Wednesday, June 26, 2024

ಸತ್ಯ | ನ್ಯಾಯ |ಧರ್ಮ

‘ಮಿಸ್ಟರ್ ಕ್ರೈಮ್ ಮಿನಿಸ್ಟರ್ ಗೋ ಬ್ಯಾಕ್’ ಬ್ಯಾನರ್‌ ಹಾಕಿ‌ ಪ್ರಧಾನಿ ಮೋದಿ ಆಗಮನವನ್ನು ಪ್ರತಿಭಟಿಸಿದ ಪುಣೆ ಯುವ ಕಾಂಗ್ರೆಸ್

ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪುಣೆಗೆ ಭೇಟಿ ನೀಡುವುದಕ್ಕೂ ಮುನ್ನ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದಾದ್ಯಂತ ‘ಮೋದಿ ಗೋ ಬ್ಯಾಕ್’ ಎಂಬ ಭಿತ್ತಿಪತ್ರಗಳನ್ನು ಅಂಟಿಸಿದ್ದಾರೆ. ಮಣಿಪುರದ ಅಶಾಂತಿಯನ್ನು ವಿರೋಧಿಸಿ ಕಾಂಗ್ರೆಸ್‌ನ ಯುವ ಘಟಕವು ಪುಣೆ ನಗರದ ಕೆಲವು ಭಾಗಗಳಲ್ಲಿ ಪೋಸ್ಟರ್‌ಗಳನ್ನು ಹಾಕಿದೆ.

ಮಣಿಪುರದ ಹಿಂಸಾಚಾರ ಸೇರಿದಂತೆ ವಿವಿಧ ವಿಷಯಗಳ ವಿರುದ್ಧ ಪುಣೆಯಾದ್ಯಂತ ಪೋಸ್ಟರ್‌ಗಳನ್ನು ಹಾಕಲಾಗಿದೆ.

ಮಿಸ್ಟರ್ ಕ್ರೈಮ್ ಮಿನಿಸ್ಟರ್ ಗೋ ಬ್ಯಾಕ್ ಎಂದು ಪೋಸ್ಟರ್ ಒಂದರಲ್ಲಿ ಬರೆಯಲಾಗಿತ್ತು. ಇನ್ನೊಂದು ಪೋಸ್ಟರ್ ನಲ್ಲಿ ಮಿಸ್ಟರ್ ಪ್ರೈಮ್ ಮಿನಿಸ್ಟರ್, ಮಣಿಪುರಕ್ಕೆ ಹೋಗಿ, ಸಂಸತ್ತಿನತ್ತ ಮುಖ ಮಾಡಿ ಎಂದು ಬರೆಯಲಾಗಿತ್ತು. ಈ ಅನಧಿಕೃತ ಪೋಸ್ಟರ್‌ಗಳನ್ನು ತೆಗೆದುಹಾಕಲು ನಾವು ಪುಣೆ ಮುನ್ಸಿಪಲ್ ಕಾರ್ಪೊರೇಶನ್‌ನೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಪುಣೆಗೆ ಭೇಟಿ ನೀಡಲಿದ್ದು, ಅಲ್ಲಿ ದಗ್ಡೂ ಶೇಟ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಮತ್ತು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ.

ಮಣಿಪುರ ಗಲಭೆಯ ಕುರಿತು ಚರ್ಚಿಸದೆ ಮೋದಿ ಸದಾ ಪ್ರವಾಸದಲ್ಲಿರುವುದನ್ನು ವಿರೋಧಿಸಿ ಪುಣೆಯಲ್ಲಿ ವಿರೋಧ ಪಕ್ಷಗಳು ಹೋರಾಟ ಸಂಘಟಿಸಲು ಆಲೋಚಿಸಿವೆ.

Related Articles

ಇತ್ತೀಚಿನ ಸುದ್ದಿಗಳು