Monday, June 17, 2024

ಸತ್ಯ | ನ್ಯಾಯ |ಧರ್ಮ

436 ಪೊಲೀಸ್‌ ಪೇದೆಗಳ ನಿರ್ಗಮನ ಪಥಸಂಚಲನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಐಮಂಗಲ ದಲ್ಲಿ 7 ನೇ ತಂಡದ ನಾಗರಿಕ ಪೊಲೀಸ್ ಕಾನ್ಸ್ಟೇಬಲ್‌ಗಳ ನಿರ್ಗಮನ ಪಥ ಸಂಚಲನವಾಗಿದ್ದು, ಪೊಲೀಸ್ ಪೇದೆಗಳ 8 ತಿಂಗಳ ಭದ್ರ ಬುನಾದಿ ತರಬೇತಿಯ ಸಮಾರೋಪ ನಡೆದಿದೆ.

ಚಿತ್ರದುರ್ಗದಲ್ಲಿ 436 ಜನರ ಅಂತಿಮ ತರೆಬೇತಿ ಪಡೆದವರ ಭಾಗಿ (ಹೊಸ ಪೊಲೀಸ್ ಪೇದೆಗಳು) ಎಲ್ಲರಿಂದಲೂ ನಿರ್ಗಮನ ಪಥ ಸಂಚಲನವಾಗಿದೆ.

ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಘೋಷಣೆಗಳನ್ನು ನೀಡಲಾಗಿದ್ದು (ಕಾಷನ್), ಕನ್ನಡದಲ್ಲಿ ಪೆರೇಡ್‌ಗಳ ಘೋಷಣೆ ಕೇಳಿ ಸಭಿಕರಿಗೆ ಹರ್ಷ ಉಂಟಾಗಿದೆ.

ಸಮಾರೋಪದಲ್ಲಿ ಭಾರತ ಸಂವಿಧಾನಕ್ಕೆ ಬದ್ಧರಾಗಿ, ಜನರ ಪ್ರಾಣ ಆಸ್ತಿಪಾಸ್ತಿ ರಕ್ಷಣೆಗೆ, ಧೈರ್ಯದಿಂದ ಮತ್ತು ದಾಕ್ಷಿಣ್ಯಕ್ಕೆ ಒಳಗಾಗದೆ ಮತೀಯ ರಾಜಕೀಯ ಪ್ರಭಾವಕ್ಕೆ ಒಳಗಾಗದೆ ಕರ್ತವ್ಯ ನಿರ್ವಹಣೆ ಮಾಡುವುದಾಗಿ ಪ್ರತಿಜ್ಞೆ ಸ್ವೀಕಾರ ಮಾಡಿದ್ದಾರೆ.

ಈ ಸಂದರ್ಭದಲ್ಲಿ,  ಪ್ರತಿಜ್ಞೆಗೆ ಬದ್ಧರಾಗಿ ಕರ್ತವ್ಯ ನಡೆಸಿ, ನಿವೃತ್ತಿಯ ನಂತರವೂ ಅದಕ್ಕೆ ಬದ್ಧರಾಗಿ ಎಂದು ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದು, ಸಬ್ ಇನ್ಸ್ಪೆಕ್ಟರ್ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆಸಿದ್ದು ಬೇಸರವಾಗುತ್ತಿದೆ. ಬೇಲಿಯೇ ಎದ್ದು ಹೊಲ ಮೇಯಿದಂತೆ ಆಗಿದೆ. ಇದರಿಂದ ಇಲಾಖೆಗೆ ಒಂದು ಅಪಖ್ಯಾತಿ, ಕಪ್ಪು ಚುಕ್ಕೆ ಆಗಿದೆ. ಪೇದೆಯಿಂದ ಐಪಿಎಸ್ ಅಧಿಕಾರಿವರೆಗೂ ಎಲ್ಲರು ಈ ಭ್ರಷ್ಟಾಚಾರದಲ್ಲಿ ಶಾಮೀಲಾಗಿದ್ದಾರೆ. ಯಾರನ್ನು ನಾವು ಬಿಟ್ಟಿಲ್ಲ ಬಿಡೋದಿಲ್ಲ. ಈ ಬಗ್ಗೆ ಪಾರದರ್ಶಕ ತನಿಖೆ ನಡೆಯುತ್ತೆ ಯಾರನ್ನು ಬಿಡುವುದಿಲ್ಲ ಶಿಕ್ಷೆ ಕೊಡುವಂಥ ಕೆಲಸ ಕೋರ್ಟ್ ಮಾಡುತ್ತದೆ ಅದನ್ನು ಪೊಲೀಸರು ಮಾಡುವಂತಿಲ್ಲ.ಪೊಲೀಸರು ಎಚ್ಚರಿಕೆಯಿಂದ ಸೇವೆ ಸಲ್ಲಿಸಬೇಕು ಎಂದು ಹೇಳಿದ್ದಾರೆ.

Puc ಮಾನದಂಡದ ಈ ಉದ್ಯೋಗಕ್ಕೆ 45 ಜನ ಸ್ನಾತಕೋತ್ತರ ಪದವೀಧರರು, 5 ಜನ Bʼed ಪದವೀಧರರು, 7 ಜನ ಡಿಪ್ಲೋಮೊ, 30 ಕ್ಕೂ ಹೆಚ್ಚು Be-MTech , 200ಕ್ಕೂ ಹೆಚ್ಚು ಪದವೀಧರು ನೇಮಕೊಂಡಿದ್ದು, ಇದು ಸರ್ಕಾರಿ ಕ್ಷೇತ್ರದಲ್ಲಿ ಇರುವ ಉದ್ಯೋಗ ಕೊರತೆಯನ್ನು ತೋರಿಸುತ್ತಿದೆ.

ವೇದಿಕೆಯಲ್ಲಿ ಶಾಸಕರಾದ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್, ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಪಿ. ಪಾಪಣ್ಣ, ಚಿತ್ರದುರ್ಗ ಜಿಲ್ಲಾ ಎಸ್‌ಪಿ ಪುರುಷೋತ್ತಮ್ ಐಪಿಎಸ್, ಪೊಲೀಸ್‌ ಅಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಸಮಾರೋಪದಲ್ಲಿ ಭಾಗವಗಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು