Monday, June 17, 2024

ಸತ್ಯ | ನ್ಯಾಯ |ಧರ್ಮ

ಹಿಂದೂ ಎನ್ನುವುದು ಧರ್ಮವೇ ಅಲ್ಲ: ತೋಂಟದಾರ್ಯ ಸಿದ್ದರಾಮ ಸ್ವಾಮಿ

ನಾವು ಹಿಂದೂ ವಿರೋಧಿಗಳಲ್ಲ, ಜೈನರು, ಸಿಖ್‌ರು, ಬೌದ್ಧರು ಹಿಂದೂ ವಿರೋಧಿಗಳಲ್ಲ.

ಹಿಂದೂ ಎನ್ನುವುದು ಒಂದು ಧರ್ಮವೇ ಅಲ್ಲ.

ಧಾರವಾಡ: ನಾವು ಹಿಂದೂ ವಿರೋಧಿಗಳಲ್ಲ, ಆದರೆ ಹಿಂದೂ ಎನ್ನುವ ಒಂದು ಧರ್ಮವೇ ಇಲ್ಲ ಎಂದು ಗದಗ ತೋಂಟದಾರ್ಯ ಮಠದ ಡಾ. ಸಿದ್ದರಾಮ ಸ್ವಾಮಿ ಹೇಳಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರರೊಡನೆ ಮಾತನಾಡುತ್ತಿದ್ದ ಅವರು, “ಹಿಂದೂ ಎನ್ನುವುದು ಒಂದ ಜೀವನ ಪದ್ಧತಿ ಮಾತ್ರ. ಸ್ಥಾಪಕನನ್ನು ಹೊಂದಿದ್ದರೆ ಮಾತ್ರ ಅದೊಂದ ಧರ್ಮವೆನ್ನಿಸಿಕೊಳ್ಳುತ್ತದೆ. ಧರ್ಮವೆಂದರೆ ಅದಕ್ಕೆ ಅದರದ್ದೇ ಆದ ಸಂವಿಧಾನವಿರಬೇಕು. ಒಂದೇ ದೇವರನ್ನು ಪೂಜಿಸುತ್ತಿರಬೇಕು. ಈ ಹಿನ್ನೆಲೆಯಲ್ಲಿ ನೋಡಿದಾಗ ಲಿಂಗಾಯತ ಸ್ವತಂತ್ರ ಧರ್ಮ. ಬಸವಣ್ಣನವರು ಇದರ ಸ್ಥಾಪಕರು” ಎಂದು ಹೇಳಿದರು.

ವಚನ ಸಾಹಿತ್ಯವೇ ಲಿಂಗಾಯತ ಧರ್ಮದ ಸಂವಿಧಾನ. ನಾವೆಲ್ಲ ಇಷ್ಟಲಿಂಗವನ್ನು ಪೂಜಿಸುವವರು. ಹಿಂದೂ ಧರ್ಮಕ್ಕೆ ಓರ್ವ ಪ್ರವರ್ತಕ, ಪ್ರವಾದಿ, ಯಾವುದೇ ನಿರ್ದಿಷ್ಟವಾದ ಗ್ರಂಥ ಇಲ್ಲ. ನಿರ್ದಿಷ್ಟವಾದ ದೇವರಿಲ್ಲ. ಅಲ್ಲಿ 33 ಕೋಟಿ ದೇವರನ್ನು ಪೂಜಿಸುತ್ತಾರೆ. ಅದು ವೈದಿಕ ಧರ್ಮವಾಗಿದೆ. ಅದನ್ನೇ ಹಿಂದೂ ಧರ್ಮ ಎಂದು ಪರಿವರ್ತನೆ ಮಾಡಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಭಗವದ್ಗೀತೆಯಲ್ಲಿ 18 ಅಧ್ಯಾಯಗಳಿದ್ದು ಅವುಗಳಲ್ಲಿ ಯಾವ ಶ್ಲೋಕದಲ್ಲಿಯೂ ಹಿಂದೂ ಎಂಬ ಪದ ಕಂಡುಬರುವುದಿಲ್ಲ. ವೇದ, ಉಪನಿಷತ್‍ಗಳಲ್ಲಿ ಆ ಪದದ ಪ್ರಯೋಗವಾಗಿಲ್ಲ. ಹೀಗಾಗಿ ನಾವು ಸ್ವತಂತ್ರ ಧರ್ಮ ಪಡೆದರೆ ಹಿಂದೂ ವಿರೋಧಿ ಆಗುವುದಿಲ್ಲ ಎಂದು ಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

Related Articles

ಇತ್ತೀಚಿನ ಸುದ್ದಿಗಳು