Monday, June 17, 2024

ಸತ್ಯ | ನ್ಯಾಯ |ಧರ್ಮ

ಅವಹೇಳನಕಾರಿ ಹೇಳಿಕೆಗಾಗಿ ಬಾಬಾ ರಾಮ್‌ದೇವ್‌ ಕ್ಷಮೆಯಾಚನೆ

ಮುಂಬೈ : ಕಾರ್ಯಕ್ರಮವೊಂದರಲ್ಲಿ ಮಹಿಳೆಯರು ಧರಿಸುವ ವಸ್ತ್ರಗಳ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ಕೊಟ್ಟಿದ್ದು, ಈ ಹಿನ್ನೆಲೆಯಲ್ಲಿ ಇಂದು ಅವರು ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಿದ್ದಾರೆ.

ಕಳೆದ ವಾರ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ಧ ರಾಮ್‌ದೇವ್‌ ಅವರು, ʼಮಹಿಳೆಯರು ಸೀರೆಯುಟ್ಟರೂ ಸುಂದರವಾಗಿ ಕಾಣುತ್ತಾರೆ, ಸಲ್ವಾರ್‌ ಹಾಕಿದರೂ ಚೆನ್ನಾಗಿ ಕಾಣುತ್ತಾರೆ ಅಷ್ಟೇ ಅಲ್ಲ ಏನನ್ನು ಹಾಕದಿದ್ದರೂ ಚೆನ್ನಾಗಿ ಕಾಣುತ್ತಾರೆʼ ಎಂದು ಅವಹೇಳನಕಾರಿಯಾಗಿ ಮಾತನಾಡಿದ್ದು, ಈ ವಿರುದ್ಧ ದೇಶಾದ್ಯಂತ ಜನರು ವಿರೋಧ ವ್ಯಕ್ತಪಡಿಸಿದ್ದರು.

ಇವರ ಈ ರೀತಿಯ ಕೆಟ್ಟ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್‌ ಅವರು ʼಎರಡು ದಿನದ ಒಳಗೆ ಅವರ ಆಕ್ಷೇಪಾರ್ಹ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡಬೇಕೆಂದುʼ ರಾಮ್‌ದೇವ್‌ ಅವರಿಗೆ ನೋಟಿಸ್‌ ಜಾರಿ ಮಾಡಿದ್ದರು.

ಬಾಬಾ ರಾಮ್‌ ದೇವ್‌ ಅವರ ಹೇಳಿಕೆಯ ಕುರಿತು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್‌ ಕೂಡ ರಾಮ್‌ದೇವ್‌ ಅವರ ಹೇಳಿಕೆಯ ವಿಡಿಯೋವನ್ನು ಟ್ವೀಟ್‌ ಮಾಡಿ ಕ್ಷಮೆಯಾಚಿಸುವಂತೆ ಕೋರಿದ್ದರು.

ನೋಟಿಸ್‌ ಪಡೆದ ಬಾಬಾ ರಾಮ್‌ದೇವ್‌ ಅಬರು ತಮ್ಮ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದು, ಹೇಳಿಕೆಗಾಗಿ ಕ್ಷಮೆಯಾಚಿಸಿದ್ದಾರೆ. ರಾಜ್ಯದ ಮಹಿಳಾ ಆಯೋಗವು ಅವರ ಪ್ರತಕ್ರಿಯೆಯನ್ನು ಸ್ವೀಕರಿಸಿದ್ದು, ಕ್ಷಮೆಯಾಚಿಸಿರುವ ಬಗ್ಗೆ ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು