಿದ್ದರು. ಅಲ್ಲದೆ ವಿಮಾನಯಾನ ಸಂಸ್ಥೆಯೊಂದು ಅವರ ಚಿತ್ರವನ್ನು ತನ್ನ ವಿಮಾನದಲ್ಲಿ ಬರೆಯಿಸಿತ್ತು.

ಇಂತಿಪ್ಪ ಸೋನು ಸೂದ್‌ ಈಗ ಸೋಷಿಯಲ್‌ ಮೀಡಿಯಾ ಕ್ಷೇತ್ರಕ್ಕೆ ಕಾಲಿಟ್ಟಿರುವುದು ನೆಟ್ಟಿಗರಲ್ಲಿ ಸಹಜವಾಗಿಯೇ ಒಂದು ಕುತೂಹಲವನ್ನೇ ಹುಟ್ಟಿದೆ. ಇಲ್ಲಿ ನೀವು ಫೋಟೊ ವಿಡಿಯೋಗಳನ್ನು ಹಾಕುವುದರ ಜೊತೆಗೆ ಅಲ್ಲಿಗೆ ಹೋಗಲು ಇರುವ ದೂರ ಇತ್ಯಾದಿಗಳನ್ನು ಸಹ ಅಪ್ಡೇಟ್‌ ಮಾಡಬಹುದಾಗಿದೆ. ಇದೊಂದು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ಕೆಲಸ ಮಾಡುವ ಅಪ್ಲಿಕೇಷನ್‌ ಆಗಿರುತ್ತದೆ.

ಜಿತಿನ್ ಭಾಟಿಯಾ ಸ್ಥಾಪಕ ಮತ್ತು ಸಿಇಒ, ಆಗಿದ್ದರೆ ಸೋನು ಸೂದ್ ಇದರ ಸಹ-ಸಂಸ್ಥಾಪಕರು. ಬಾಲಿವುಡ್ ನಟ ಮತ್ತು ಉದ್ಯಮಿಯಾಗಿರುವ ಸೋನು ಸೂದ್ ಬುಧವಾರ (ಜೂನ್ 8) ಎಐ-ಚಾಲಿತ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ಪ್ಲರ್ಜರ್ ಅಪ್ಲಿಕೇಷನ್ನನ್ನು ಬಿಡುಗಡೆ ಮಾಡಿದ್ದರು. ಪ್ರಸ್ತುತ ಈ ಅಪ್ಲಿಕೇಶನ್ Android ಮತ್ತು iOS ಸಾಧನಗಳಲ್ಲಿ ಲಭ್ಯವಿದೆ.
ಎಲ್ಲವನ್ನೂ ದೇಶಿ ಕಣ್ಣಿನಿಂದ ನೋಡುವ ಜನರಿದ್ದೂ ಕೂ ಎನ್ನುವ ಟ್ವಿಟರ್‌ಗೆ ಪರ್ಯಾಯವೆನ್ನಲಾಗಿದ್ದ ಅಪ್ಲಿಕೇಷನ್‌ ತನ್ನ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳಲು ಈಗಲೂ ಪರದಾಡುತ್ತಿರುವಾಗ, ಈ ಹೊಸ ವೇದಿಕೆಯನ್ನು ಜನರು ಹೇಗೆ ಸ್ವೀಕರಿಸಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಮೊದ-ಮೊದಲು ಕೂ ಆಪ್‌ ತಾನು ತೀವ್ರ ಬಲಪಂಥೀಯ ವಾದಿಗಳ ಜೊತೆಗೆ ಗುರುತಿಸಿಕೊಂಡಿದ್ದು ತನಗೆ ತೊಡಕಾಯಿತು, ಇನ್ನು ಮುಂದೆ ಆ ಒಂದು ಇಮೇಜಿನಿಂದ ಹೊರಬರುವುದಾಗಿ ಅದು ಘೋಷಿಸಿಕೊಂಡಿದ್ದು ಇತ್ತೀಚೆಗೆ ಸುದ್ದಿಯಾಗಿತ್ತು.


Related Articles

ಇತ್ತೀಚಿನ ಸುದ್ದಿಗಳು