Sunday, June 23, 2024

ಸತ್ಯ | ನ್ಯಾಯ |ಧರ್ಮ

PES ಕಾಲೇಜು ವಿದ್ಯಾರ್ಥಿ ಆತ್ಮಹ*ತ್ಯೆ: ನಿಜಕ್ಕೂ ನಡೆದಿದ್ದು ಏನು?

ಬೆಂಗಳೂರಿನ ಪಿಇಎಸ್ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಆತ್ಮಹ*ತ್ಯೆ ಪ್ರಕರಣ ಸಂಬಂಧಿಸಿದಂತೆ ಆತನ ತಾಯಿ ಫೇಸ್ ಬುಕ್ ನಲ್ಲಿ ಘಟನೆ ಸಂಬಂಧಿಸಿದಂತೆ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದು, ಘಟನೆಯಲ್ಲಿ ಕಾಲೇಜು ಸಿಬ್ಬಂದಿಯ ಪಾತ್ರವನ್ನು ವಿವರಿಸಿದ್ದಾರೆ. ವಿದ್ಯಾರ್ಥಿ ತಾಯಿ ಹಂಚಿಕೊಂಡಿರುವ ಆಘಾತಕಾರಿ ಮಾಹಿತಿ ಗಮನಿಸಿದರೆ, ಕಾಲೇಜಿನ ಸಿಬ್ಬಂದಿ ನಿರ್ದಯವಾಗಿ, ಬೇಜವಾಬ್ದಾರಿಯಿಂದ ನಡೆದುಕೊಂಡಿರುವುದು ಸ್ಪಷ್ಟವಾಗುತ್ತದೆ.

ಆತ್ಮಹತ್ಯೆಗೆ ಒಳಗಾದ ಯುವಕನ ತಾಯಿ‌ ಹೇಳಿರುವುದೇನು? ಯುವಕನ ಫೇಸ್ ಬುಕ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಲಾಗಿರುವ ವಿಷಯಗಳ ಪೂರ್ಣ ಪಾಠ ಇಲ್ಲಿದೆ.

ನಾನು ಆದಿತ್ಯ ಪ್ರಭುವಿನ ತಾಯಿ. ಅದಿತ್ಯ (19 ವರ್ಷ) ಆರ್‌ಆರ್ ರೋಡ್ ಕ್ಯಾಂಪಸ್‌ನ ಪಿಇಎಸ್ ಕಾಲೇಜಿನ ಸಿಎಸ್‌ಇ ಮೊದಲನೇ ವರ್ಷದ ವಿದ್ಯಾರ್ಥಿ. ಜುಲೈ 17 ರಂದು ಆದಿತ್ಯ ಕ್ಯಾಂಪಸ್‌ನ ಕಟ್ಟಡದ 8 ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಆದಿತ್ಯ ಪರೀಕ್ಷೆಯಲ್ಲಿ ನಕಲು ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ ಎಂದು ಕಾಲೇಜಿನವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅವನನ್ನು ಹಿಡಿದು ಕೌನ್ಸೆಲಿಂಗ್ ನಡೆಸಿ ಪೋಷಕರಿಗೆ ತಿಳಿಸುತ್ತೇವೆ ಎಂದು ಹೇಳಿದಾಗ ಕಟ್ಟಡದಿಂದ ಜಿಗಿದಿದ್ದಾನೆ. ಆದರೆ ನಾನು ಇಲ್ಲಿ ನಮ್ಮ ಕಡೆಯ ಕಥೆಯನ್ನು ಹೇಳುತ್ತೇನೆ.

ಜುಲೈ 17, ಬೆಳಿಗ್ಗೆ 11:45 ಕ್ಕೆ ಆದಿತ್ಯ ನನಗೆ ಫೋನ್ ಮಾಡಿದ್ದ. ಫೋನನ್ನು ಬ್ಯಾಗ್‌ ನಲ್ಲಿ ಇಡಲು ಮರೆತಿದ್ದೆ ಮತ್ತು ಫೋನ್ ಪ್ಯಾಂಟ್ ಜೇಬಿನಲ್ಲಿಯೇ ಮರೆತು ಬಿಟ್ಟಿದ್ದೆ ಎಂದು ಹೇಳಿದ. ಪರೀಕ್ಷೆಯ ಮಧ್ಯ ಇದು ನೆನಪಾಗಿ ಫೋನನ್ನು ಬೆಂಚ್ ಅಥವಾ ನೆಲದ ಮೇಲೆ ದೂರದಲ್ಲಿ ಇಟ್ಟುಬಿಟ್ಟ (ನನಗೆ ಅವನ ಸರಿಯಾಗಿ ಮಾತುಗಳು ನೆನಪಿಲ್ಲ). ಅಲ್ಲದೆ ಫೋನ್ ಏರ್‌ಪ್ಲೇನ್ ಮೋಡ್‌ನಲ್ಲಿತ್ತು. ಇದನ್ನು ನೋಡಿದ ಪರೀಕ್ಷಾ ಸಿಬ್ಬಂದಿ ಅವನನ್ನು ಹಿಡಿದರು. ನಂತರ ಅವನು ಪರೀಕ್ಷೆ ಬರೆದು ಮುಗಿಸಿದ.

ಇದರ ನಂತರ ಅವನಿಗೆ ಅವರು ಕಿರುಕುಳ ನೀಡುತ್ತಿದ್ದರು ಎಂದು ಆದಿತ್ಯ ಹೇಳಿದ್ದ. ಇಂತಹ ಕೆಲಸ ಮಾಡುವುದಕ್ಕಿಂತ ಸಾಯುವುದೇ ಮೇಲು ಎಂದು ಹೇಳಿದ್ದರು. ನನ್ನನ್ನು ಕಾಲೇಜಿಗೆ ಬರುವಂತೆ ಹೇಳಿದ್ದಾರೆ. ಸ್ವಲ್ಪ ಸಮಯದ ನಂತರ ಕಾಲೇಜಿನವರು ನನ್ನನ್ನು ಕಾಲೇಜಿಗೆ ಬರಲು ಫೋನ್‌ ಮಾಡಿ ಹೇಳಿದರು. ಪರೀಕ್ಷೆ ಮುಗಿಯಲು ಕೇವಲ 4 ನಿಮಿಷಗಳು ಬಾಕಿ ಇರುವಾಗ, ಅಂದರೆ 11:26 ಕ್ಕೆ ಇನ್ವಿಸಿಲೇಟರ್‌ ಆದಿತ್ಯನ ಮೊಬೈಲ್ ನೋಡಿದ್ದಾರೆ ಎಂದು ತರಗತಿಯಲ್ಲಿದ್ದ ಇತರ ವಿದ್ಯಾರ್ಥಿಗಳಿಂದ ನನಗೆ ಆಮೇಲೆ ತಿಳಿಯಿತು. ನಾನು ಕಾಲೇಜಿಗೆ ತಲುಪಿದಾಗ ಕಚೇರಿಯಲ್ಲಿ ಯಾರೂ ಇರದಿದ್ದರಿಂದ ನನಗೆ ಕಾಯಲು ಹೇಳಿದರು. ನಾನು ಸುಮಾರು 1 ಗಂಟೆ ಕಾಲ ಕಾದಿದ್ದೇನೆ. ನಂತರ ಮೆಂಟರ್ ಮತ್ತು ಸಿಒಇ ಬಂದರು.

ನನ್ನನ್ನು ಕಚೇರಿಗೆ ಕರೆದರು. ಆದರೆ ಅವರು ಆದಿತ್ಯನನ್ನು ಹುಡುಕುತ್ತಿದ್ದರು. ಆದಿತ್ಯನಿಗೆ ಅಲ್ಲೇ ಕುಳಿತುಕೊಳ್ಳಲು ಹೇಳಿದ್ದಾಗಿ ತಿಳಿಸಿದರು. ಸುತ್ತ ಮುತ್ತ ಇದ್ದವರಲ್ಲಿ ಕೇಳಿದಾಗ ಅವನು ಅಲ್ಲೇ ಕುಳಿತಿದ್ದಾಗಿ ಹೇಳಿದರು. ನಂತರ ಇಲ್ಲೇ ಎಲ್ಲೋ ಸ್ನೇಹಿತರೊಂದಿಗೆ ಸುತ್ತಾಡುತ್ತಿರಬೇಕು ಎಂದು ಅವರು ನನಗೆ ಹೇಳಿದರು. ಅವನ ಮೇಲೆ ಇಂತಹ ಗಂಭೀರ ಆರೋಪ ಮಾಡಿರುವಾಗ ಅವನು ಸ್ನೇಹಿತರೊಂದಿಗೆ ಹೊರಗೆ ಹೋಗಲು ಹೇಗೆ ಸಾಧ್ಯ ಎಂದು ನಾನು ಕೇಳಿದೆ. ನಾನು ಸಿಸಿ ಟಿವಿ ಕ್ಯಾಮೆರಾಗಳನ್ನು ಚೆಕ್‌ ಮಾಡಲು ಒತ್ತಾಯಿಸಿದೆ ಮತ್ತು ಅವನು ಅಲ್ಲಿ ಕುಳಿತುಕೊಳ್ಳದಿದ್ದರೆ ಅವನಿಗೆ ಏನಾದರೂ ಅಪಾಯದ ಉಂಟಾಗಿರಬಹುದು ಎಂದು ನಾನು ಒತ್ತಾಯಿಸಲು ಪ್ರಾರಂಭಿಸಿದೆ. ಅವನು ಸ್ನೇಹಿತರೊಂದಿಗೆ ಹೊರಗಿದ್ದಾನೆ ಎಂದು ಅವರು ಮತ್ತೆ ಮತ್ತೆ ಹೇಳುತ್ತಲೇ ಇದ್ದರು. ಸ್ವಲ್ಪ ಸಮಯದ ನಂತರ ಅವರು ಫೋನ್‌ ಮಾಡಲು ಪ್ರಾರಂಭಿಸಿದರು. ನಂತರ ಅವರು ಹೊರಗೆ ಧಾವಿಸಿದರು. ನಾನೂ ಅವರನ್ನು ಹಿಂಬಾಲಿಸಿದೆ. ನಾವು ಸಾಕಷ್ಟು ನಡೆದು ಕ್ಯಾಂಪಸ್‌ನ ಇನ್ನೊಂದು ತುದಿಗೆ ಬಂದೆವು.
ಆಗಾಗಲೇ ಆಂಬ್ಯುಲೆನ್ಸ್ ಮತ್ತು ಪೋಲಿಸರನ್ನು ನಾನು ನೋಡಿದ್ದೆ. ಆಗ ನಾನು ನನ್ನ ಮಗನಿಗೆ ಏನಾಯಿತು ಎಂದು ಕೂಗಲು ಪ್ರಾರಂಭಿಸಿದೆ. ಎಷ್ಟು ಕೂಗಿಕೊಂಡರೂ ಅವನು ಜೀವದಲ್ಲಿ ಇಲ್ಲ ಎಂದು ತಿಳಿಯಿತು. ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬದುಕಿಸಿ ಎಂದು ಕೇಳಿಕೊಂಡೆ. ನನಗೆ ಅವರು ಹೇಳಿದ್ದನ್ನು ಇನ್ನೂ ನಂಬಲಾಗುತ್ತಿಲ್ಲ… ಮೊದಲು ಅವನನ್ನು ಗುರುತಿಸಿ ಹೇಳಿಕೆಗೆ ಸಹಿ ಹಾಕಿ ಮತ್ತು ನಂತರ ಆಸ್ಪತ್ರೆಗೆ ಕರೆದೊಯ್ದು ಬದುಕಿಸಲು ಪ್ರಯತ್ನಿಸುತ್ತಾರೆ ಎಂದು ಹೇಳಿದರು. ನಾನು ಒಬ್ಬಳೇ ಇದ್ದರೂ, ನನ್ನ ಮಗನ ಶವವನ್ನು ಗುರುತಿಸಲು ನನ್ನನ್ನು 2 – 3 ಮಂದಿ ಹಿಡಿದುಕೊಂಡು ಕರೆದೊಯ್ದರು. ಎಷ್ಟು ಅಮಾನವೀಯವಾಗಿ ನಡೆದುಕೊಂಡರು…. ನಾನು ಇದು ಆದಿತ್ಯ ಎಂದು ಒಪ್ಪಿಕೊಂಡೆ, ಅವರು ನನಗೆ ಸಹಿ ಮಾಡಲು ಏನೋ ಕೊಟ್ಟರು. ನಾನು ಸಹಿ ಮಾಡಿದ ತಕ್ಷಣ ಆದಿತ್ಯನನ್ನು ಆಸ್ಪತ್ರೆಗೆ ಕರೆದೊಯ್ಯುತ್ತೇವೆ ಎಂದು ಹೇಳಿದರು. ಮತ್ತೆ ಮತ್ತೆ ನನಗೆ ಸಹಿ ಹಾಕುವಂತೆ ಒತ್ತಡ ಹೇರಿದರು.

ಬಹುಶಃ ಹೀಗೆ ಮಾಡಿ ಇಡೀ ಪ್ರಕರಣದಿಂದ ಅವರು ಕೈ ತೊಳೆದುಕೊಳ್ಳುವ ಸಂಗತಿಯಾಗಿತ್ತು. ನಾನು ಒಬ್ಬಂಟಿಯಾಗಿದ್ದರಿಂದ ಅವರು ನನ್ನ ಭಾವುಕ ಸ್ಥಿತಿಯನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ನನ್ನ ಸ್ನೇಹಿತರೊಬ್ಬರು ತಕ್ಷಣ ಬಂದ. ಅವನು ನನ್ನ ಕುಟುಂಬ ಬರುವವರೆಗೆ ಯಾವುದಕ್ಕೂ ಸಹಿ ಹಾಕಬೇಡ ಎಂದು ಹೇಳಿದ. ನಂತರ ನನ್ನ ಕುಟುಂಬದವರು ಮತ್ತು ಸ್ನೇಹಿತರು ಬಂದು ತನಿಖೆಗೆ ಒತ್ತಾಯಿಸಿದರು. ಆ ನಂತರವೇ ಫೋರೆನ್ಸಿಕ್ ತಂಡವನ್ನು ಕರೆಸಿ, ಶ್ವಾನ ದಳವನ್ನು ಕರೆಸಿ, ಸಿಸಿಟಿವಿ ಕ್ಯಾಮೆರಾಗಳನ್ನು ಚೆಕ್‌ ಮಾಡಿದರು. ಪೊಲೀಸರು ಎಲ್ಲರಿಗೂ ಪ್ರಶ್ನೆಗಳನ್ನು ಕೇಳಿ ಅವರಿಗಂದ ಹೇಳಿಕೆಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು. ಇದು ಸಂಜೆ 7:30 ರವರೆಗೆ ನಡೆಯಿತು. ಕಾಲೇಜಿನ ಒಬ್ಬನೇ ಒಬ್ಬ ವ್ಯಕ್ತಿ, ಡೀನ್, ಸಿಇಒ, ಪ್ರಾಧ್ಯಾಪಕರು, ಆದಿತ್ಯನ ಮೆಂಟರ್ ಅಲ್ಲಿಗೆ ಬರಲಿಲ್ಲ. ಅಡ್ಮಿನ್ ಮಾತ್ರ ಹಾಜರಿದ್ದರು. 7:30 ಕ್ಕೆ, ವಿಸಿ ನಮ್ಮನ್ನು ಭೇಟಿ ಮಾಡಿ ವಿಷಾದ ವ್ಯಕ್ತಪಡಿಸಿದರು. ಘಟನೆಯಿಂದ ಅವರಿಗೂ ನೋವಾಗಿದೆ ಎಂದು ಹೇಳಿದರು.

ನನ್ನಲ್ಲಿ ಕೆಲವು ಪ್ರಶ್ನೆಗಳಿವೆ

  1. ಅವರು ಪರೀಕ್ಷಡ ಮುಗಿಯಲು ಕೇವಲ 4 ನಿಮಿಷಗಳು ಉಳಿದಿರುವಾಗ, ಅಂದರೆ 11:26am ಕ್ಕೆ ಅವನನ್ನು ಹಿಡಿದಿದ್ದಾರೆ ಎಂದರೆ, ಇಡೀ 2 ಗಂಟೆ 56 ನಿಮಿಷಗಳ ಕಾಲ ಅವನು ನಕಲು ಮಾಡುವಾಗ ಇಬ್ಬರು ಇನ್ವಿಸಿಲೇಟರ್‌ಗಳು ಏನು ಮಾಡುತ್ತಿದ್ದರು? ಆಗ ಅವರಿಗೆ ಏನೂ ಕಾಣಿಸಲಿಲ್ಲವೇ? 11:56 ಕ್ಕೆ, ಅವರು ನಕಲು ಮಾಡುವಾಗ ಸಿಕ್ಕಿಬಿದ್ದರೆ ಅವರು ಪರೀಕ್ಷೆಯನ್ನು ಪೂರ್ಣಗೊಳಿಸಲು ಅವನಿಗೆ ಅವಕಾಶ ನೀಡಬಹುದೇ?
  2. ಅವನು ಮೋಸ ಮಾಡಿದ್ದರೆ ಸರಿಯಾದ ಕ್ರಮ ತೆಗೆದುಕೊಳ್ಳಿ. ವಿದ್ಯಾರ್ಥಿನಿಗೇಕೆ ಮಾನಸಿಕ ಕಿರುಕುಳ ನೀಡಿದ್ದೀರಿ?
  3. ಅವನನ್ನು ಡಿಟೈನ್‌ ಮಾಡಿದ ಮೇಲೆ ಅವನ ಮೇಲೆ ಯಾಕೆ ನಿಗಾ ಇಟ್ಟಿಲ್ಲ? ಅವನ ಮೇಲೆ ಇಂತಹ ಗಂಭೀರ ಆರೋಪಗಳನ್ನು ಮಾಡಿದ ನಂತರ ಅವನ ಜೊತೆ ಯಾರಾದರೂ ಇರಬೇಕಲ್ಲವೇ? ಅವನು 19 ವರ್ಷ ವಯಸ್ಸಿನ ಹುಡುಗ. ಕೆಲವರು ತುಂಬಾ ಸೆನ್ಸಿಟಿವ್‌ ಆಗಿರುತ್ತಾರೆ. ಮಾನಸಿಕವಾಗಿ ಘಾಸಿಗೊಂಡಿರುವ ಅವನನ್ನು ಹೇಗೆ ಒಂಟಿಯಾಗಿರಲು ಹೇಗೆ ಬಿಟ್ಟರು?
  4. ಅಮೇಲೆ ನನಗೆ ಗೊತ್ತಾಯಿತು, ಕಾಲೇಜಿನವರು ಪೊಲೀಸರಿಗೆ ಮಹಡಿಯಿಂದ ಜಿಗಿದ ಈ ಹುಡುಗ ತಮ್ಮ ಕಾಲೇಜು ವಿದ್ಯಾರ್ಥಿಯಲ್ಲ, ಯಾರೋ ಹೊರಗಿನವ ಎಂದು ಹೇಳಿದ್ದರು. ಮೃತದೇಹವನ್ನು ಅಲ್ಲಿಂದ ಸ್ಥಳಾಂತರಿಸಲು ಪೊಲೀಸರ ಮೇಲೆ ಒತ್ತಡ ಹೇರಿದರು. ನಾನು ಮಧ್ಯಾಹ್ನ 12:50 ರಿಂದ ಕಾಲೇಜಿನಲ್ಲಿ ಕಾಯುತ್ತಿದ್ದೆ. ನಾನು ಮಧ್ಯಾಹ್ನ 2:15 ರ ಸುಮಾರಿಗೆ ಶವವನ್ನು ನೋಡಿದೆ. ಈತನ ಸಾವಿನ ಬಗ್ಗೆ ಕಾಲೇಜಿಗೆ ಮೊದಲೇ ಗೊತ್ತಿದ್ದರೂ ನನಗೆ ಯಾಕೆ ತಿಳಿಸಿರಲಿಲ್ಲ?
    ಏಕೆಂದರೆ ಶವವನ್ನು ತಮ್ಮ ಕ್ಯಾಂಪಸ್‌ನಿಂದ ಹೊರಕ್ಕೆ ಎಸೆದು ಕೈ ತೊಳೆಯಬೇಕೆಂದು ಪ್ಲಾನ್‌ ಮಾಡಿದ್ದರು. ಅವರು ತಮ್ಮ ಕಾಲೇಜಿನ ಖ್ಯಾತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಇದೆಲ್ಲವನ್ನೂ ತಡೆಯಬಹುದಿತ್ತಲ್ಲವೇ? ನನ್ನ ಮಗನಿಗೆ ಕಿರುಕುಳ ನೀಡದಿದ್ದರೆ, ಹಿಂಸಾತ್ಮಕವಾಗಿ ಅವನ ಜೊತೆ ಕಠಿಣವಾಗಿ ಮಾತನಾಡದಿದ್ದರೆ, ಅವನನ್ನು ಒಬ್ಬಂಟಿಯಾಗಿ ನಿಗಾ ಇಡದೆ ಬಿಡದಿದ್ದರೆ, ಬಹುಶಃ ಈ ದುರ್ಘಟನೆಯನ್ನು ತಪ್ಪಿಸಬಹುದಿತ್ತು. ನನ್ನ ಮಗನ ಜೊತೆ ಇರಬೇಕಾದುದು ಗುರುವಿನ ಕರ್ತವ್ಯವಾಗಿರಲಿಲ್ಲವೇ?

ತಮಗೂ ಅದೇ ರೀತಿಯ ತೀವ್ರ ಕಿರುಕುಳ ನೀಡಲಾಗಿದೆ ಎಂದು ವಿದ್ಯಾರ್ಥಿಗಳು ಮುಂದೆ ಬಂದು ಹೇಳಲು ಶುರು ಮಾಡಿದ್ದಾರೆ. ಆದರೆ ಅವರ ಕೆರಿಯರ್‌ ಮುಗಿಸುವುದಾಗಿ ಧಮ್ಕಿ ಹಾಲಾಗಿದೆ. ಅವರ ಜೀವನ ನಾಶವಾಗಿ ಎಂದಿಗೂ ಕೆಲಸ ಸಿಗದಂತೆ ಮಾಡುವುದಾಗಿ ಎಂದು ಅವರಿಗೆ ಹೇಳಲಾಯಿತು. ನನ್ನ ಹುಡುಗ ತನ್ನ ಘನತೆಗೆ ಕಳಂಕ ಬಂದಾಗ ಹೆದರಿ ಈ ನಿರ್ಧಾರ ತೆಗೆದುಕೊಂಡಿದ್ದಾನೆ.

ಉದ್ದೇಶಪೂರ್ವಕವಾಗಿ ಮಾಡದಿದ್ದರೂ ಸಹ, ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ತೆಗೆದುಕೊಂಡು ಹೋಗಿದ್ದನ್ನು ನಾನು ಒಪ್ಪುವುದಿಲ್ಲ. ಆದರೆ ಈ ಕಠಿಣ ನಿರ್ಧಾರ ತೆಗೆದುಕೊಳ್ಳುವಷ್ಟು ಕಿರುಕುಳಕ್ಕೆ ನೀಡುವುದನ್ನು ಒಪ್ಪಲು ಸಾಧ್ಯವೇ ಇಲ್ಲ. ಅವರು ಅದಕ್ಕೆ ಅರ್ಹರಲ್ಲ. ಅವನನ್ನು ಒಂಟಿಯಾಗಿ ಬಿಡಲೂ ಸಾಧ್ಯವಿಲ್ಲ.

ಅವನ ಶವವನ್ನು ಮುಚ್ಚಿ ಅಪರಿಚಿತ ದೇಹವೆಂದು ಶವಾಗಾರಕ್ಕೆ ಸ್ಥಳಾಂತರಿಸಲು ಸಾಧ್ಯವಿಲ್ಲ. ಮರಣದ ನಂತರವೂ ಅವನು ಗೌರವಕ್ಕೆ ಅವನು ಅರ್ಹನಾಗಿದ್ದನು.

ಕಾಲೇಜು ತನ್ನ ತಪ್ಪನ್ನು ಒಪ್ಪಿಕೊಳ್ಳಬೇಕು. ಇಂತಹ ಸಂದರ್ಭಗಳಲ್ಲಿ ವಿದ್ಯಾರ್ಥಿಗಳ ಜೊತೆಗೆ ಅವರು ನಡೆದುಕೊಳ್ಳಬೇಕಾದ ಎಸ್.ಒ.ಪಿಯನ್ನು ಅವರು ಬದಲಾಯಿಸಬೇಕು. ಇದರಿಂದ ಭವಿಷ್ಯದಲ್ಲಿ ಇನ್ನೊಂದು ಜೀವ ಸಾವಿಗೆ ಬಲಿಯಾಗುವುದಿಲ್ಲ. ನಾನು ನನ್ನ ಮಗನ ಘನತೆಯನ್ನು ಉಳಿಸಲು ಪ್ರಯತ್ನಿಸುತ್ತೇನೆ. ಮೊಬೈಲ್ ಒಳಗೆ ತೆಗೆದುಕೊಂಡು ಹೋಗುವುದು ನಕಲು ಮಾಡಿ ಸಿಕ್ಕಿಬಿದ್ದಂತ ಅಪರಾಧವಾಲ್ಲ. ನನ್ನ ಮಗನಿಗೆ ನ್ಯಾಯ ಸಿಗಲೇ ಬೇಕು.
ಇದನ್ನು ಎಲ್ಲರಿಗೂ ಹಂಚಿ ನಮಗೆ ನೆರವಾಗಿ. ಒಬ್ಬ ವಿದ್ಯಾರ್ಥಿಗೆ ಅವನು ಜೀವವನ್ನು ತೆಗೆದುಕೊಳ್ಳುವಷ್ಟು ಅಮಾನವೀಯವಾಗಿ ನಡೆದುಕೊಳ್ಳಲು ಹೋಗಲೇ ಬಾರದು.
ಆದಿತ್ಯನಿಗೆ ನ್ಯಾಯ ಸಿಗಲು ದಯವಿಟ್ಟು ನಮ್ಮ ಜೊತೆಗೆ ಕೈ ಜೋಡಿಸಿ

Related Articles

ಇತ್ತೀಚಿನ ಸುದ್ದಿಗಳು