Friday, June 14, 2024

ಸತ್ಯ | ನ್ಯಾಯ |ಧರ್ಮ

7 ಸಾವಿರ ಕೋಟಿಗೆ ಬಿಸ್ಲೇರಿ ಕಂಪನಿ ಮಾರಾಟ: ಖರೀದಿಸಿದವರು ಯಾರು ಗೊತ್ತೇ?

ಹೊಸದಿಲ್ಲಿ: ಮಿನರಲ್ ಪ್ಯೂರಿಪಯರ್ ನೀರಿನ ಮಾರಾಟದಲ್ಲಿ ಅಗ್ರಗಣ್ಯ ಸ್ಥಾನವನ್ನು ಅಲಂಕರಿಸಿದ್ದ ಬಿಸ್ಲೇರಿ ಇಂಟರ್ ನ್ಯಾಷನಲ್ ಕಂಪನಿಯನ್ನು ಟಾಟಾ ಗ್ರೂಪ್ ಖರೀದಿಸಿದೆ.

ಅಂಗಡಿಯಲ್ಲಿ ಯಾವುದೇ ನೀರಿನ ಬಾಟಲ್ ಇರಲಿ, ಜನಸಾಮಾನ್ಯರು ಹೋಗಿ ಒಂದು ಬಾಟಲ್ ಬಿಸ್ಲೇರಿ ನೀರು ಕೊಡಿ ಎನ್ನುವ ಮಟ್ಟಕ್ಕೆ ತನ್ನ ಬ್ರ್ಯಾಂಡ್ ಅನ್ನು ಎಲ್ಲೆಡೆ ವ್ಯವಸ್ಥಿತವಾಗಿ ಮಾರ್ಕೆಟಿಂಗ್ ಮಾಡಿ ಸಕ್ಸಸ್ ಕಂಡಿದ್ದ ಬಿಸ್ಲೆರಿ ಇಂಟರ್ನ್ಯಾಷನಲ್ ಕಂಪನಿ ಈಗ ಟಾಟಾ ಗ್ರೂಪ್‌ ತೆಕ್ಕೆಗೆ ಬಿದ್ದಿದೆ. ಸರಿಸುಮಾರು ಏಳು ಸಾವಿರ ಕೋಟಿಗೆ ಟಾಟಾ ಗ್ರೂಪ್ ಇದನ್ನು ಖರೀದಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಒಪ್ಪಂದದ ಮೇರೆಗೆ ಈಗಿನ ಆಡಳಿತ ಮಂಡಳಿಯು ಮುಂದಿನ 2 ವರ್ಷಗಳ ಕಾಲ ಮುಂದುವರಿಯಲಿದೆ ಎಂದು ತಿಳಿಸಿದೆ.

ಸದ್ಯಕ್ಕೆ ಮಾರುಕಟ್ಟೆ ಪ್ರಾಬಲ್ಯವನ್ನು ಬಿಸ್ಲೇರಿ ಹೊಂದಿದ್ದು ಟಾಟಾ ಗ್ರೂಪ್ಸ್‌ಗೆ ಮತ್ತಷ್ಟು ಲಾಭವಾಗುವುದು ನಿಶ್ಚಿತ. ಭಾರತ ಒಂದರಲ್ಲೇ ಬಾಟಲಿಗಳಲ್ಲಿನ ಕುಡಿಯುವ ನೀರಿನ ಮಾರಾಟ ವಹಿವಾಟು ವಾರ್ಷಿಕ 19,315 ಕೋಟಿ ರೂ.ಗಳಾಗಿವೆ ಎಂದು TOI ವರದಿ ಮಾಡಿದೆ.

ದೇಶಾದ್ಯಂತ ಬಿಸ್ಲೇರಿಯ 150 ಉತ್ಪಾದನಾ ಘಟಕಗಳನ್ನು ಹಾಗೂ 4,000 ವಿತರಕರು, 4,000 ಟ್ರಕ್‌ಗಳ ನೆಟ್‌ ವರ್ಕ್‌‌ಗಳನ್ನು ಹೊಂದಿದ್ದು ಇದೆಲ್ಲವೂ ಟಾಟಾ ಗ್ರೂಪ್ಸ್ ತೆಕ್ಕೆಗೆ ವರ್ಗಾವಣೆಯಾಗಲಿದೆ.

Related Articles

ಇತ್ತೀಚಿನ ಸುದ್ದಿಗಳು