Friday, June 14, 2024

ಸತ್ಯ | ನ್ಯಾಯ |ಧರ್ಮ

ಒಂದಲ್ಲ ಒಂದು ದಿನ ನಮ್ಮ ತಂದೆ ಸಿಎಂ ಆಗುತ್ತಾರೆ : ಡಿಕೆಶಿ ಪುತ್ರಿ ಐಶ್ವರ್ಯ

ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ವಿಚಾರದಲ್ಲಿ ನಡೆದ ಭಾರೀ ಚರ್ಚೆಯ ನಂತರ ಸಿದ್ದರಾಮಯ್ಯ ಅವರನ್ನು ಸಿಎಂ ಆಗಿ ಗೋಷಿಸಿ ಡಿಕೆಶಿ ಅವರನ್ನು ಉಪಮುಖ್ಯಂತ್ರಿಯಾಗಿ ಘೊಷಿಸಿತು. ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿಯಾಗ್ತಾರೆ ಎಂಬ ಆಸೆಯಿಂದಿದ್ದ ಅಭಿಮಾನಿಗಳಿಗೆ ನಿರಾಶೆ ಮೂಡಿತ್ತು. ಈಗ ಆತರದ ಬೇಸರವನ್ನು ಡಿಕೆಶಿ ಪುತ್ರಿ ಐಶ್ವರ್ಯ ಕೂಡ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪದಗ್ರಹಣ ವೇಳೆ ಮಾತನಾಡಿದ ಅವರು,  ಒಂದಲ್ಲ ಒಂದು ದಿನ ನಮ್ಮ ತಂದೆ ರಾಜ್ಯದ ಸಿಎಂ ಆಗುತ್ತಾರೆ ಎಂದು ಬೆಂಗಳೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಹೇಳಿದ್ದಾರೆ.  ನಮ್ಮ ತಂದೆ ಡಿಕೆಶಿ ಮುಖ್ಯಮಂತ್ರಿ ಆಗುವುದನ್ನು ನೋಡುತ್ತೇವೆ ಎಂದರು.

ಇದೇ ವೇಳೆ ಮಾತನಾಡಿದ ಶಿವಕುಮಾರ್ ಪತ್ನಿ ಉಷಾ ಕೂಡ ಬೇಸರ ವ್ಯಕ್ತಪಡಿಸಿದ್ದು, ‘ನನಗೆ ತುಂಬಾ ಖುಷಿ ಆಗ್ತಾಯಿದೆ. ಅವರು ಮುಖ್ಯಮಂತ್ರಿ ಆಗ್ಬೇಕು ಅನ್ಸುತ್ತೆ. ಆದರೆ ದೇವರು ಇನ್ನೂ ಸಮಯ ಕೂಡಿ ಕೊಟ್ಟಿಲ್ಲ’ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪತ್ನಿ ಉಷಾ ಪ್ರತಿಕ್ರಿಯೆ ನೀಡಿದರು. ಇದೇ ವೇಳೆ ಮಾತನಾಡಿದ ಮಗಳು ಐಶ್ವರ್ಯ ಅವರು, ‘ ಮುಂದೆ ಒಂದು ದಿನ ಅವರು ಸಿಎಂ ಆಗೇ ಆಗ್ತಾರೆ. ಅದನ್ನು ನೀವು ನೋಡ್ತೀರಾ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Related Articles

ಇತ್ತೀಚಿನ ಸುದ್ದಿಗಳು