Friday, June 14, 2024

ಸತ್ಯ | ನ್ಯಾಯ |ಧರ್ಮ

ಬಜರಂಗದಳ ಮುಖಂಡನಿಂದ ತನ್ವೀರ್ ಸೇಠ್ ಗೆ ಕೊಲೆ ಬೆದರಿಕೆ : ವಿಡಿಯೋ ವೈರಲ್!

ಕಾಂಗ್ರೆಸ್​ ಶಾಸಕ ತನ್ವೀರ್ ಸೇಠ್ (Tanveer Seth)​ ಟಿಪ್ಪು (Tippu) ಪ್ರತಿಮೆ ನಿರ್ಮಾಣ ಮಾಡಲಿ, ಅಂದೇ ಅವರ ಅಂತಿಮಯಾತ್ರೆ ಎಂದು ಸಕಲೇಶಪುರ ಭಜರಂಗದಳದ ನಾಯಕ ರಘು ಎಂಬ ವ್ಯಕ್ತಿ ಬೆದರಿಕೆ ಹಾಕಿರುವ ವಿಡಿಯೋ ಈಗ ವೈರಲ್ ಆಗಿದೆ.

ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಾಣ ಮಾಡುವವರು ದೇಶದ್ರೋಹಿ ಚಟುವಟಿಕೆಯ ಒಂದು ಭಾಗ ಆಗುತ್ತಾರೆ ಎಂದು ಶಿವಮೊಗ್ಗದಲ್ಲಿ (Shivamogga) ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಹೇಳಿಕೆ ನೀಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಈ ಬೆದರಿಕೆ ವೀಡಿಯೋ ವೈರಲ್ ಆಗುತ್ತಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ, ಟಿಪ್ಪು ರಾಜ್ಯವಲ್ಲದೇ ದೇಶಕ್ಕೆ ಕಂಟಕ ತಂದಿರುವ ವ್ಯಕ್ತಿ ಇಂತಹ ವ್ಯಕ್ತಿಯ ಒಂದೇ ಒಂದು ಅಡಿ ಪ್ರತಿಮೆ ನಿರ್ಮಾಣವಾದರೂ ಅಂದೆ ಅವರ ಅಂತಿಮಯಾತ್ರೆ ಎಂಬುದಾಗಿ ಬೆದರಿಕೆ ಹಾಕಿದ್ದಾರೆ. ಈ ವಿಡಿಯೋದಲ್ಲಿ ಮಾತನಾಡಿರುವವರು ಸಕಲೇಶಪುರ ಭಜರಂಗದಳದ ನಾಯಕ ರಘು ಎನ್ನಲಾಗಿದ್ದು, ಪತ್ರಕರ್ತ ಇಮ್ರಾನ್ ಖಾನ್ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

ತನ್ವೀರ್ ಸೇಠ್ ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ 100 ಅಡಿ ಎತ್ತರದ ಟಿಪ್ಪು ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಈಗ ಕೊಲೆ ಬೆದರಿಕೆ ಬಂದಿದೆ.

Related Articles

ಇತ್ತೀಚಿನ ಸುದ್ದಿಗಳು