Saturday, June 15, 2024

ಸತ್ಯ | ನ್ಯಾಯ |ಧರ್ಮ

ಬಿಪಿ ಮತ್ತು ತೂಕದ ಸಮಸ್ಯೆಯೇ? ಒಮ್ಮೆ ಶಂಖಪುಷ್ಪ ಚಹಾ ಬಳಸಿ ನೋಡಿ

ನಮಗೆಲ್ಲ ದಿನಾ ಬೆಳಗ್ಗೆ ಎದ್ದ ಕೂಡ್ಲೇ ಒಂದು ಲೋಟ ಏನಾದರೂ ಬಿಸಿ ಬಿಸಿ ಇರೋದು ಬೇಕು. ಕೆಲವರಿಗೆ ಕಾಫಿ, ಕೆಲವರಿಗೆ ಟೀ, ಇನ್ನೂ ಕೆಲವರಿಗೆ ಗ್ರೀನ್‌ ಟೀ, ಮತ್ತೆ ಕೆಲವರಿಗೆ ಲೆಮನ್‌ ಟೀ. ಹೀಗೆ ಹತ್ತು ಹಲವು ಬಗೆಯ ಬಿಸಿ ಪಾನೀಯ ಬೆಳ್ಳಂಬೆಳಗ್ಗೆ ಜನರ ಹೊಟ್ಟೆ ಸೇರುವುದಂತೂ ಹೌದು.

ಹೊಟ್ಟೆ ಅಂದ ತಕ್ಷಣ ಈಗಿನ ಕಾಲದ ಹೆಚ್ಚಿನವರಿಗೆ ತಮ್ಮ ಹೊಟ್ಟೆ ಮೇಲೆ ಕಣ್ಣು ಹೋಗುತ್ತೆ. ಮತ್ತೆ ಅದು ಮುಂದೆ ಬಂದಿರೋದು ನೋಡಿ ಬೇಸರ ಆಗುತ್ತೆ. ನಿಮಗೂ ಹೀಗಾಗುತ್ತಾ? ಹೌದಾದ್ರೆ ಈ ಲೇಖನ ಓದಿ. ಈ ಟೀ ಕುಡಿದ್ರೆ ನಿಮ್ಮ ಹೊಟ್ಟೆ ಕರಗುವ ಜೊತೆ ಜೊತೆಗೆ ನಿಮಗೆ ಬಿಪಿ ಇದ್ದಲ್ಲಿ ಅದೂ ನಾರ್ಮಲ್‌ ಆಗುತ್ತೆ. ಇದಲ್ಲದೆ ಇನ್ನೂ ಹಲವು ಪ್ರಯೋಜನಗಳು ಇವೆ. ಅವುಗಳ ಬಗ್ಗೆ ತಿಳ್ಕೊಳ್ಳೋಣ ಬನ್ನಿ.

ಅದು ಯಾವ ಚಹಾ ಅಂತ ತಲೆ ಕೆಡಿಸ್ಕೊತಿದ್ದೀರ? ಅದು ನೀಲಿ ಚಾ, ಅಂದ್ರೆ ಬ್ಲ್ಯೂ ಟೀ. ಇದ್ಯಾವ್ದಪ್ಪ ಬ್ಲ್ಯೂ ಟೀ ಅಂತೀರಾ? ನೀಲಿ ಚಾ ಅಂದ್ರೆ ನಮ್ಮ, ನಿಮ್ಮ ಮನೆಯ ಎದುರು, ಬೇಲಿಗಳಲ್ಲಿ ಇರುತ್ತಲ್ಲ ಶಂಖಪುಷ್ಪ? ಅದರ ಟೀ.

ಹೌದು ಶಂಖಪುಷ್ಪ ಗಿಡ ಹೂವಿನಲ್ಲಿ ಹಲವು ಬಗೆಯ ಔಷಧೀಯ ಗುಣಗಳಿವೆ. ಇದರಲ್ಲಿರುವ ಗುಣಗಳು ಮತ್ತು ಪೋಷಕಾಂಶಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದರೊಂದಿಗೆ, ದೇಹದ ಅನೇಕ ಸಮಸ್ಯೆಗಳನ್ನು ಪರಿಹರಿಸಬಹುದು. ಇದು ಆಂಟಿಬ್ಯಾಕ್ಟೀರಿಯಲ್, ಆಂಟಿಫಂಗಲ್, ಆಂಟಿಆಕ್ಸಿಡೆಂಟ್ ಮತ್ತು ಆಂಟಿ ಡಯಾಬಿಟಿಕ್ ಗುಣಲಕ್ಷಣಗಳನ್ನು ಹೊಂದಿದ್ದು ಅದು ನಿಮ್ಮನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

ನಿಮಗೂ ಇದೆಲ್ಲ ಪ್ರಯೋಜನ ಬೇಕಂದ್ರೆ ನಾಳೆಯಿಂದಲೇ ನೀವು ಈ ಚಹಾ ಕುಡಿಯೋದಕ್ಕೆ ಶುರು ಮಾಡಬಹುದು.

ನಿಮಗೆ ಒಬೆಸಿಟಿ ಅಥವಾ ತೂಕದ ಸಮಸ್ಯೆ ಇದ್ರೆ ಈ ಟೀ ಕುಡೀಬಹುದು. ಇದು ಮೆಟಾಬಲಿಸಂ ಪ್ರಕ್ರಿಯೆಯನ್ನ ವೇಗಗೊಳಿಸುವುದರ ಜೊತೆಗೆ ಕೊಬ್ಬು ಕರಗಿಸೋದಕ್ಕೆ ಸಹ ಸಹಾ ಮಾಡುತ್ತೆ. ಇದನ್ನ ದಿನಾ ಕುಡಿದ್ರೆ ನಿಮ್ಮ ತೂಕ ಕಳೆದುಕೊಳ್ಳುವ ಪ್ರಯತ್ನಕ್ಕೆ ಖಂಡಿತಾ ವೇಗ ಸಿಗುತ್ತೆ.

ಹೃದಯಕ್ಕೆ ಪ್ರಯೋಜನಕಾರಿ

ಈ ಹೂವಿನಲ್ಲಿ Antioccident ಅಂಶವು ಹೇರಳವಾಗಿದ್ದು, ಇದು Free radical damage ನಿಂದ ರಕ್ಷಿಸುತ್ತದೆ. ನೀವು ಇದನ್ನು ನಿಯಮಿತವಾಗಿ ಸೇವಿಸಿದರೆ, ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್‌ ವಿರುದ್ಧ ಕೆಲಸ ಮಾಡುತ್ತದೆ. ಇದರಿಂದಾಗಿ ಬಿಪಿ ನಿಯಂತ್ರಿಸಲ್ಪಡುತ್ತದೆ ಮತ್ತು ಒಟ್ಟಾರೆ ಹೃದಯದ ಆರೋಗ್ಯಕ್ಕೆ ಇದು ತುಂಬಾ ಪ್ರಯೋಜನಕಾರಿ. ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸಕ್ಕರೆ ಕಾಯಿಲೆ


ಶಂಖಪುಷ್ಪ ಹೂವು ಮಧುಮೇಹ ವಿರೋಧಿ ಗುಣಗಳನ್ನು ಹೊಂದಿದೆ. ಇದು ದೇಹದಲ್ಲಿ ಇನ್ಸುಲಿನ್ ಹೆಚ್ಚಳವನ್ನು ತಡೆಯಲು ಸಹಾಯ ಮಾಡುತ್ತದೆ, ಇದರಿಂದಾಗಿ ರಕ್ತದಲ್ಲಿ ಸಕ್ಕರೆಯ ಸಮಸ್ಯೆ ಉದ್ಭವಿಸುವುದಿಲ್ಲ. ಈ ಚಹಾವು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ.

ರೋಗನಿರೋಧಕ ಶಕ್ತಿ

ಶಂಖಪುಷ್ಪ ಹೂವಿನ ಚಹಾದಲ್ಲಿ Anitoccident ಅಂಶವು ಸಮೃದ್ಧವಾಗಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಇರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದರೊಂದಿಗೆ, ನೀವು ಅನೇಕ ರೋಗಗಳು ಮತ್ತು ಸೋಂಕುಗಳಿಂದ ಸುರಕ್ಷಿತವಾಗಿರಬಹುದು.

ನಿದ್ರಾಹೀನತೆ

ನೀವು ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ, ಶಂಖಪುಷ್ಪ ಹೂವಿನ ಚಹಾವನ್ನು ಕುಡಿಯಿರಿ. ಇದರಲ್ಲಿರುವ ಔಷಧೀಯ ಗುಣ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಖಿನ್ನತೆ ಮತ್ತು ಆತಂಕದ ಲಕ್ಷಣಗಳನ್ನು ಕಡಿಮೆ ಮಾಡಿ ಉತ್ತಮ ನಿದ್ರೆ ಹೊಂದಲು ಸಹಾಯ ಮಾಡುತ್ತದೆ.

ಶಂಖಪುಷ್ಪ ಅಥವಾ ಬ್ಲ್ಯೂ ಟೀ ಮಾಡುವ ವಿಧಾನ

ಶಂಖಪುಷ್ಪ ಹೂವಿನ ಚಹಾ ಮಾಡಲು, ಪಾತ್ರೆಯೊಂದರಲ್ಲಿ ಒಂದು ಕಪ್‌ ನೀರು ಹಾಕಿ ಒಲೆಯ ಮೇಲಿಡಿ.

ನೀರು ಉಗುರುಬೆಚ್ಚಗಾದ ನಂತರ ಅದರಲ್ಲಿ 4ರಿಂದ 5 ಶಂಖಪುಷ್ಪದ ಹೂಗಳನ್ನು ಹಾಕಿ ಕುದಿಸಿ.

5ರಿಂದ 7 ನಿಮಿಷಗಳ ಕಾಲ ಕುದಿಸಿದ ನಂತರ, ಅದನ್ನು ಫಿಲ್ಟರ್ ಮಾಡಿ ಮತ್ತು ಹೂವನ್ನು ಎಸೆಯಿರಿ.

ರುಚಿಗೆ ಬೇಕಿದ್ದಲ್ಲಿ ಒಂದಷ್ಟು ಜೇನುತುಪ್ಪ ಬೆರೆಸಿಕೊಂಡು ಕುಡಿಯಿರಿ.

Related Articles

ಇತ್ತೀಚಿನ ಸುದ್ದಿಗಳು