Monday, June 17, 2024

ಸತ್ಯ | ನ್ಯಾಯ |ಧರ್ಮ

ಕನ್ನಡಾಭಿಮಾನಿಗಳಿಗೆ ʼಕನ್ನಡ ನಾಳುತೋರುಗೆʼ

ಬೆಂಗಳೂರು: ವರ್ಷ ಮುಗಿಯುವುದಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಹೊಸ ವರ್ಷಕ್ಕೆ ಅಪ್ಪಟ ಕನ್ನಡ ಭಾಷಾಭಿಮಾನಿಗಳಿಗೊಂದು ಹೊಸ ವರ್ಷದ ಉಡುಗರೆಯ ರೀತಿ ʼಕನ್ನಡ ನಾಳುತೋರುಗೆʼ ಎಂಬ ಕ್ಯಾಲೆಂಡರ್‌ ಮಾರುಕಟ್ಟೆಗೆ ಪ್ರವೇಶಿಸಿದೆ.

ಸಾಮಾನ್ಯವಾಗಿ ಅಂಕಿಗಳು ರೋಮನ್‌, ಹಿಂದಿ , ಮರಾಠಿ ಭಾಷೆಯ ಕ್ಯಾಲೆಂಡರ್‌ಗಳು ನಮಗೆ ಮಾರುಕಟ್ಟೆಗಳಲ್ಲಿ ನಾವು ನೋಡುತ್ತೇವೆ. ಕನ್ನಡ ಭಾಷೆ ಕ್ಯಾಲೆಂಡರ್‌ಗಳಲ್ಲೂ ಅದರಲ್ಲಿನ ದಿನಾಂಕ ಕನ್ನಡ ಅಂಕಿಗಳು ಕಾಣೆಯಾಗಿರುತ್ತವೆ. ಆದರೆ ಈ ಬಾರಿ ಬಂದಿರುವ ʼಕನ್ನಡ ನಾಳುತೋರುಗೆʼ ಎಂಬ ಹೆಸರಿನ ಕ್ಯಾಲೆಂಡರ್‌ ಒಂದು ಎಲ್ಲರ ಗಮನ ಸೆಳೆಯುತ್ತಿದೆ. ಈ ಕ್ಯಾಲೆಂಡರ್‌ ನಲ್ಲಿ ದಿನಾಂಕ, ವಾರ ಎಲ್ಲವೂ ಅಪ್ಪಟ ಕನ್ನಡದಿಂದ ಕೂಡಿದೆ.

ʼನಾಳು ತೋರುಗೆʼ ಎಂಬ ಶೀರ್ಷಿಕೆಯಡಿ ಬಿಡುಗಡೆಯಾಗಿರುವ ಈ ಕ್ಯಾಲೆಂಡರ್‌ ಅನ್ನು ಶ್ರೀಪತಿ ಗೋಗಡಿಗೆ ಅವರ  ಯೋಚನೆಯೊಂದಿಗೆ ಮುದ್ರಿತವಾಗಿರುವ ಈ ದಿನದರ್ಶಿಕೆಯು(calender) ಬೆಂಗಳೂರಿನ ರಾಜಾಜಿನಗರದಲ್ಲಿರುವ ಪಿಸುಮಾತು ಎಂಟರ್‌ ಪ್ರೈಸಸ್‌ ವಿನ್ಯಾಸಗೊಳಿಸಿರುವ ಈ ಕ್ಯಾಲೆಂಡರ್‌ ಕನ್ನಡಾಭಿಮಾನಿಗಳ ಮನ ಸೆಳೆಯುತ್ತಿದೆ.

ಕ್ಯಾಲೆಂಡರ್‌ನಲ್ಲಿ ದಿನಾಂಕಗಳು ಕನ್ನಡ ಅಂಕಿಗಳಲ್ಲೇ ಮುದ್ರಿತವಾಗಿರುವುದಲ್ಲದೆ, ಪಂಪ, ರನ್ನ, ಜನ್ನ ಸೇರಿದಂತೆ ಅಂದಿನಿಂದ ಇಂದಿನ ಕವಿಗಳವರೆಗಿನ ಪ್ರಮುಖ ನುಡಿಗಟ್ಟುಗಳು ಕನ್ನಡದಲ್ಲಿನ್ನು ಸಾಹಿತ್ಯಿಕ ಸಾಧನೆ, ಸಾಧಕರ ಪರಿಚಯವನ್ನೂ ಮಾಡಿಕೊಡುವ ಪ್ರಯತ್ನವನ್ನು ಮಾಡಿದ್ದಾರೆ. ಕ್ಯಾಲೆಂಡರ್‌ನ ಮೇಲ್ಭಾಗದಲ್ಲಿ ಕರುನಾಡ ಭೂಪಟ ಮತ್ತು ಧ್ವಜವನ್ನು ಇರಿಸಿದ್ದಾರೆ.

ಈ ಬಗ್ಗೆ ಸ್ವತ: ಶ್ರೀಪತಿ ಗೋಗಡಿಗೆ ಅವರೇ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ʼನಾಳುʼ ಎಂದರೆ ದಿನ ಎಂದರ್ಥ ಇದು ಅಪ್ಪಟ ಕನ್ನಡ ಪದವಾಗಿದೆ. ʼತೋರಿಗೆʼ ಎಂದರೆ ತೋರಿಸು ಎಂದರ್ಥ. ಹೀಗಾಗಿ ʼಕನ್ನಡ ನಾಳುತೋರುಗೆʼ ಎಂದು ಕ್ಯಾಲೆಂಡರ್‌ನ ಹೆಸರಿಡಲಾಗಿದೆ ಎಂದಿದ್ದಾರೆ.

ಮನೆಯಲ್ಲಿ ನಾವು ದಿನನಿತ್ಯದ ಕೆಲಸಗಳಿಗಾಗಿ ಅಥವಾ ಯಾವುದೋ ಮುಖ್ಯ ಕಾರ್ಯಗಳ ಬಗ್ಗೆ ಸದಾ ನೆನಪಲ್ಲಿ ಇಡಲು ಕ್ಯಾಲೆಂಡರ್‌ ಮೇಲೆ ಬರೆದಿಡುವ ಅಭ್ಯಾಸ ಇದೆ. ಹೀಗಾಗಿ ಬರೀ ಕನ್ನಡ ಕ್ಯಾಲೆಂಡರ್‌ ತರುವುದಷ್ಟೇ ಅಲ್ಲ ನಮ್ಮವರ ಮನಸ್ಥಿತಿಗೆ ಹೊಂದಿಕೊಳ್ಳುವಂತೆ ಈ ಅಭ್ಯಾಸ ಆರಂಭವಾಗಬೇಕು ಎಂಬುದಕ್ಕೆ ಪ್ರತಿ ತಿಂಗಳ ಕ್ಯಾಲೆಂಡರ್‌ ಪುಟದಲ್ಲೂ ಏನಾದರೂ ಬರೆದಿಟ್ಟುಕೊಳ್ಳುವ ಎಡೆ ಎಂದು ಮಾಡಿದ್ದೇವೆ. ಇದು ಕೂಡ ಈ ಕ್ಯಾಲೆಂಡರ್‌ ಅನ್ನು ಜನರು ಇಷ್ಟ ಪಡಲು ಕಾರಣವಾಗಿದೆ ಎಂದು ಹೇಳಿದ್ದಾರೆ.

ಈ ಕ್ಯಾಲೆಂಡರ್‌ ಅನ್ನು QR ಕೋಡ್‌ ಸ್ಕ್ಯಾನ್‌ ಮಾಡುವುದರ ಮುಖಾಂತರವೂ ಖರೀದಿಸುವ ಅವಕಾಶಗಳನ್ನು ಮಾಡಿದ್ದಾರೆ. ಹೆಚ್ಚಿನ ಮಾಹಿತಿ ಬೇಕಾದವರು 9845106664 ಮೊಬೈಲ್‌ ನಂಬರ್‌ ಮೂಲಕ ಸಂಪರ್ಕಿಸಬಹುದು.

ನಾಳು ತೋರುಗೆ ಪಡೆಯಲು ಕ್ಯೂ ಆರ್‌ ಕೋಡ್‌

Related Articles

ಇತ್ತೀಚಿನ ಸುದ್ದಿಗಳು