Sunday, June 16, 2024

ಸತ್ಯ | ನ್ಯಾಯ |ಧರ್ಮ

ಗೋವಾದಲ್ಲಿ ಜೋರಾದ ವಿದೇಶಿಗರ ಡ್ರಗ್ಸ್‌ ವ್ಯವಹಾರ : ಇಬ್ಬರ ಬಂಧನ

ಗೋವಾ : ಗೋವಾದಲ್ಲಿದ್ದು, ಮಾಧಕ ವಸ್ತುಗಳ ದಂಧೆ ಮಾಡುತ್ತಿದ್ದ ಇಬ್ಬರು ವಿದೇಶಿಗರನ್ನು ನಾರ್ಕೋಟಿಕ್ಸ್‌ ಕಂಟ್ರೋಲ್‌ ಬ್ಯೂರೋ(NCB) ಬಂಧಿಸಿದ್ದು, 107 ಎಂಡಿಎಂಎ(MDMA) ಮಾತ್ರೆಗಳು, 40 ಗ್ರಾಂ ಹೈಗ್ರೇಡ್‌ ಮೆಫೆಡ್ರೋನ್‌( high grade Mephedrone) ಮತ್ತು 55 ಗ್ರಾಂ ಗುಣಮಟ್ಟದ ಹಶೀಶ್‌(quality hashish) ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೋವಾದಲ್ಲಿ ಸಿಕ್ಕಿಬಿದ್ದಿರುವ ಇಬ್ಬರು ಆರೋಪಿಗಳ ಬಳಿಯಿದ್ದ 4.5 ಲಕ್ಷ ರೂಗಳನ್ನು NCB ಅಧಿಕಾರಿಗಳೂ ವಶಪಡಿಸಿಕೊಂಡಿದ್ದು, ವಿಚಾರಣೆ ವೇಳೆ ಆರೋಪಿಗಳು ಮಾಧಕ ವಸ್ತುಗಳ ವ್ಯವಹಾರದಿಂದಲೇ ಆ ಹಣವನ್ನು ಪಡೆದಿರುವುದು ಎಂದು ತಪ್ಪೊಪ್ಪಿಕೊಂಡಿದ್ದಾರೆ. ಅದಲ್ಲದೇ ಉತ್ತರ ಗೋವಾ ಪ್ರದೇಶದಲ್ಲಿ ವಿದೇಶಿಗರು ನಿರ್ವಹಿಸಲ್ಪಡುತ್ತಿರುವ ಡ್ರಗ್ಸ್‌ ಸಿಂಡಿಕೇಟ್‌ ಇದೆ, ಅದಲ್ಲದೇ ಈ ದಂದೆಯಲ್ಲಿ ಅಂಬಿಕಾ ಎಂಬ ಮಹಿಳೆಯೂ ಭಾಗಿಯಾಗಿದ್ದು, ಅವರು ರಷ್ಯಾ ಮೂಲದವರು ಎಂಬ ಮಾಹಿತಿಯನ್ನೂ ಆರೋಪಿಗಳು ಹೊರಹಾಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಂತರ, ಆರೋಪಿಗಳಿಂದ ಪಡೆದ ಮಾಹಿತಿಯ ಮೇರೆಗೆ, NCB ಅಧಿಕಾರಿಗಳು ಉತ್ತರ ಗೋವಾದ ಸಿಯೋಲಿಂನ ಉಡ್ಡೋ ಬೀಚ್ ಬಳಿ ಬಲೆ ಬೀಸಿ, ಅಂಬಿಕಾ ಮತ್ತು ಆಕೆಯ ಬಳಿಯಿದ್ದ ಮಾಧಕ ವಸ್ತುಗಳೊಂದಿಗೆ ಅವಳನ್ನು ಬಂಧಿಸಿದ್ದಾರೆ.

ಅಂಬಿಕಾ ಬಳಿ ಇದ್ದ, ಸುಮಾರು 50 ಮಾಧಕ ಮಾತ್ರೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಆಕೆಯನ್ನು ವಿಚಾರಣೆ ನಡೆಸಿದಾಗ ಮತ್ತೊಂದು ಸತ್ಯ ಹೊರಬಂದಿದೆ. ಈ ಮಾಧಕ ದಂದೆಯಲ್ಲಿ ಬ್ರಿಟಿಷ್‌ ಪ್ರಜೆಯಾದ ಜೆ.ಲೀ ಎಂಬುವವರ ಪಾತ್ರವೂ ಇದ್ದು, ಅವರು ಗೋವಾದ ಮಾಪುಸಾದಲ್ಲಿ ನೆಲೆಸಿದ್ದಾರೆ ಎಂದು ಮತ್ತೊಂದು ತನಿಖೆಗೆ ಪೂರಕವಾಗಿರುವ ಮಾಹಿತಿಯನ್ನು ಬಿಚ್ಚಿಟ್ಟಿದ್ದಾಳೆ.

ಅಂಬಿಕಾಳ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ NCB ತಂಡವು, ಜೆ.ಲೀ ಅವರನ್ನು ಬಂಧಿಸಿದ್ದು, ಅವರು ಆಕೆಯ ತಂದೆಯೇ ಆಗಿದ್ದಾರೆ ಎನ್ನುವ ಮತ್ತೊಂದು ಸತ್ಯ ತಿಳಿದುಬಂದಿದ್ದು, ಅವರ ಬಳಿ ಇದ್ದ 57 ಎಕ್ಸ್ಟಸಿ, 40 ಗ್ರಾಂ ಮೆಫೆಡ್ರೋನ್‌( high grade Mephedrone) ಮತ್ತು 55 ಗ್ರಾಂ ಗುಣಮಟ್ಟದ ಹಶೀಶ್‌(quality hashish) ಮತ್ತು 4,50,420 ರೂಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಕುರಿತು NCB ಪ್ರಕಟಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ, ʼಪ್ರಮಾಣ, ಗುಣಮಟ್ಟ, ಭೂಗತ ನಂಟು ಮತ್ತು ಮಾಧಕ ವಸ್ತುಗಳ ವ್ಯವಹಾರಗಳಲ್ಲಿ ವಿದೇಶಿಗರ ಪಾತ್ರ ಮತ್ತು ಅವರು ಬಿಳಿ ಪ್ರವಾಸಿಗರಿಗೆ ಮಾತ್ರ ಡ್ರಗ್ಸ್‌ ಸರಬರಾಜು ಮಾಡಿರುವ ಬಗ್ಗೆ ಮತ್ತು ಗೋವಾದಲ್ಲಿಯೇ ದೀರ್ಘಕಾಲ ನೆಲೆಸಿ ಕಾರ್ಯನಿರ್ವಹಿಸುತ್ತಿದ್ದʼ ಬಗ್ಗೆ ತಿಳಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು