Friday, June 14, 2024

ಸತ್ಯ | ನ್ಯಾಯ |ಧರ್ಮ

ಮಹಿಳೆಯರಿಗೆ ಭಾರತ ಅತ್ಯಂತ ಅಪಾಯಕಾರಿ ಸ್ಥಳವಾಗಿದೆ : ಟ್ವೀಟಿಗರ ಆಕ್ರೋಶ

ಬಿಹಾರ : ಯುವಕನೊಬ್ಬನ್ನು ಐದು ವರ್ಷದ ಬಾಲಕಿ ಮೇಲೆ ಲೈಂಗಿಕ ಅಪರಾಧವನ್ನೆಸಗಿದ್ದು, ಆರೋಪಿಗೆ ಶಿಕ್ಷೆಯಾಗಿ ಕೇವಲ ಐದು ಬಸ್ಕಿಯನ್ನೊಡಿಸಿ  ನಡೆದಿರುವ ಕೃತ್ಯವನ್ನು ಬಗೆಹರಿಸಿಕೊಂಡಿರುವ ಬಿಹಾರದ ನವಾದಾ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

ಮಗುವಿಗೆ ಚಾಕಲೇಟ್‌ ಆಸೆ ತೋರಿಸಿದ ಯುವಕನು, ಕೋಳಿ ಪಾರ್ಮ್‌ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ಅಪರಾಧ ಎಸಗಿದ್ದು, ಈ ಅಪರಾಧಕ್ಕೆ ಗ್ರಾಮಸ್ಥರೇ ಪಂಚಾಯಿತಿ ನಡೆಸಿ ಆರೋಪಿಗೆ ಐದು ಬಸ್ಕಿಯನ್ನು ಶಿಕ್ಷೆಯಾಗಿ ನೀಡಿದ್ದಾರೆ. ಅದಲ್ಲದೇ ಬಸ್ಕಿ ಹೊಡೆಸಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಿಟ್ಟಿದ್ದರು. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದ್ದು, ಬಾಲಕಿಗೆ ಆಗಿರುವ ಅನ್ಯಾಯವನ್ನು ಪರಿಗಣನೆಗೆ ತೆಗೆದುಕೊಳ್ಳದೆ, ಯುವಕ ಬಾಲಕಿಯನ್ನು ಏಕಾಂತ ಪ್ರದೇಶಕ್ಕೆ ಕರೆದೊಯ್ದನು ಎಂದು ಶಿಕ್ಷೆ ಕೊಟ್ಟಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

“ಮಹಿಳೆಯರಿಗೆ ಭಾರತ ಅತ್ಯಂತ ಅಪಾಯಕಾರಿ ಸ್ಥಳವಾಗಿದೆ” ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಅಪರಾಧ ಎಸಗಿದ ಆರೋಪಿಗೆ ಕೇವಲ ಬಸ್ಕಿ ಶಿಕ್ಷೆ ನೀಡಿರುವುದಲ್ಲದೆ, ಆಗಿರುವ ಅಪರಾಧವನ್ನು ಹಗುರವಾಗಿ ಪಡಿಗಣಿಸಿರುವುದು ಟ್ವೀಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

Related Articles

ಇತ್ತೀಚಿನ ಸುದ್ದಿಗಳು