Friday, June 14, 2024

ಸತ್ಯ | ನ್ಯಾಯ |ಧರ್ಮ

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಇನ್ನೊಂದು ಚಿರತೆ ಸಾವು: ಎಂಟಕ್ಕೇರಿದ ಸಾವಿನ ಸಂಖ್ಯೆ್

ಆಫ್ರಿಕಾದಿಂದ ತರಿಸಲಾಗಿದ್ದ ಚಿರತೆಗಳಲ್ಲಿ ಸೂರಜ್‌ ಹೆಸರಿನ ಗಂಡು ಚಿರತೆಯು ಶುಕ್ರವಾರ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ (ಕೆಎನ್‌ಪಿ) ಸಾವನ್ನಪ್ಪಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ವರ್ಷದ ಮಾರ್ಚ್‌ ತಿಂಗಳಿನಿಂದ ಈಚೆಗೆ ಒಟ್ಟು ಸಾವನ್ನಪ್ಪಿದ ಚಿರತೆಗಳ ಸಂಖ್ಯೆ ಇದರೊಂದಿಗೆ ಎಂಟಕ್ಕೆ ತಲುಪಿದೆ.

ಮೂರು ದಿನಗಳ ಹಿಂದೆಯಷ್ಟೇ ಮತ್ತೊಂದು ಗಂಡು ಚಿರತೆ ತೇಜಸ್ ಇದೇ ಉದ್ಯಾನವನದಲ್ಲಿ ತೀರಿಕೊಂಡಿತ್ತು.

ಶುಕ್ರವಾರ ಬೆಳಗ್ಗೆ ಪಾಲ್ಪುರ ಪೂರ್ವ ಅರಣ್ಯ ವ್ಯಾಪ್ತಿಯ ಮಸವಾನಿ ಬೀಟ್‌ನಲ್ಲಿ ಸೂರಜ್ ನಿಶ್ಚಲ ಸ್ಥಿತಿಯಲ್ಲಿ ಬಿದ್ದಿರುವುದು ನಿಗಾ ತಂಡಕ್ಕೆ ಕಾಣಿಸಿದೆ. ಹತ್ತಿರ ಹೋಗಿ ನೋಡಿದಾಗ ಅದರ ಕುತ್ತಿಗೆಯ ಮೇಲೆ ಕೀಟಗಳು ಸುಳಿದಾಡುವುದನ್ನು ಅವರು ನೋಡಿದ್ದರು. ಆದರೆ ಆಗ ಅದು ಅಲ್ಲಿಂದ ಎದ್ದು ಓಡಿ ಹೋಗಿತ್ತು. ಪಶುವೈದ್ಯರು ಮತ್ತು ಅರಣ್ಯಾಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿದ್ದು, ಬೆಳಗ್ಗೆ 9 ಗಂಟೆ ಸುಮಾರಿಗೆ ಚಿರತೆ ಮೃತಪಟ್ಟಿರುವುದು ಪತ್ತೆಯಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

“ಫ್ರೀ ರೇಂಜಿನಲ್ಲಿ ಚಿರತೆ ಮರಣಿಸಿರುವುದು ಇದೇ ಮೊದಲು” ಎಂದು ಅವರು ಹೇಳಿದರು. ಅದರ ಬೆನ್ನು ಮತ್ತು ಕುತ್ತಿಗೆಯ ಮೇಲೆ ಗಾಯದ ಗುರುತುಗಳಿದ್ದವು ಮತ್ತು ಈ ಕುರಿತಾಗಿ ವಿವರವಾದ ವರದಿಯನ್ನು ಎದುರುನೋಡಲಾಗುತ್ತಿದೆ ಎಂದು ಅಧಿಕಾರಿ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು