Tuesday, June 18, 2024

ಸತ್ಯ | ನ್ಯಾಯ |ಧರ್ಮ

ಅಮಿತ್ ಶಾ ಚಪ್ಪಲಿ ತರುತ್ತಿರುವ ವೀಡಿಯೊ ವೈರಲ್:  ಕೆಟಿಆರ್ ವಾಗ್ದಾಳಿ

ಹೈದರಾಬಾದ್: ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಕುಮಾರ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇವಸ್ಥಾನಕ್ಕೆ ಭೇಟಿ ನೀಡಿದಾಗ ಅವರ ಚಪ್ಪಲಿಯನ್ನು ತರುತ್ತಿರುವ ವಿಡಿಯೋ ವೈರಲ್ ಆಗಿದ್ದು,  ಈ ಕಾರಣ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ತೆಲಂಗಾಣ ಸಚಿವ ಹಾಗೂ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಪುತ್ರ ಕೆ.ಟಿ.ರಾಮರಾವ್‌ (ಕೆಟಿಆರ್) ನೇತೃತ್ವದಲ್ಲಿ ಟಿಆರ್‌ಎಸ್ ವಾಗ್ದಾಳಿ ನಡೆಸುತ್ತಿದ್ದು, ʼತೆಲಂಗಾಣ ಹೆಮ್ಮೆʼ ಎಂಬ ವೇದಿಕೆ ಮಾಡುವ ಮೂಲಕ ಅವರು ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ.

ರಾಜ್ಯದ ಜನರು 'ಗುಜರಾತ್ ಗುಲಾಮರನ್ನು'ವೀಕ್ಷಿಸುತ್ತಿದ್ದಾರೆ ಮತ್ತು ತೆಲಂಗಾಣದ'ಸ್ವಾಭಿಮಾನ'ವನ್ನು ಅವಹೇಳನ ಮಾಡುವ ಪ್ರಯತ್ನವನ್ನು ಹಿಮ್ಮೆಟ್ಟಿಸುತ್ತಾರೆ ಎಂದು "#TelanganaPride" ಎಂಬ ಹ್ಯಾಶ್‌ಟ್ಯಾಗ್ ಬಳಸಿ ವಾಗ್ದಾಳಿ ನಡೆಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು