Monday, June 17, 2024

ಸತ್ಯ | ನ್ಯಾಯ |ಧರ್ಮ

ಮೋದಿ ಒಬ್ಬರೇ ಸಾಕು ಎಂದ ಸೂಲಿಬೆಲೆಗೆ ನೆಟ್ಟಿಗರ ಮಂಗಳಾರತಿ!!

ಬಿಜೆಪಿ ಪಕ್ಷದ ಬಾಡಿಗೆ ಬಾಷಣಕಾರ ಎಂದೇ ಹೆಸರಾಗಿರುವ ಚಕ್ರವರ್ತಿ ಸೂಲಿಬೆಲೆ ಯಾನೆ ಮಿಥುನ್ ಚಕ್ರವರ್ತಿಯ ಟ್ವಿಟ್ಟರ್ ಪೋಸ್ಟ್ ಒಂದಕ್ಕೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಮೋದಿ ಒಬ್ಬರೇ ಸಾಕು’ ಎಂಬ ವಿಲಕ್ಷಣ ಮಾದರಿಯ ಅಭಿಯಾನಕ್ಕೆ ಇಳಿದಿರುವ ಚಕ್ರವರ್ತಿ ಸೂಲಿಬೆಲೆ ಮತ್ತು ತಂಡಕ್ಕೆ ಈಗ ನೆಟ್ಟಿಗರು, ಬಿಜೆಪಿ ಮಂದಿಯೂ ಸೇರಿದಂತೆ ಬಹುತೇಕರು ಟ್ವಿಟ್ಟರ್ ನಲ್ಲಿ ಹಾಕಿದ ಪೋಸ್ಟ್ ಗೆ ಬೈದಾಡಿರುವುದು ಈಗ ವೈರಲ್ ಆಗುತ್ತಿದೆ.

ಅಂದಹಾಗೆ ಚುನಾವಣೆ ಬಂತು ಎಂದಾಗ ಎದುರಾಗುವ ಚಕ್ರವರ್ತಿ ಸೂಲಿಬೆಲೆ ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸಂಪೂರ್ಣ ಕಣ್ಮರೆಯಾಗಿದ್ದು ಹಲವು ಮಂದಿ ಗಮನಿಸಿರಬಹುದು. ಆದರೆ ಮುಂದೆ ಎದುರಾಗುವ ಲೋಕಸಭಾ ಚುನಾವಣೆಗೆಂದೇ ಸರ್ವ ಸನ್ನದ್ದರಾಗಿ ಬಂದಿರುವ ಈ ವ್ಯಕ್ತಿ ಈಗ ಮೋದಿ ಪರವಾಗಿ ಕ್ಯಾಂಪೇನ್ ಗೆ ಇಳಿದಿದ್ದಾರೆ.

ಕಳೆದ 9 ವರ್ಷಗಳ ಅವಧಿಯಲ್ಲಿ ನರೇಂದ್ರ ಮೋದಿ ಸರ್ಕಾರದ ‘ಸಾಧನೆ’ಗಳನ್ನು ಪಟ್ಟಿ ಮಾಡಿ ಜನರ ಮುಂದೆ ಇಡುವ ಕೆಲಸಕ್ಕೆ ಮುಂದಾಗಿದ್ದಾರೆ ಚಕ್ರವರ್ತಿ ಸೂಲಿಬೆಲೆ. ಕಳೆದ ಬಾರಿಯಂತೆ ಈ ಬಾರಿಯೂ ಸಹ ಬಿಜೆಪಿ ಪಕ್ಷ ‘ಮೋದಿ’ ಎಂಬ ಒಂದೇ ಒಂದು ಮುಖವನ್ನು ಇಟ್ಟು ಚುನಾವಣೆ ಎದುರಿಸುವ ಮುನ್ಸೂಚನೆಯನ್ನ ಚಕ್ರವರ್ತಿ ಸೂಲಿಬೆಲೆಯ ಈ ಅಭಿಯಾನ ಹೊರಹಾಕಿದಂತಿದೆ.

ಆದರೆ 2019 ಕ್ಕೂ ಮುನ್ನ ಚಕ್ರವರ್ತಿ ಸೂಲಿಬೆಲೆ ಭಾಷಣಕ್ಕೆ ಸಿಗುತ್ತಿದ್ದ ಸಕಾರಾತ್ಮಕ ಪ್ರತಿಕ್ರಿಯೆ ಈಗ ಇಲ್ಲ ಎಂಬುದು ಸ್ಪಷ್ಟ. ಯಾಕೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಜನಪರ ಚಿಂತನೆಯ ವ್ಯಕ್ತಿಗಳು ಚಕ್ರವರ್ತಿ ಸೂಲಿಬೆಲೆ ಹಳೆಯ ಭಾಷಣಗಳನ್ನು ಹೆಕ್ಕಿ ತಗೆದು, ಆ ಭಾಷಣಗಳಲ್ಲಿ ಆಡಿರುವ ಸುಳ್ಳು ಮಾತುಗಳು ‘ಹೆಂಗ್ ಪುಂಗ್ಲಿ’ ಅಭಿಯಾನದ ಹೆಸರಿನಲ್ಲಿ ಈಗಲೂ ಟ್ರೋಲ್ ಆಗುತ್ತಿವೆ. ಸಧ್ಯ ಅದೊಂದು ಅಭಿಯಾನದಲ್ಲಿ ಹೊರಬಂದ ಹೆಚ್ಚಿನ ಭಾಷಣದ ಅಂಶಗಳಿಗೆ ಈ ವರೆಗೂ ಚಕ್ರವರ್ತಿ ಸೂಲಿಬೆಲೆ ಕಡೆಯಿಂದ ಈಗಲೂ ಉತ್ತರ ಬಂದಿಲ್ಲ ಎಂಬುದು ಸ್ಪಷ್ಟ.

ಅಂದಹಾಗೆ ಈ ಹಿಂದೆ 2014 ಮತ್ತು 2019 ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಇದೇ ಚಕ್ರವರ್ತಿ ಸೂಲಿಬೆಲೆ ಮಾಡಿದ ಭಾಷಣಗಳು, ರಾಜ್ಯದ ಮೂಲೆ ಮೂಲೆಗಳಲ್ಲಿ ನಡೆದ ಕ್ಯಾಂಪೇನ್ ಗಳು ಹೆಚ್ಚು ಚರ್ಚಿತ ವಿಷಯಗಳಾಗಿದ್ದವು. ಅದರ ಪರಿಣಾಮವೇ ಈಗ ಚಕ್ರವರ್ತಿ ಸೂಲಿಬೆಲೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಪ್ರತೀ ಪೋಸ್ಟ್ ನಲ್ಲೂ ನೆಟ್ಟಿಗರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಅದರ ಭಾಗವಾಗಿ ಇಂದು ‘ಮೋದಿ ಒಬ್ಬರೇ ಸಾಕು’ ಎಂದು ಹಾಕಿದ ಪೋಸ್ಟ್ ಗೆ ಬಂದ ಪ್ರತೀ ಪ್ರತಿಕ್ರಿಯೆ ಅವರ ವಿರುದ್ಧವಾಗೇ ಇದೆ.

https://twitter.com/astitvam/status/1674293679471857664?t=roEaK1sxBegPIFUXT9PUQA&s=19

ಮೋದಿಯೊಬ್ಬರೇ ಸಾಕು ಎಂದು ಹಾಕಿದ ಈ ಪೋಸ್ಟ್ ಗೆ ಕೆಲವು ಆಯ್ದ ಪ್ರತಿಕ್ರಿಯೆ ಈ ಕೆಳಗಿನಂತಿದೆ.
ಕುಶಾಲ್ ಬಿದರೆ ಎಂಬುವವರು : “ನೋಡಿ ಮಿಸ್ಟರ್ ಹೆಂಗ್ ಪುಂಗ್ಲಿ 99,000 ಸ್ಟಾರ್ಟ್ ಅಪ್ ಶುರು ಮಾಡಿದ ಮೋದಿಗೆ ಅವರಿಗಾಗಿ ಜೀತ ಮಾಡುತ್ತಿದ್ದ ನೀನು ನೆನಪಾಗಲಿಲ್ಲ ನೋಡು! ನಿನಗೆ ಅಂತ ಒಂದು ಸ್ಟಾರ್ಟ್ ಅಪ್ ಶುರು ಮಾಡಿಕೊಡೋದು ಬಿಡು ಒಂದು ಗುಮಾಸ್ತನ ಕೆಲಸ ಸಹ ಕೊಡಿಸಲಿಲ್ಲವಲ್ಲ! ಹೋಗಿ ಯಾವುದಾದರೂ ಕೆರೆನೋ ಬಾವಿನೋ ನೋಡ್ಕೋ ಗುರು!!!!” ಎಂದು ಪ್ರತಿಕ್ರಿಯಿಸಿದ್ದಾರೆ.
https://twitter.com/Kushal_Bidare/status/1674384977885294593?t=Y5BkpCV24tbPcUBOLOvMOA&s=19

ಸುಧೀರ್ ಕುಮಾರ್ ಎಂಬುವವರು : “ಮಗ ಈ ಅಂಕಿ ಅಂಶಗಳು ನಿನಗೆ ಮಾತ್ರ ಸಿಗೋದ ಇಲ್ಲ ಬರೀ ಬುರುಡೆ ಬಿಡೋದಾ ಹಣ ತಗೊಂಡು ಈ ಅಂಕಿ ಅಂಶಗಳು ಎಲ್ಲಿ. ಸಿಗುತ್ತದೆ ಅದರ ಲಿಂಕ್ ಸೇರಿಸು ಎಲ್ಲರೂ ತಿಳಿದುಕೊಳ್ಳಲಿ” ಎಂದು ಕಾಲೆಳೆದಿದ್ದಾರೆ.
https://twitter.com/CSudheerkumar4/status/1674319488886648834?t=EiDilSaXKZyWxKSN_SydMA&s=19

ಹಾಗೇ ಶಿವಕುಮಾರ ಎಂಬುವವರು : “ನೀನು ಬಂದರೆ ನನ್ನ ಪ್ರಶ್ನೆಗಳು. ಕಪ್ಪು ಹಣ ಎಲ್ಲಿ? ಇನ್ನು ನೂರು ದಿನ ಆಗಿಲ್ವ. ಸ್ಮಾರ್ಟ್ ಸಿಟಿ ಎಲ್ಲಿ? ವರ್ಷದಲ್ಲಿ 2 ಕೋಟಿ ಉದ್ಯೋಗ ಎಲ್ಲಿ? ಪೆಟ್ರೋಲ್ Rs 50 ಡೀಸೆಲ್ Rs 30 ಯಾವಾಗ? ಪಿಟೀಲು ಮಾಮನ 1 ಡಾಲರ್ ಗೆ 15 ರೂಪಾಯಿ ಯಾವಾಗ? ಬುಲೆಟ್ ಟ್ರೈನ್ ಯಾವಾಗ? ಈ ಮೇಲಿನ ಪ್ರಶ್ನೆಗಳಿಗೆ ಉತ್ತರ ಕೊಡು ಮೊದಲು ಇವೆಲ್ಲ ನೀನೇ ಪುಂಗಿರೋದು!” ಎಂಬಂತೆ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
https://twitter.com/SHIVAKUMAR81374/status/1674637811813871616?t=khRXS7k-bcFnaKzcqh2NXA&s=19

ಟ್ವಿಟ್ ಗೆ ಬಂದ ಬಹುತೇಕ 99 ಪ್ರತಿಶತ ಪ್ರತಿಕ್ರಿಯೆಗಳು ಚಕ್ರವರ್ತಿ ಸೂಲಿಬೆಲೆಯನ್ನು ತರಾಟೆಗೆ ತಗೆದುಕೊಂಡದ್ದೇ ಆಗಿವೆ.

ಅಂತೂ ಚಕ್ರವರ್ತಿ ಸೂಲಿಬೆಲೆ ಭಾಷಣಗಳು ಕಳೆದ ಅವಧಿಯಲ್ಲಿ ಮಾಡಿದಷ್ಟು ಮ್ಯಾಜಿಕ್ ಈ ಬಾರಿ ಮಾಡುವುದಿಲ್ಲ ಎಂಬುದು ಸತ್ಯ. ಯಾಕೆಂದರೆ ಕೇವಲ ನಾಲ್ಕು ವರ್ಷಗಳ ಈಚೆಗೆ ಚಕ್ರವರ್ತಿ ಸೂಲಿಬೆಲೆಯ ಪ್ರತೀ ಭಾಷಣಗಳು ಒಂದರ ಹಿಂದೆ ಒಂದರಂತೆ ಟ್ರೋಲ್ ಗೆ ಒಳಗಾಗಿವೆ. ಅದೆಷ್ಟು ಎಂದರೆ ಆತ ಬಾಯಿ ಬಿಟ್ಟರೆ ಸುಳ್ಳು ಎಂಬಷ್ಟರ ಮಟ್ಟಿಗೆ ಆತನ ಭಾಷಣಗಳು ಟ್ರೋಲ್ ಗೆ ಒಳಗಾಗಿವೆ.

Related Articles

ಇತ್ತೀಚಿನ ಸುದ್ದಿಗಳು